ದಿನದ 24 ಗಂಟೆಗಳೂ ಕುಡಿಯೋದೇ ಈ ಡಾಕ್ಟರ್ ಕಾಯಕ!

Published : Oct 01, 2016, 08:17 PM ISTUpdated : Apr 11, 2018, 12:41 PM IST
ದಿನದ 24 ಗಂಟೆಗಳೂ ಕುಡಿಯೋದೇ ಈ ಡಾಕ್ಟರ್ ಕಾಯಕ!

ಸಾರಾಂಶ

ಚಿತ್ರದುರ್ಗ(ಅ.02): ಚಿತ್ರದುರ್ಗದಲ್ಲಿ ಓರ್ವ ಡಾಕ್ಟರ್​ ಇದ್ದಾರೆ. ಯಾವಾಗಲೂ ಪಾನಮತ್ತನಾಗಿಯೇ ಟ್ರೀಟ್​ಮೆಂಟ್ ಕೊಡುವುದು ಇವರ ಕಾಯಕವಾಗಿಬಿಟ್ಟಿದೆ.  ​

ಚಿತ್ರದುರ್ಗದ ಭರಮಸಾಗರ ಹೋಬಳಿ ಕೋಗುಂಡೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಸುರೇಂದ್ರ ಅವರದು ಕುಡಿಯುವುದೇ ಕಾಯಕ. ಆಸ್ಪತ್ರೆಗೆ ಬರುವ ರೋಗಿಗಳು  ಚಿಕಿತ್ಸೆ ಪಡೆಯಲು ಹೆದರುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಇವರ ಹೆಸರನ್ನು ಕೇಳಿದರೆ ಸಾಕು ಮಾರುದ್ದ ನಿಲ್ಲುತ್ತಾರೆ. ಕಾರಣ ಕುಡಿದಾಗ ಚಿಕಿತ್ಸೆಯ ಹೆಸರಲ್ಲಿ ಅಸಭ್ಯವಾಗಿ ವರ್ತಿಸುತ್ತಾರೆ ಅನ್ನೋದು ಡಾಕ್ಟರ್​ ಸುರೇಂದ್ರ ಮೇಲಿನ ಮತ್ತೊಂದು ಆರೋಪ. ಸಾಲದ್ದಕ್ಕೆ  ಸದಾ ಕಾರಿನಲ್ಲಿ ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ನಿಶೆ ಇಳಿದಾಗ ಕುಡಿದು ತೂರಾಡಿಕೊಂಡೆ ಕರ್ತವ್ಯ ನಿರ್ವಹಿಸುತ್ತಾರೆ.

ಈ ವೈದ್ಯರ ಬಗ್ಗೆ  ತಾಲೂಕು ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸ್ಥಳೀಯರು ಸಾಕಷ್ಟು ಬಾರಿ ದೂರು ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ವೈದ್ಯರೇ ಸಿಗುವುದಿಲ್ಲ ನಾವೇನು ಮಾಡುವುದು ಎಂದು ಮೇಲಾಧಿಕಾರಿಗಳು ಹೇಳುತ್ತಾರೆ. ಆದರೆ ಇಂತಹ ಕುಡುಕ ವೈದ್ಯ ನಮ್ಮ ಆಸ್ಪತ್ರೆಗೆ ಬೇಡ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜ.29ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ನಟ ಪ್ರಕಾಶ್‌ ರಾಜ್‌ ರಾಯಭಾರಿ
ಪಂದ್ಯಾವಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಪೂರಕವಾಗಿಲ್ಲ: ಸರ್ಕಾರದ ಸಮಿತಿ ಶಿಫಾರಸು