ಡಿ.ಕೆ ಶಿವಕುಮಾರ್‌ಗೆ ಈ ಖಾತೆ ಪಕ್ಕಾ..?

First Published Jun 5, 2018, 8:07 AM IST
Highlights

ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿ.ಕೆ.ಶಿವಕುಮಾರ್‌ ಅವರಿಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಇಂಧನ ಖಾತೆ ಬಿಟ್ಟುಕೊಡುವ ಬಗ್ಗೆ ಜೆಡಿಎಸ್‌ ಪಾಳೆಯದಲ್ಲಿ ಗಂಭೀರ ಚಿಂತನೆ ನಡೆದಿದ್ದು, ಈ ಬಗ್ಗೆ ಮಂಗಳವಾರ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.

ಬೆಂಗಳೂರು :  ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿ.ಕೆ.ಶಿವಕುಮಾರ್‌ ಅವರಿಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಇಂಧನ ಖಾತೆ ಬಿಟ್ಟುಕೊಡುವ ಬಗ್ಗೆ ಜೆಡಿಎಸ್‌ ಪಾಳೆಯದಲ್ಲಿ ಗಂಭೀರ ಚಿಂತನೆ ನಡೆದಿದ್ದು, ಈ ಬಗ್ಗೆ ಮಂಗಳವಾರ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.

ಇಂಧನ ಖಾತೆ ಬಿಟ್ಟುಕೊಟ್ಟಲ್ಲಿ ಅದರ ಬದಲು ಕಂದಾಯ ಅಥವಾ ಬೆಂಗಳೂರು ನಗರಾಭಿವೃದ್ಧಿ ಪೈಕಿ ಒಂದು ಖಾತೆಯನ್ನು ಪಡೆಯುವ ಬಗ್ಗೆ ಒಂದು ಜೆಡಿಎಸ್‌ನಲ್ಲಿ ಪ್ರಸ್ತಾಪ ಬಂದಿದೆ. ಆದರೆ, ಕಾಂಗ್ರೆಸ್‌ ಪಕ್ಷ ಇಂಧನ ಬದಲಿಗೆ ಕಂದಾಯ ಅಥವಾ ಬೆಂಗಳೂರು ನಗರಾಭಿವೃದ್ಧಿಯಂಥ ಪ್ರಮುಖ ಖಾತೆಯನ್ನು ಬಿಟ್ಟುಕೊಡಲು ಒಪ್ಪುತ್ತಾ ಎಂಬುದು ಕುತೂಹಲಕರವಾಗಿದೆ.

ಮೇಲಾಗಿ ಈಗಾಗಲೇ ಉಭಯ ಪಕ್ಷಗಳ ನಡುವೆ ಆಗಿರುವ ಒಪ್ಪಂದವನ್ನು ಬಹಿರಂಗವಾಗಿಯೇ ಘೋಷಿಸಲಾಗಿದೆ. ಅದರಲ್ಲಿ ಇಂಧನ ಖಾತೆ ಜೆಡಿಎಸ್‌ ಪಾಲಿಗೆ ಹೋಗಿದೆ. ಆದರೆ, ಶಿವಕುಮಾರ್‌ ಅವರು ಇಂಧನ ಖಾತೆ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವುದರಿಂದ ಅವರಿಗೆ ಬಿಟ್ಟುಕೊಡುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಒಲವು ಹೊಂದಿದ್ದಾರೆ ಎನ್ನಲಾಗಿದೆ.

ಆದರೆ, ಈ ಖಾತೆಗಾಗಿ ದೇವೇಗೌಡರ ಮೇಲೆ ತೀವ್ರ ಒತ್ತಡ ಹೇರಿದ್ದ ಎಚ್‌.ಡಿ.ರೇವಣ್ಣ ಅವರು ಈಗ ಬಿಟ್ಟುಕೊಡಲು ಸಹಮತ ವ್ಯಕ್ತಪಡಿಸುವ ಬಗ್ಗೆ ಅನುಮಾನವೂ ಇದೆ.

click me!