13 ಕೋಟಿ ರು. ಚಿನ್ನ ಖರೀದಿಸಿದ ಡಿ.ಕೆ.ಶಿವಕುಮಾರ್ ಪತ್ನಿ

By Kannadaprabha News  |  First Published Sep 17, 2019, 7:51 AM IST

ಮಾಜಿ ಸಚಿವ ಸದ್ಯ ಇಡಿ ವಶದಲ್ಲಿರುವ ಡಿಕೆ ಶಿವಕುಮಾರ್ ಅವರ ಪತ್ನಿ 13 ಕೋಟಿ ಮೌಲ್ಯದ ಚಿನ್ನ ಖರೀದಿಸಿದ್ದು ಇದಕ್ಕೆ ಸೂಕ್ತ ದಾಖಲಾತಿ ದೊರೆತಿಲ್ಲ ಎಂದು ಇಡಿ ಹೇಳಿದೆ. 


ಬೆಂಗಳೂರು [ಸೆ.17]:  ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ ಅವರು 13 ಕೋಟಿ ರು. ಮೌಲ್ಯದ ಚಿನ್ನಾಭರಣ ಖರೀದಿಸಿದ್ದಾರೆ. ಆದರೆ ಈ ಚಿನ್ನಾಭರಣ ಖರೀದಿಗೆ ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ. ಶಿವಕುಮಾರ್‌ ಅವರ ಮನೆ ಮೇಲೆ ದಾಳಿ ನಡೆಸಿದಾಗ ಆಭರಣ ಖರೀದಿ ಗೊತ್ತಾಯಿತು. ಅಲ್ಲದೆ ಮನೆ ನಿರ್ವಹಣೆಗೆ 4.84 ಕೋಟಿ ರು. ವೆಚ್ಚ ಮಾಡಿದ್ದಾಗಿ ಹೇಳಿದ್ದಾರೆ. 

ಇದಕ್ಕೂ ಸಹ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಹೀಗಾಗಿ ಆಭರಣ ಮತ್ತು ಮನೆ ವೆಚ್ಚದ ಕುರಿತು ಮಾಜಿ ಸಚಿವರ ಕುಟುಂಬದಿಂದ ಮಾಹಿತಿ ಪಡೆಯಲಾಗುತ್ತದೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

ಟ್ರಸ್ಟ್‌ನಲ್ಲಿ 48 ಕೋಟಿ ರು. ಪತ್ತೆ

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಕುಟುಂಬ ನಡೆಸುವ ಟ್ರಸ್ಟ್‌ನಲ್ಲಿ 48 ಕೋಟಿ ರು. ಪತ್ತೆಯಾಗಿದೆ. ಈ ಹಣವನ್ನು ಆಸ್ತಿ ಖರೀದಿ ಸಲುವಾಗಿ ಅವರು ಮೀಸಲಿಟ್ಟಿದ್ದರು ಎಂಬ ಸಂಗತಿ ಗೊತ್ತಾಗಿದೆ ಎಂದು ಇ.ಡಿ. ಹೇಳಿದೆ.

ಡಿಕೆ ಶಿವಕುಮಾರ್‌ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

"

click me!