ಅಮೆರಿಕಾ: ಉನ್ನತ ಹುದ್ದೆಗಳಿಗೆ ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳ ನೇಮಕ

By Suvarna Web DeskFirst Published Apr 8, 2017, 11:54 AM IST
Highlights

ಹಿರಿಯ ಕಾನೂನು ಸಲಹೆಗಾರರರಾದ ವಿಶಾಲ್ ಜೆ ಅಮೀನ್ ಹಾಗೂ ನಿಯೊಮಿ ರಾವ್ ಅವರನ್ನು ಬೌದ್ದಿಕ ಸ್ವಾಮ್ಯ ಜಾರಿ ಸಂಯೋಜಕರಾಗಿ ಹಾಗೂ ಮಾಹಿತಿ ಮತ್ತು ನಿಯಂತ್ರಣ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.

ವಾಷಿಂಗ್ಟನ್ (ಏ. 08): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಿಬ್ಬರು ಭಾರತೀಯ ಮೂಲದ ವ್ಯಕ್ತಿಗಳನ್ನು ಮಹತ್ವದ ಹುದ್ದೆಗಳಿಗೆ ನೇಮಿಸಿದ್ದಾರೆ.

ಹಿರಿಯ ಕಾನೂನು ಸಲಹೆಗಾರರರಾದ ವಿಶಾಲ್ ಜೆ ಅಮೀನ್ ಹಾಗೂ ನಿಯೊಮಿ ರಾವ್ ಅವರನ್ನು ಬೌದ್ದಿಕ ಸ್ವಾಮ್ಯ ಜಾರಿ ಸಂಯೋಜಕರಾಗಿ ಹಾಗೂ ಮಾಹಿತಿ ಮತ್ತು ನಿಯಂತ್ರಣ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.

ವಿಶಾಲ್ ಜೆ ಅಮೀನ್ ಈಗ ಸಂಸದೀಯ ನ್ಯಾಯಾಂಗ ಸಮಿತಿಯಲ್ಲಿ ಕಾನೂನು ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಹಿಂದೆ ಜಾರ್ಜ್ ಬುಶ್ ಆಡಳಿತಾವಧಿಯಲ್ಲಿ ವಿವಿಧ ಲಾಖೆಗಳಲ್ಲಿ ಮಹತ್ವದ ಸ್ಥಾನಗಳನ್ನು ವಿಶಾಲ್ ಅಮೀನ್ ಅಲಂಕರಿಸಿದ್ದಾರೆ.

ನಿಯೋಮಿ ರಾವ್ ಜಾರ್ಜ್ ಮೇಸನ್ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಾಂವಿಧಾನಿಕ ಹಾಗೂ ಆಡಳಿತಾತ್ಮಕ ಕಾನೂನು ವಿಷಯದಲ್ಲಿ ಪರಿಣತಿ ಹೊಂದಿದ್ದಾರೆ. ಈ ಹಿಂದೆಯು ಸರ್ಕಾರದ ವಿವಿಧ ಲಾಖೆಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ.

click me!