
ನವದೆಹಲಿ(ಮಾ.05): ರಿಲಯನ್ಸ್ ಜಿಯೋಗೆ ಸಡ್ಡು ಹೊಡೆಯುವ ಸಲುವಾಗಿ ಭಾರ್ತಿ ಏರ್'ಟೆಲ್ ಹೊಸ ಆಫರ್ ಪ್ರಕಟಿಸಿದೆ.
345 ರೂಪಾಯಿಗ 28 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 1 ಜಿಬಿ 4ಜಿ ಡೇಟಾ, ಜತೆಗೆ ಉಚಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆ ನೀಡುವುದಾಗಿ ಪ್ರಕಟಿಸಿದೆ. ಆದರೆ, ಇದನ್ನು ಹಗಲಿನಲ್ಲಿ (ಮುಂಜಾನೆ 6ರಿಂದ ರಾತ್ರಿ 12) 500 ಎಂಬಿ ಮತ್ತು ರಾತ್ರಿ(12ರಿಂದ ಮುಂಜಾನೆ 6)ವೇಳೆ 500 ಎಂಬಿ ಯಂತೆ ಬಳಕೆ ಮಾಡಿಕೊಳ್ಳಬೇಕು.
ಯಾವುದೇ ನಿಯಂತ್ರಣ ಇಲ್ಲದೇ ದಿನಕ್ಕೆ 1 ಜಿಬಿ ಡೇಟಾ ಬೇಕು ಎನ್ನುವವರಿಗೆ ತಿಂಗಳಿಗೆ 549 ರೂಪಾಯಿಯ ಆಫರ್ ಪ್ರಕಟಿಸಲಾಗಿದೆ. ಪ್ರತಿ ದಿನಕ್ಕೆ ಒಂದು ಜಿಬಿಯಂತೆ 28 ಜಿಬಿ ಡೇಡಾ ಲಭ್ಯವಾಗಲಿದೆ.
ಇನ್ನು ಜಿಯೋ ಪ್ರೈಮ್ ಸದಸ್ಯರಾದವರು 303ರೂಪಾಯಿ ರೀಚಾರ್ಜ್ ಮಾಡಿಸಿಕೊಂಡರೆ ಒಂದು ತಿಂಗಳು ಒಂದು ತಿಂಗಳು ಉಚಿತ ಕರೆ ಜೊತೆಗೆ ಯಾವುದೇ ನಿಯಂತ್ರಣವಿಲ್ಲದೆ ಪ್ರತಿದಿನ ಒಂದು ಜಿಬಿ 4ಜಿ ಡೇಟಾ ಬಳಸಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.