ಪಾಕ್ ಪ್ರಜೆಗಳಿಗೆ ಆಧಾರ್ ಪಡೆಯಲು ನೆರವು ನೀಡಿದ್ದು ವೈದ್ಯೆ

By Suvarna Web DeskFirst Published May 29, 2017, 4:21 PM IST
Highlights

ಆಧಾರ್ ಮಾಡಿಸಲು ಗೆಜೆಟೆಡ್ ಅಧಿಕಾರಿ ಸಹಾಯ ಮಾಡಿದ್ದರೆಂದು ಕೇರಳದ ಸಿಹಾದ್ ಹೇಳಿದ್ದ. ಬೆಂಗಳೂರಿನ ಜಯನಗರ ಸರ್ಕಾರಿ ಆಸ್ಪತ್ರೆ ವೈದ್ಯೆ ನಾಗಲಕ್ಷ್ಮಮ್ಮ ಪಾಕಿಸ್ತಾನಿ ಪ್ರಜೆಗಳಿಗೆ ಆಧಾರ್ ಪಡೆಯಲು ಸಹಾಯ ಮಾಡಿದ್ದಾರೆಂದು ಸಿಸಿಬಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟಿರುವ ಪಾಕಿಸ್ತಾನಿ ಪ್ರಜೆಗಳಿಗೆ ಆಧಾರ್ ಕಾರ್ಡ್ ಮಾಡಲು ನೆರವಾದ ವೈದ್ಯೆಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಆಧಾರ್ ಮಾಡಿಸಲು ಗೆಜೆಟೆಡ್ ಅಧಿಕಾರಿ ಸಹಾಯ ಮಾಡಿದ್ದರೆಂದು ಕೇರಳದ ಸಿಹಾದ್ ಹೇಳಿದ್ದ. ಬೆಂಗಳೂರಿನ ಜಯನಗರ ಸರ್ಕಾರಿ ಆಸ್ಪತ್ರೆ ವೈದ್ಯೆ ನಾಗಲಕ್ಷ್ಮಮ್ಮ ಪಾಕಿಸ್ತಾನಿ ಪ್ರಜೆಗಳಿಗೆ ಆಧಾರ್ ಪಡೆಯಲು ಸಹಾಯ ಮಾಡಿದ್ದಾರೆಂದು ಸಿಸಿಬಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ವೈದ್ಯೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಾಕ್ ಪ್ರಜೆಗಳಿಗೆ ಆಧಾರ್ ಕಾರ್ಡ್ ನೀಡುವಂತೆ ವೈದ್ಯೆ ಶಿಫಾರಸ್ಸು ಮಾಡಿದ್ದು, ವಿಚಾರಣೆ ವೇಳೆ ನಾನು ಅಮಾಯಕಿ ಎಂದು ಹೇಳಿದ್ದಾರೆ.

ಸಾಮಾನ್ಯ ಜನರು ಬರುವ ರೀತಿಯಲ್ಲೇ ಪಾಕ್​ ಪ್ರಜೆಗಳೂ ಬಂದಿದ್ರು, ಆಧಾರ್ ಕಾರ್ಡ್ ಪಡೆಯಲು ಸಹಿ ಬೇಕು ಅಂತಾ ಸಿಹಾದ್ ಬಂದಿದ್ದ, ಹಿಂದೆ ಸಹಿ ಹಾಕಿದಂತೆ ಬಾಡಿಗೆ ಅಗ್ರಿಮೆಂಟ್ ನೋಡಿ ಸಹಿ ಹಾಕಿದೆ ಎಂದು ಅವರು ಹೇಳಿದ್ದಾರೆನ್ನಲಾಗಿದೆ.

ಸಿಸಿಬಿ ತನಿಖೆಯಲ್ಲಿ ಮೊಲ್ನೋಟಕ್ಕೆ ಯಾವುದೇ ಉಗ್ರ ಚಟುವಟಿಕೆ ಕಂಡುಬಂದಿಲ್ಲ, ದೇಶದ ಭದ್ರತೆಗೆ ಹಾನಿಕಾರಕ ಸಂದೇಶಗಳು ಪತ್ತೆಯಾಗಿಲ್ಲ. ಸ್ಲೀಪರ್ ಸೆಲ್ ಬಳಕೆ ಮಾಡಿದ್ದಾರಾ ಎಂಬ ಶಂಕೆಯ ಮೇರೆಗೆ ತನಿಖೆ ಮುಂದುವರೆದಿದೆ.

ಕಳೆದ ಆರು ತಿಂಗಳಿಂದ ಕುಮಾರಸ್ವಾಮಿ ಲೇಔಟ್​’​ನಲ್ಲಿ ಕೇರಳದ ಯುವಕ ಹಾಗೂ ಅವನೊಂದಿಗೆ ವಾಸವಾಗಿದ್ದ ಮೂವರು ಪಾಕ್​ ಪ್ರಜೆಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಪಾಕ್​ ಪ್ರಜೆಗಳು ಆಧಾರ್​ ಕಾರ್ಡ್​ ಮತ್ತು ವೋಟರ್​ ಐಡಿಗಳನ್ನು ಮಾಡಿಸಿಕೊಂಡು ಭಾರತೀಯರಂತೆ ವಾಸವಾಗಿದ್ದರು.

click me!