ನೈಸ್ ಹಗರಣಕ್ಕೂ – ಖೇಣಿ ಕಾಂಗ್ರೆಸ್ ಸೇರ್ಪಡೆಗೂ ಸಂಬಂಧವಿಲ್ಲ : ಡಿಕೆಶಿ

By Suvarna Web DeskFirst Published Mar 5, 2018, 11:46 AM IST
Highlights

ನೈಸ್  ಅಕ್ರಮದ ರೋಪ ಎದುರಿಸುತ್ತಿರುವ ಅಶೋಕ್ ಖೇಣಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಖೇಣಿ ಅಕ್ರಮಕ್ಕೂ – ಅವರು ಕಾಂಗ್ರೆಸ್ ಸೇರುತ್ತಿರುವುದಕ್ಕೂ ಸಂಬಂಧವಿಲ್ಲ. ರಾಜಕೀಯ ಬೇರೆ, ಅವರ ವ್ಯವಹಾರ ಬೇರೆ. ರಾಜಕೀಯ ದೃಷ್ಟಿಯಲ್ಲಿ ಮಾತ್ರವೇ ಖೇಣಿ ಕಾಂಗ್ರೆಸ್ ಸೇರಲು ಬಯಸಿರುವುದನ್ನು ಸ್ವಾಗತಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಬೆಂಗಳೂರು : ನೈಸ್  ಅಕ್ರಮದ ರೋಪ ಎದುರಿಸುತ್ತಿರುವ ಅಶೋಕ್ ಖೇಣಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಖೇಣಿ ಅಕ್ರಮಕ್ಕೂ – ಅವರು ಕಾಂಗ್ರೆಸ್ ಸೇರುತ್ತಿರುವುದಕ್ಕೂ ಸಂಬಂಧವಿಲ್ಲ. ರಾಜಕೀಯ ಬೇರೆ, ಅವರ ವ್ಯವಹಾರ ಬೇರೆ. ರಾಜಕೀಯ ದೃಷ್ಟಿಯಲ್ಲಿ ಮಾತ್ರವೇ ಖೇಣಿ ಕಾಂಗ್ರೆಸ್ ಸೇರಲು ಬಯಸಿರುವುದನ್ನು ಸ್ವಾಗತಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಅವರ ವೈಯಕ್ತಿಕ  ವಿಚಾರಗಳು ಯಾವವು ಕೂಡ ಪಕ್ಷಕ್ಕೆ ಸಂಬಂಧಿಸಿಲ್ಲ.  ಖೇಣಿ ಶಾಸಕರಾಗುವ ಮೊದಲೇ ನೈಸ್ ಪ್ರಾರಂಭ ಮಾಡಿದ್ದು,  ಈ ಯೋಜನೆಗೆ ದೇವೇಗೌಡರು ಹಾಗೂ ಜೆಎಚ್ ಪಟೇಲ್ ಅವರು ಸಹಿ ಹಾಕಿದ್ದರು.  ನೈಸ್’ನಲ್ಲಿ ಅಕ್ರಮಗಳು ನಡೆದಿದ್ದರೆ ಅದನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

click me!