ಒಬಾಮಾರಿಂದ ಟೆಲಿಫೋನ್ ಕದ್ದಾಲಿಕೆ..?

By Suvarna Web DeskFirst Published Mar 5, 2017, 7:58 AM IST
Highlights

ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಪವಿತ್ರ ಚುನಾವಣೆ ವೇಳೆ ಅಧ್ಯಕ್ಷರಾಗಿದ್ದ ಒಬಾಮ ಇಷ್ಟು ಕೀಳುಮಟ್ಟಕ್ಕಿಳಿದಿದ್ದಾರೆ.

ವಾಷಿಂಗ್ಟನ್‌(ಮಾ.05): ಕಳೆದ ವರ್ಷ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ತಮ್ಮ ಕರೆಗಳನ್ನು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಕದ್ದಾಲಿಕೆ ಮಾಡಿದ್ದಾರೆ ಎಂಬ ಗುರುತರ ಆರೋಪವನ್ನು ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಡಿದ್ದಾರೆ. ಈ ಆರೋಪದ ಬಗ್ಗೆ ಸಾಕ್ಷ್ಯಾಧಾರಗಳನ್ನು ಅವರು ನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 
‘ಕೇವಲ ಚುನಾವಣೆ ಮಹತ್ವಕ್ಕಾಗಿ ಕಳೆದ ವರ್ಷದ(2016) ಅಕ್ಟೋಬರ್‌ನಲ್ಲಿ ಬರಾಕ್‌ ಒಬಾಮ ನನ್ನ ಕರೆಗಳನ್ನು ಕದ್ದಾಲಿಕೆ ಮಾಡಿದ್ದರು ಎಂಬ ಸತ್ಯವನ್ನು ಅನುಭವಿ ವಕೀಲರು ಹೊರಗೆಳೆಯುತ್ತಾರೆ ಎಂಬುದನ್ನು ನಾನು ಚಾಲೆಂಜ್‌ ಮಾಡಬಲ್ಲೆ' ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಪವಿತ್ರ ಚುನಾವಣೆ ವೇಳೆ ಅಧ್ಯಕ್ಷರಾಗಿದ್ದ ಒಬಾಮ ಇಷ್ಟು ಕೀಳುಮಟ್ಟಕ್ಕಿಳಿದಿದ್ದಾರೆ. ಇದಕ್ಕಾಗಿ ಒಬಾಮರನ್ನು ಕೆಟ್ಟವನು ಅಥವಾ ಅಸ್ವಸ್ಥ ವ್ಯಕ್ತಿ ಎನ್ನಬೇಕೆ ಎಂಬುದಾಗಿ ತಮ್ಮ ಮತ್ತೊಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ ಟ್ರಂಪ್‌.

ಆದರೆ ಒಬಾಮಾ ಅವರ ವಕ್ತಾರರು ಈ ಆರೋಪ ನಿರಾಕರಿಸಿದ್ದಾರೆ.

click me!