ಸಿಂಗ್’ಗೆ ಸೀಟು ಕೊಡಲ್ಲ ಎಂದ ಡಿಎಂಕೆ: ರಾಜ್ಯಸಭೆ ದಾರಿ ಬದಲು!

By Web DeskFirst Published Jul 2, 2019, 9:01 PM IST
Highlights

ರಾಜ್ಯಸಭೆಗಾಗಿ ಅಲ್ಲಿಂದಿಲ್ಲಿಗೆ ಅಲೆಯುತ್ತಿರುವ ಡಾ. ಸಿಂಗ್| ಮಾಜಿ ಪ್ರಧಾನಿಗೆ ಸೀಟು ಬಿಟ್ಟು ಕೊಡಲು ಡಿಎಂಕೆ ನಿರಾಕರಣೆ| ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಿಂಗ್ ಕನಸು ಭಗ್ನ| ರಾಜಸ್ಥಾನದಿಂದ ಸಿಂಗ್ ಅವರನ್ನು ಕಣಕ್ಕಿಳಿಸಲು ಮುಂದಾದ ಕಾಂಗ್ರೆಸ್|

ನವದೆಹಲಿ(ಜು.02): ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ತಮಿಳುನಾಡಿನಿಂದ ರಾಜ್ಯಸಭೆಗೆ ಕಳುಹಿಸಲು ಮಿತ್ರಪಕ್ಷ ಡಿಎಂಕೆ ನಿರಾಕರಿಸಿದೆ.

ಡಾ. ಸಿಂಗ್ ಅವರನ್ನು ತಮಿಳುನಾಡಿನಿಂದ ರಾಜ್ಯಸಭೆಗೆ ಕಳುಹಿಸಲು ಬಯಸಿದ್ದ ಕಾಂಗ್ರೆಸ್, ಒಂದು ಸೀಟು ಬಿಟ್ಟು ಕೊಡುವಂತೆ ಮಿತ್ರ ಪಲ್ಷ ಡಿಎಂಕೆಯನ್ನು ಕೋರಿತ್ತು.

ಆದರೆ ಕಾಂಗ್ರೆಸ್ ಮನವಿಯನ್ನು ತಿರಸ್ಕರಿಸಿರುವ ಡಿಎಂಕೆ, ಕಾಂಗ್ರೆಸ್’ಗೆ ಸೀಟು ಬಿಟ್ಟುಕೊಡಲು ಸ್ಪಷ್ಟವಾಗಿ ನಿರಾಕರಿಸಿದೆ. ಈ ಹಿಂದೆ ಗುಜರಾತ್’ನಿಂದ ಸಿಂಗ್ ಅವರನ್ನು ಕಣಕ್ಕಿಳಿಸಲು ಬಯಸಿದ್ದ ಕಾಂಗ್ರೆಸ್, ಇದೀಗ ತಮಿಳುನಾಡಿನಿಂದಲೂ ಅವರನ್ನು ಕಣಕ್ಕಿಳಿಸಲು ವಿಫಲವಾಗಿದೆ.

ಮನಮೋಹನ್ ಅವರಿಗಾಗಿ ಸೀಟು ಬಿಟ್ಟು ಕೊಡುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯಾಗಲಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಾಗಲಿ ಸ್ಟಾಲಿನ್ ಅವರಲ್ಲಿ ಮನವಿ ಮಾಡದಿರುವುದು ಡಿಎಂಕೆಯನ್ನು ಕೆರಳಿಸಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸಿಂಗ್ ಅವರನ್ನು ಇದೀಗ ರಾಜಸ್ಥಾನದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತಿಸುತ್ತಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರುವುದರಿಂದ ಸಿಂಗ್ ಜಯ ಸುಲಭವಾಗಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. 

click me!