ಐಟಿ ರೇಡ್'ಗೆ ಬಂದಾಗ ಡಿಕೆಶಿ ರಿಯಾಕ್ಷನ್ ಹೇಗಿತ್ತು? ಐಟಿ ಅಧಿಕಾರಿಗಳಿಗೆ ಡಿಕೆಶಿ ಹೇಳಿದ್ದೇನು?

By Suvarna Web DeskFirst Published Aug 2, 2017, 12:18 PM IST
Highlights

ಡಿಕೆಶಿ ಮನೆ ಮೇಲೆ 3 ದಿನಗಳ ಹಿಂದೆಯೇ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಇವತ್ತು ದಿಢೀರ್ ರೇಡ್ ಮಾಡಲು ಪ್ರಬಲ ಕಾರಣವಿತ್ತು. ಗುಜರಾತ್ ಶಾಸಕರಿಗೆ ಡಿಕೆಶಿ ಇಂದು ಗಿಫ್ಟ್ ಕೊಡುವ ಕಾರ್ಯಕ್ರಮವಿತ್ತು. ಉಡುಗೊರೆಯ ಐಟಂಗಳು ಮನೆಯಲ್ಲಿರುಬಹುದೆಂಬ ಅಂದಾಜಿನಲ್ಲಿ ಐಟಿ ಅಧಿಕಾರಿಗಳು ಇಂದೇ ದಾಳಿ ಮಾಡಿರುವ ಶಂಕೆ ಇದೆ.

ಬೆಂಗಳೂರು(ಆ. 02): ಇಂಧ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ರೇಡ್ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಕೊಟ್ಟಿದೆ. ಸುಮಾರು 20 ಐಟಿ ಅಧಿಕಾರಿಗಳು ಡಿಕೆಶಿ ನಿವಾಸಕ್ಕೆ ಮುತ್ತಿಗೆ ಹಾಕಿದರು. ಅಧಿಕಾರಿಗಳು ರೇಡ್'ಗೆ ಬಂದಾಗ ಹೆಚ್ಚು ತಲೆಕೆಡಿಸಿಕೊಳ್ಳದ ಡಿಕೆ ಶಿವಕುಮಾರ್, ತಮ್ಮ ಮೊಬೈಲ್'ನ್ನು ವಶಪಡಿಸಿಕೊಳ್ಳುವಾಗ ಸ್ವಲ್ಪ ರಾಂಗ್ ಆದರು.

"ನೀವು ಬರ್ತೀರಾ ಅಂತ ಗೊತ್ತಿತ್ತು ಬನ್ರೀ..!" ಎಂದು ಹೇಳಿದ ಡಿಕೆಶಿ, "ಏನ್ ಬೇಕಾದ್ರೂ ಸರ್ಚ್ ಮಾಡ್ಕೊಳ್ರೀ.." ಎಂದು ಸಿಡುಕಿದರು. ಡಿಕೆಶಿ ಸಿಟ್ಟಾದ್ರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳಲಿಲ್ಲ. ನಿಯಮಗಳ ಪ್ರಕಾರ ಸರ್ಚ್ ಮಾಡ್ತೇವೆ ಎಂದು ತಮ್ಮ ಕೆಲಸವನ್ನು ಅಧಿಕಾರಿಗಳು ಮುಂದುವರಿಸಿದರು.

Latest Videos

ಇದೇ ವೇಳೆ, ಡಿಕೆಶಿ ಮನೆ ಮೇಲೆ 3 ದಿನಗಳ ಹಿಂದೆಯೇ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಇವತ್ತು ದಿಢೀರ್ ರೇಡ್ ಮಾಡಲು ಪ್ರಬಲ ಕಾರಣವಿತ್ತು. ಗುಜರಾತ್ ಶಾಸಕರಿಗೆ ಡಿಕೆಶಿ ಇಂದು ಗಿಫ್ಟ್ ಕೊಡುವ ಕಾರ್ಯಕ್ರಮವಿತ್ತು. ಉಡುಗೊರೆಯ ಐಟಂಗಳು ಮನೆಯಲ್ಲಿರುಬಹುದೆಂಬ ಅಂದಾಜಿನಲ್ಲಿ ಐಟಿ ಅಧಿಕಾರಿಗಳು ಇಂದೇ ದಾಳಿ ಮಾಡಿರುವ ಶಂಕೆ ಇದೆ.

ಆದರೆ, ಗುಜರಾತ್ ಶಾಸಕರನ್ನು ಈಗಲ್ಟನ್ ರೆಸಾರ್ಟ್'ನಲ್ಲಿ ಇಟ್ಟುಕೊಂಡಿರುವ ವಿಷಯಕ್ಕೂ ಐಟಿ ರೇಡ್'ಗೂ ಯಾವುದೇ ಸಂಬಂಧವಿಲ್ಲವೆಂದು ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಲೋಕಸಭೆಗೆ ತಿಳಿಸಿದರು.

(ಈಗಲ್'ಟನ್ ರೆಸಾರ್ಟ್'ನಲ್ಲಿ ಡಿಕೆಶಿ ಇದ್ದಿರುವ ಫೋಟೋ)

click me!