ಏಕರೂಪ ಸಂಹಿತೆ, ತ್ರಿವಳಿ ತಲಾಕ್ ಪ್ರತ್ಯೇಕ ವಿಷಯಗಳು: ವೆಂಕಯ್ಯನಾಯ್ಡು

By Web DeskFirst Published Oct 14, 2016, 10:39 AM IST
Highlights

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಸಮಾನ ನಾಗರೀಕ ಸಂಹಿತೆಯನ್ನು ತ್ರಿವಳಿ ತಲಾಖ್ ಜೊತೆ ಬೆಸೆಯಬಾರದು.ಅವೆರಡು ಪ್ರತ್ಯೇಕ ವಿಚಾರಗಳು ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ನವದೆಹಲಿ (ಅ.14): ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಸಮಾನ ನಾಗರೀಕ ಸಂಹಿತೆಯನ್ನು ತ್ರಿವಳಿ ತಲಾಖ್ ಜೊತೆ ಬೆಸೆಯಬಾರದು. ಅವೆರಡು ಪ್ರತ್ಯೇಕ ವಿಚಾರಗಳು ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ನಾಗರೀಕ ಸಂಹಿತೆಯ ಬಗ್ಗೆ ನಡೆದ ಗಂಭೀರ ಚರ್ಚೆಯಲ್ಲಿ ಭಾಗವಹಿಸಿದ ವೆಂಕಯ್ಯನಾಯ್ಡು, ಲಿಂಗ ಸಮಾನತೆ ಮತ್ತು ಮಹಿಳಾ ತಾರತಮ್ಯದ ವಿರುದ್ಧ ಹೋರಾಡಲು ನಾಗರೀಕ ಸಂಹಿತೆಯನ್ನು ಜಾರಿಗೆ ತರಲಾಗುತ್ತಿದೆ. ದೇಶದಲ್ಲಿ ತ್ರಿವಳಿ ತಲಾಕ್ (ಟ್ರಿಪಲ್ ತಲಾಕ್) ಬಗ್ಗೆ ಚರ್ಚೆಯಾಗುತ್ತಿದೆ. ಕೆಲವರು ಇವೆರಡೂ ವಿಚಾರವನ್ನು ಒಟ್ಟಿಗೆ ಸೇರಿಸಿ ಗೊಂದಲವುಂಟು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನೀವೂ ಚರ್ಚೆಯಲ್ಲಿ ಭಾಗವಹಿಸಿ. ನಿಮ್ಮ ದೃಷ್ಟಿಕೋನವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಅನಗತ್ಯವಾಗಿ ಪ್ರಧಾನಿ ಮೋದಿಯವರ ಹೆಸರನ್ನು ಯಾಕೆ ಎಳೆದು ಸರ್ವಾಧಿಕಾರಿ ಎಂದು ಬಿಂಬಿಸುತ್ತೀರಿ ಎಂದು ವೆಂಕಯ್ಯನಾಯ್ಡು ಪತ್ರಕರ್ತರಿಗೆ ಸವಾಲೆಸೆದಿದ್ದಾರೆ.

 

click me!