ಸಿಎಂಗೆ ಡಿಕೆಶಿ ವಾರ್ನ್, ಸ್ಥಗಿತವಾಗುತ್ತಾ ಐಡಿಯಾ,ವೋಡಾಫೋನ್; ಡಿ.07ರ ಟಾಪ್ 10 ಸುದ್ದಿ!

By Web Desk  |  First Published Dec 7, 2019, 5:04 PM IST

ಉಪಚುನಾವಣೆ ಮುಗಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಬಿರುಗಾಳಿ ಎಬ್ಬಿಸಿದ್ದಾರೆ. ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇತ್ತ ಬಿಜೆಪಿ ಸರ್ಕಾರಕ್ಕೆ ಮಂತ್ರಿಗಿರಿ ತಲೆನೋವು ಶುರುವಾಗಿದೆ. ಉತ್ತರ ಪ್ರದೇಶದ ಉನ್ನವೋ ರೇಪ್ ರಾಜಧಾನಿ ಅನ್ನೋ ಕುಖ್ಯಾತಿಗೆ ಪಾತ್ರವಾಗಿದೆ. ಕಿಚ್ಚ ಸುದೀಪ್ ಮಗಳ ಆಸೆ ಈಡೇರಿಸಿದ ಸಲ್ಮಾನ್ ಖಾನ್, ವಿರಾಟ್ ಕೊಹ್ಲಿಯ ನೋಟ್‌ಬುಕ್ ಸೆಲೆಬ್ರೇಷನ್ ಸೇರಿದಂತೆ ಡಿಸೆಂಬರ್ 7ರ ಟಾಪ್ 10 ಸುದ್ದಿ ಇಲ್ಲಿವೆ.


1) ಬೈ ಎಲೆಕ್ಷನ್‌ ಮುಗಿಯುತ್ತಿದ್ದಂತೆಯೇ ಬಿರುಗಾಳಿ ಎಬ್ಬಿಸಿದ ಡಿಕೆಶಿ: BSYಗೆ ವಾರ್ನ್

Tap to resize

Latest Videos

undefined

ಜೈಲಿನಿಂದ ಬಿಡುಗಡೆಗೊಂಡ ಬಳಿಕ ಟೆಂಪಲ್ ರನ್ ಮಾಡಿದ್ದ ಡಿಕೆಶಿ ಆ ಬಳಿಕ ಉಪಚುನಾವಣೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ ಬೈ ಎಲೆಕ್ಷನ್ ಮುಗಿದಿದ್ದು, ಸೋಮವಾರ ಫಲಿತಾಂಶ ಪ್ರಕಟವಾಗಲಿದೆ. ಇದರ ಮಧ್ಯೆ ಡಿಕೆ ಶಿವಕುಮಾರ್‌ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.


2) 11 ತಿಂಗಳಲ್ಲಿ 86 ಅತ್ಯಾಚಾರ: ಯುಪಿಯ ಉನ್ನಾವ್ ಈಗ 'ರೇಪ್ ರಾಜಧಾನಿ'!

019ರ ಜನವರಿಯಿಂದ ನವೆಂಬರ್ ವರೆಗೆ ಉನ್ನಾವ್ ಜಿಲ್ಲೆಯಲ್ಲಿ ಬರೋಬ್ಬರಿ 86 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಇದು ಉತ್ತರ ಪ್ರದೇಶದ 'ಅತ್ಯಾಚಾರ ಪ್ರಕರಣಗಳ ರಾಜಧಾನಿ' ಎಂಬ ಕುಖ್ಯಾತಿ ಗಳಿಸಿದೆ.

3) ಬಿಜೆಪಿ ನಾಯಕರಿಗೆ ಹೊಸ ಸಂಕಟ; ಪಕ್ಷದಲ್ಲಿ ಶುರುವಾಯ್ತು ಹೊಸ ಆಟ

15 ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ. ಫಲಿತಾಂಶಕ್ಕಾಗಿ ಇಡೀ ರಾಜ್ಯವೇ ಕಾಯುತ್ತಿದೆ. ಇನ್ನೊಂದು ಕಡೆ ಬಿಜೆಪಿ ನಾಯಕರಿಗೆ  ಹೊಸ ಸಂಕಟ ಶುರುವಾಗಿದೆ. ಎಷ್ಟು ಗೆಲ್ತೀವಿ, ಸರ್ಕಾರ ಉಳಿಯುತ್ತೋ ಇಲ್ವೋ ಎಂಬ ತಲೆನೋವು  ಅಲ್ಲ! ಈ ಲೆಕ್ಕಾಚಾರ ಬೇರೆ. ಮಂತ್ರಿಗಿರಿಗೆ ಈಗಾಗಲೇ ಪೈಪೋಟಿ ಶುರುವಾಗಿದೆ. 

4) ಸಿದ್ದರಾಮಯ್ಯ ನಮ್ಮ ನಾಯಕ, ನಾನು ಕಟ್ಟರ್ ಅಭಿಮಾನಿ: ಹೌದು ಹುಲಿಯಾ ಖ್ಯಾತಿಯ ಪೀರಪ್ಪ

ರಾಜ್ಯ ರಾಜಕೀಯದಲ್ಲಿ ಈಗ ಹೌದು ಹುಲಿಯಾದ್ದೇ ಸದ್ದು. ಕಾಗವಾಡದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಸಿದ್ದರಾಮಯ್ಯ ಭಾಷಣ  ಮಾಡುವಾಗ, ಅಭಿಮಾನಿಯೊಬ್ಬರು ಹೌದು ಹುಲಿಯಾ ಎಂದು ಘೋಷಣೆ ಕೂಗಿದ್ದು, ಈಗ ಎಲ್ಲಾ ಕಡೆ ಅದೇ ಸದ್ದು ಮಾಡುತ್ತಿದೆ. ಆ ಅಭಿಮಾನಿಯ ಹೆಸರು ಪೀರಪ್ಪ ತುಕ್ಕಪ್ಪ ಕಟ್ಟಿಮನಿ. ಹೌದು ಹುಲಿಯಾ ಘಟನೆ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

5) ಟರ್ಕಿಯಿಂದ ಬಂದ ಈರುಳ್ಳಿ ಕಡಿಮೆ ದರಕ್ಕೆ ಮಾರಾಟ !

ಈರುಳ್ಳಿ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಆದರೆ ಕೊರತೆ ನೀಗಿಸಲು ಇದೀಗ ವಿದೇಶಗಳಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ. 

6) ಕೊಹ್ಲಿ ನೋಟ್‌ಬುಕ್ ಸಂಭ್ರಮ; ಇಲ್ಲಿದೆ ಟಾಪ್ 10 ಮೆಮೆ !

ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೋಟ್‌ಬುಕ್ ಸೆಲೆಬ್ರೇಷನ್ ಮಾಡಿ ಎಲ್ಲರ ಗಮನಸೆಳೆದಿದ್ದರು. ವೆಸ್ಟ್ ಇಂಡೀಸ್ ವೇಗಿ ಕೆಸ್ರಿಕ್ ವಿಲಿಯಮ್ಸ್ ಅವರ ನೋಟ್‌ಬುಕ್ ಸಂಭ್ರಮಾಚರಣೆ  ಮಾಡೋ ಮೂಲಕ ಹಳೇ ಸೇಡು ತೀರಿಸಿಕೊಂಡಿದ್ದರು. ಕೊಹ್ಲಿ ಸೆಲೆಬ್ರೇಷನ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡುತ್ತಿದೆ. 

7) ಸುದೀಪ್‌ ಮಗಳ ಆಸೆ ಈಡೇರಿಸಿದ ಸಲ್ಮಾನ್ ಖಾನ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಮಗಳು ಶಾನ್ವಿಗೆ ಬಾಲಿವುಡ್ ಬಾಕ್ಸ್‌ ಆಫೀಸ್‌ ಸುಲ್ತಾನ್ ಸಲ್ಮಾನ್‌ ಖಾನ್‌ ಅವರೊಂದಿಗೆ ಒಂದು ಫೋಟೋ ತೆಗೆದುಕೊಳ್ಳಬೇಕೆಂಬ ಒಂದೇ ಒಂದು ಆಸೆ ಇತ್ತಂತೆ. ಒಮ್ಮೆ ಇದನ್ನು ಸುದೀಪ್ ಸಲ್ಲುಗೆ ಹೇಳಿದ್ರು ಅನ್ಸುತ್ತೆ. ಸಲ್ಮಾನ್, ಶಾನ್ವಿಯನ್ನು ಮನೆಗೆ ಕೆರೆಯಿಸಿಕೊಂಡು ಮಾತನಾಡಿಸಿ ಫೋಟೋ ತೆಗೆಸಿಕೊಂಡಿದ್ದಾರೆ.

8) ವೊಡಾಫೋನ್‌- ಐಡಿಯಾ ಬಂದ್‌? ಕೇಂದ್ರಕ್ಕೆ ಬಿರ್ಲಾ ಎಚ್ಚರಿಕೆ!

ಆದಾಯ ಹಂಚಿಕೆ ಪಾವತಿ ವಿಚಾರದಲ್ಲಿ ಕೇಂದ್ರ ಸರ್ಕಾರ ನಮ್ಮ ನೆರವಿಗೆ ಬಾರದೇ ಹೋದಲ್ಲಿ ವೊಡಾಫೋನ್‌- ಐಡಿಯಾ ಲಿ.ಕಥೆ ಮುಗಿದಂತೆ ಎಂದು ಸಂಸ್ಥೆಯ ಅಧ್ಯಕ್ಷ ಕುಮಾರ ಮಂಗಳಂ ಬಿರ್ಲಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. 

9) ಹಗಲು -ರಾತ್ರಿ ವಹಿವಾಟು: NEFT ಇನ್ಮುಂದೆ ಬೊಂಬಾಟು!

ಆನ್‌ಲೈನ್ NEFT ವಹಿವಾಟಿಗೆ ನಿಗದಿತ ಸಮಯದ ಮಿತಿಯನ್ನು ಆರ್‌ಬಿಐ ತೆಗೆದು ಹಾಕಿದೆ. ಇದೇ ಡಿ.16ರಿಂದ 24/7 NEFT ವಹಿವಾಟು ಮಾಡಬಹುದಾಗಿದೆ. ಡಿ.16ರ ರಾತ್ರಿ 12:30ರ ಬಳಿಕ NEFT ವಹಿವಾಟು 24/7 ಕಾಲಮಿತಿಗೆ ತೆರೆದುಕೊಳ್ಳಲಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

10) ಬನ್ನಿ ಅಣ್ಣ: ಶಾ, ಫಡ್ನವೀಸ್ ಎದುರು ಮೋದಿ ಬರಮಾಡಿಕೊಂಡ ಉದ್ಧವ್!

ಮಹಾರಾಷ್ಟ್ರ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಉದ್ಧವ್ ಠಾಕ್ರೆ ಹಾಗೂ ಪ್ರಧಾನಿ ಮೋದಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ಪುಣೆಯ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಪರಸ್ಪರ ಕೈಕುಲುಕುತ್ತಿರುವ ದೃಶ್ಯ ವೈರಲ್ ಆಗಿದೆ

click me!