
ನವದೆಹಲಿ: ಮಾನವರ ದೇಹದಲ್ಲಿ ರೋಗಾಣುಗಳ ರೂಪದಲ್ಲಿ ಸೂಕ್ಷ್ಮಜೀವಿಗಳು ಸೇರಿಕೊಳ್ಳುವುದು ಹೊಸದಲ್ಲ. ಆದರೆ ವೈದ್ಯಕೀಯ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾದ ಪ್ರಕರಣವೊಂದರಲ್ಲಿ, ಬಾಲಕನ ದೇಹದಲ್ಲಿ ಜೀವಂತವಾಗಿದ್ದ ಮತ್ತು ದಿನೇ ದಿನೇ ಬೆಳೆಯುತ್ತಿದ್ದ ಶಂಕದ ಹುಳುವೊಂದು ಪತ್ತೆಯಾಗಿದೆ.
ಇತ್ತೀಚೆಗೆ ಕ್ಯಾಲಿಫೋರ್ನಿಯಾ ಸಮೀಪದ 11 ವರ್ಷದ ಬಾಲಕನೊಬ್ಬ ಕೈನೋವೆಂದು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಹೋಗಿದ್ದ. ಆದರೆ ದಿನಕಳೆದಂತೆ ಆತನ ಕೈನ ಕಂಕುಳ ಭಾಗದಲ್ಲಿದ್ದ ಸಣ್ಣ ಗಾಯ ಕೀವು ತುಂಬಿಕೊಂಡು ದೊಡ್ಡದಾಗುತ್ತಾ ಬರುತ್ತಿತ್ತು. ಹೀಗಾಗಿ ಆತ ಮತ್ತೆ ಆಸ್ಪತ್ರೆಗೆ ತಪಾಸಣೆಗೆ ಬಂದಿದ್ದ. ಈ ವೇಳೆ ಕೀವು ತುಂಬಿರಬೇಕು ಎಂದು ವೈದ್ಯರು ಸಿರಿಂಜ್ ಮೂಲಕ ಗಾಯವನ್ನು ಒಡೆದು, ಕೀವು ಹೊರತೆಗೆಯುವಾಗ 4 ಮಿ.ಮೀ ಸುತ್ತಳತೆಯ ಸಣ್ಣ ಹುಳವೊಂದು ಕಂಡುಬಂದಿದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಸಮುದ್ರದಲ್ಲಿ ಇರುವ ಶಂಕು ಹುಳವೆಂದು ಖಚಿತಪಟ್ಟಿದೆ.
ಕ್ಯಾಲಿಫೋರ್ನಿಯಾ ಬೀಚ್ ಒಂದರ ಪೂಲ್ ಒಂದರಲ್ಲಿ ಆಟವಾಡುತ್ತಿದ್ದ ಹುಡುಗ ಕಲ್ಲಿನ ಮೇಲೆ ಬಿದ್ದು, ಆತನ ಮೊಣಕೈಗೆ ತರಚಿದ ಗಾಯವಾಗಿತ್ತು. ಈ ಸಂದರ್ಭ ಬಾಲಕನ ಕೈ ಚರ್ಮದೊಳಗೆ ಹುಳುವಿನ ಮೊಟ್ಟೆನುಗ್ಗಿ, ಬಳಿಕ ಬಾಲಕನ ದೇಹದೊಳಗೇ ಬೆಳೆದಿದೆ. ಶಂಕದಹುಳುವಿಗೆ ತನ್ನ ಕವಚದೊಳಗಿನ ತೇವಾಂಶದಿಂದ ಬದುಕುಳಿಯಲು ಸಾಧ್ಯವಿದ್ದುದರಿಂದ, ಅದು ಬಾಲಕನ ಚರ್ಮದೊಳಗೆ ಬದುಕುಳಿದಿರುವ ಸಾಧ್ಯತೆಯಿದೆ ಎಂದು ವೈದ್ಯರು ಅಂದಾಜಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.