
ಮುಂಬೈ(ಎ.21): ವಿಶ್ವದ ತೂಕದ ಮಹಿಳೆ ಎಂದೇ ಪ್ರಖ್ಯಾತಳಾಗಿದ್ದ ಈಜಿಪ್ಟಿನ ಮಹಿಳೆ ಎಮಾನ್ ಅಹ್ಮದ್ ಈಗ ಅರ್ಧದಷ್ಟು ಸಣ್ಣಗಾಗಿದ್ದಾಳೆ. ಕೆಲವೇ ತಿಂಗಳುಗಳ ಹಿಂದೆ 500 ಕೆ.ಜಿ ಗಿಂತಲೂ ಭಾರವಿದ್ದ ಎಮಾನ್ ಮುಂಬಯಿಯ ಸೈಟ್ರಿ ಆಸ್ಪತ್ರೆಯಲ್ಲಿ ಬ್ಯಾರಿಯಾಟ್ರಿಕ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು , ಈಗ 250 ಕೆಜಿ ತೂಕ ಇಳಿಸಿಕೊಂಡಿದ್ದಾಳೆ.
ಬುಧವಾರ ಸೈಫಿ ಆಸ್ಪತ್ರೆಯ ವೈಧ್ಯರು ಸ್ಲಿಮ್ ಆಗಿರುವ ಎಮಾನ್ ಮುದ್ದಾಗಿ ನಗುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಆಜೆ ದೈಹಿಕವಾಗಿ ಫಿಟ್ ಆಗಿರುವುದು ಕಂಡು ಬರುತ್ತದೆ. ಎಮಾನ್ ಈಗ ಗಾಲಿ ಕುರ್ಚಿಯಲ್ಲಿ ಹಿಡಿಸುತ್ತಾಳೆ, ಬಹಳಹೊತ್ತು ಕುಳಿತುಕೊಳ್ಳಲು ಶಕ್ತಳಾಗಿದ್ದಾಳೆ, ಮೂರು ತಿಂಗಳ ಹಿಂದೆ ಇದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ ಎಂದು ವೈದ್ಯರು ಹೇಳಿಕೆ ನೀಡಿದ್ದಾರೆ.
ಎಮಾನ್ ಸುಧಾರಿಸಿಕೊಳ್ಳುತ್ತಿದ್ದಾಳೆ ಎಂದಿರುವ ಡಾ.ಅಪರ್ಣಾ ಗೋಯೆಲ್ ಆಕೆ ಮೊದಲಿಗಿಂತಲೂ ಚುರುಕಾಗಿದ್ದಾಳೆ . ಆಕೆಯ ಫಿಸಿಯೋ ಥೆರಫಿ ನಿಯಮಿತವಾಗಿ ನಡೆಯುತ್ತಿದೆ ಎಂದಿದ್ದಾರೆ. ಮೂರು ವರ್ಷಗಳ ಹಿಂದೆ ಪಾರ್ಶ್ವವಾಯು ವಿಗೆ ತುತ್ತಾಗಿದ್ದ ಎಮಾನ್ ಳ ಮಿದುಳಿನಲ್ಲಾದ ಗಾಯದಿಂದ ಆಕೆಗೆ ನರ ಸಂಬಂಧಿ ಸಮಸ್ಯೆಗಳು ಶುರುವಾಗಿದ್ದು ಈ ಕುರಿತು ವೈದ್ಯರು ಚಿಕಿತ್ಸೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.