ಎಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆಯೋ ಅಲ್ಲಿಯವರೆಗೆ ಭಾರತ-ಪಾಕ್ ಕ್ರಿಕೆಟ್ ಸಾಧ್ಯವಿಲ್ಲ

By Suvarna News WebFirst Published May 29, 2017, 4:10 PM IST
Highlights

ಭಯೋತ್ಪಾದನೆ ನಿಲ್ಲುವವವರಗೆ ಭಾರತ-ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯ ನಡೆಯುವ ಸಾಧ್ಯತೆಯಿಲ್ಲವೆಂದು ಕ್ರೀಡಾ ವಿಜಯ್ ಗೋಯಲ್ ಕೇಂದ್ರ ಸರ್ಕಾರದ ನಿಲುವನ್ನು ಪುನರುಚ್ಚಿಸಿದ್ದಾರೆ. ಎಲ್ಲಿಯವರೆಗೆ ಭಯೋತ್ಪಾದನೆ ಅಸ್ತಿತ್ವದಲ್ಲಿರುತ್ತದೆಯೋ ಅಲ್ಲಿಯವರೆಗೆ ಕ್ರಿಕೆಟ್ ಸಾಧ್ಯವಿಲ್ಲವೆಂದು ಹೇಳಿದ್ದಾರೆ.

ನವದೆಹಲಿ (ಮೇ.29): ಭಯೋತ್ಪಾದನೆ ನಿಲ್ಲುವವವರಗೆ ಭಾರತ-ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯ ನಡೆಯುವ ಸಾಧ್ಯತೆಯಿಲ್ಲವೆಂದು ಕ್ರೀಡಾ ವಿಜಯ್ ಗೋಯಲ್ ಕೇಂದ್ರ ಸರ್ಕಾರದ ನಿಲುವನ್ನು ಪುನರುಚ್ಚಿಸಿದ್ದಾರೆ. ಎಲ್ಲಿಯವರೆಗೆ ಭಯೋತ್ಪಾದನೆ ಅಸ್ತಿತ್ವದಲ್ಲಿರುತ್ತದೆಯೋ ಅಲ್ಲಿಯವರೆಗೆ ಕ್ರಿಕೆಟ್ ಸಾಧ್ಯವಿಲ್ಲವೆಂದು ಹೇಳಿದ್ದಾರೆ.

 2007 ರಿಂದ 2012 ರ ವರೆಗೆ 5 ವರ್ಷಗಳ ಕಾಲ ಎರಡೂ ದೇಶಗಳು ಕ್ರಿಕೆಟ್ ಆಡಿರಲಿಲ್ಲ. 2012-13 ರಲ್ಲಿ ಪಾಕಿಸ್ತಾನ ಭಾರತಕ್ಕೆ ಪ್ರವಾಸ ಬಂದಿದ್ದು 3 ಏಕದಿನ ಹಾಗೂ ಎರಡು ಟಿ-20 ಪಂದ್ಯಗಳನ್ನಾಡಿತ್ತು.

ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡಲು ಭಾರತಕ್ಕೆ ವಿರೋಧವೇನೂ ಇಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ಹೇಳಿರುವ ಹಿನ್ನಲೆಯಲ್ಲಿ ವಿಜಯ್ ಗೋಯಲ್ ಭಯೋತ್ಪಾದನೆ ಅಂತ್ಯವಾಗುವವರೆಗೆ ಅದು ಸಾಧ್ಯವಿಲ್ಲವೆಂದು ಹೇಳಿದ್ದಾರೆ.

ಬಿಸಿಸಿಐಗೆ ಉಭಯ ದೇಶಗಳ ನಡುವೆ ಸರಣಿ ಪಂದ್ಯಗಳನ್ನಾಡಿಸುವ ಪ್ರಸ್ತಾಪವಿದ್ದರೆ ಅದಕ್ಕೂ ಮುನ್ನ ಸರ್ಕಾರದ ಜೊತೆ ಮಾತುಕತೆ ನಡೆಸಲಿ. ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುವುದು, ಗಡಿ ಭಯೋತ್ಪಾದನೆ ಮಾಡುವುದರಿಂದ ಅವರ ಜೊತೆ ಕ್ರಿಕೆಟ್ ಆಡುವುದು ಸಾಧ್ಯವಿಲ್ಲ ಎಂದು ಗೋಯಲ್ ಹೇಳಿದ್ದಾರೆ.

click me!