
ಹೂವಿನಹಡಗಲಿ[ಸೆ.13]: ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರು ಮೈಲಾರ ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಬಾರದೆ, ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರಿಂದಲೇ ಇಂದು ಸಂಕಷ್ಟಎದುರಿಸುತ್ತಿದ್ದಾರೆಂದು ಮೈಲಾರಲಿಂಗೇಶ್ವರ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಹೇಳಿಕೆ ನೀಡಿದ್ದಾರೆ.
ಅಣ್ಣಾ.. ಅಣ್ಣಾ.. ಅಳುತ್ತಲೇ HDK ಕಾಲೆಳೆದ ಯುವಕ.. ವಿಡಿಯೋ ಫುಲ್ ವೈರಲ್
‘ಕನ್ನಡಪ್ರಭ’ದೊಂದಿಗೆ ಗುರುವಾರ ದೂರವಾಣಿಯಲ್ಲಿ ಮಾತನಾಡಿರುವ ಅವರು, ಎಷ್ಟೇ ಶ್ರೀಮಂತರಿದ್ದರೂ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಬರುತ್ತಾರೆ. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಹಾಗೂ ಪಿ.ಟಿ.ಪರಮೇಶ್ವರ ನಾಯ್ಕ ಹೆಲಿಕಾಪ್ಟರ್ ಮೂಲಕ ಕಾರ್ಣಿಕ ಕೇಳಲು ಬಂದಿದ್ದರು. ಅವರಿದ್ದ ಹೆಲಿಕಾಪ್ಟರ್ ದೇವಸ್ಥಾನದ ಗೋಪುರ ಹಾಗೂ ಕಾರ್ಣಿಕ ಸ್ಥಳವಾದ ಡೆಂಕಣ ಮರಡಿ ಮೇಲೆ ಹಾರಾಡಿದ್ದರಿಂದ ಇಬ್ಬರೂ ಸಂಕಷ್ಟಅನುಭವಿಸಿದ್ದಾರೆ. ಪಿ.ಟಿ. ಪರಮೇಶ್ವರ ನಾಯ್ಕ ಅಂದು ಸಚಿವ ಸ್ಥಾನ ಕಳೆದುಕೊಂಡರೆ ಇಂದು ಡಿ.ಕೆ. ಶಿವಕುಮಾರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು. ಈ ಕ್ಷೇತ್ರದಲ್ಲಿ ಆಡಂಬರಕ್ಕೆ ಆದ್ಯತೆ ಇಲ್ಲ. ಅವರು ಎಷ್ಟೇ ಶ್ರೀಮಂತರಾಗಿದ್ದರೂ, ಪಾದಯಾತ್ರೆ ಮೂಲಕ ಬಂದು ಸ್ವಾಮಿಯಲ್ಲಿ ಅರಿಕೆ ಮಾಡಿಕೊಂಡಾಗ ಸಂಕಷ್ಟದೂರವಾಗುತ್ತವೆ ಎಂದು ಹೇಳಿದರು.
ಸತತ 7 ಗಂಟೆ ಡಿಕೆಶಿ ಪುತ್ರಿಗೆ ಪ್ರಶ್ನೆಗಳ ಮಳೆ, ಶುಕ್ರವಾರವೂ ಇದೆ ವಿಚಾರಣೆ
2008ರಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಜನಾರ್ದನ ರೆಡ್ಡಿ ಸಹ ಶ್ರೀ ಕ್ಷೇತ್ರಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿದ್ದರಿಂದಲೇ ಅವರು ಸಹ ಸಂಕಷ್ಟಅನುಭವಿಸಿ ಜೈಲು ಸೇರಬೇಕಾಯಿತು ಎಂದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್.ಬಂಗಾರಪ್ಪ ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಮೈಲಾರ ಜಾತ್ರೆಗೆ ಭಕ್ತಿಯಿಂದ ಸ್ವಲ್ಪ ದೂರದಿಂದ ಪಾದಯಾತ್ರೆ ಮಾಡಿಕೊಂಡು ಬಂದಿದ್ದರು. ಆಗ ಸ್ವಾಮಿಯ ದರ್ಶನದ ಜತೆಗೆ ಭಂಡಾರ ಪ್ರಸಾದ ಪಡೆದ ಬಳಿಕ ರಾಜ್ಯದ ಮುಖ್ಯಮಂತ್ರಿಯಾದರು ಎಂದು ನೆನಪಿಸಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.