
ಬೆಂಗಳೂರು[ಜು.06]: ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಶುರುವಾದ ರಾಜೀನಾಮೆ ಆಟ ಇಂದು ಮಹತ್ತರ ತಿರುವು ಪಡೆದುಕೊಂಡಿದೆ. ರಾಮಲಿಂಗಾ ರೆಡ್ಡಿ, ವಿಶ್ವನಾಥ್ ಸೇರಿದಂತೆ ಒಟ್ಟು 11 ಮಂದಿ ಶಾಸಕರು ಸ್ಪೀಕರ್ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿ, ಸ್ವೀಕೃತಿ ಪತ್ರ ಪಡೆದು ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಲು ರಾಜಭವನಕ್ಕೆ ತೆರಳಿದ್ದಾರೆ. ಈ ಮೂಲಕ ಶಾಸಕರನ್ನು ರಾಜೀನಾಮೆ ತಡೆಯಲು ಯತ್ನಿಸಿದ ಡಿಕೆ ಶಿವಕುಮಾರ್ ಮಾತು ಕೂಡಾ ಫಲಿಸಲಿಲ್ಲ. ಇ್ನನು ಕಾಂಗ್ರೆಸ್ ಶಾಸಕ ಮುನಿರತ್ನ ರಾಜೀನಾಮೆ ಪತ್ರ ಸ್ಪೀಕರ್ ಕಚೇರಿಗೆ ಸಲ್ಲಿಸುವ ಮೊದಲೇ ಡಿ. ಕೆ ಶಿವಕುಮಾರ್ ಹರಿದು ಹಾಕಿದ್ದರಿಂದ ಪಟ್ಟಿಯಲ್ಲಿ ಅವರ ಹೆಸರು ಸದ್ಯಕ್ಕಿಲ್ಲ.
ರಾಜೀನಾಮೆ ನೀಡಲು ಬಂದ ಎರಡನೇ ಟೀಂ: ಆರ್. ಅಶೋಕ್ ಫುಲ್ ಆ್ಯಕ್ಟಿವ್!
ಆನಂದ್ ಸಿಂಗ್ ಸೇರಿ ರಾಜೀನಾಮೆ ಕೊಟ್ಟ 12 ಶಾಸಕರು
ಆನಂದ್ ಸಿಂಗ್, ಹೊಸಪೇಟೆ
ರಮೇಶ್ ಜಾರಕಿಹೊಳಿ, ಗೋಕಾಕ್
ಮಹೇಶ್ ಕುಮಟಳ್ಳಿ, ಅಥಣಿ
ವಿಶ್ವನಾಥ್, ಹುಣಸೂರು
ಪ್ರತಾಪ್ ಗೌಡ ಪಾಟೀಲ್, ಮಸ್ಕಿ
ಬಿ.ಸಿ. ಪಾಟೀಲ್, ಹಿರೆಕೇರೂರು
ಶಿವರಾಂ ಹೆಬ್ಬಾರ್, ಯಲ್ಲಾಪುರ
ನಾರಾಯಣಗೌಡ, ಕೆಆರ್.ಪೇಟೆ
ರಾಮಲಿಂಗಾ ರೆಡ್ಡಿ, ಬಿಟಿಎಂ ಲೇಔಟ್
ಎಸ್.ಟಿ. ಸೋಮಶೇಖರ್, ಯಶವಂತಪುರ
ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್
ಭೈರತಿ ಬಸವರಾಜ್, ಕೆ.ಆರ್.ಪುರಂ
ಸದ್ಯ ಈ ಎಲ್ಲಾ ಶಾಸಕರು ಸ್ಪೀಕರ್ ಕಾರ್ಯದರ್ಶಿಯಿಂದ ರಾಜೀನಾಮೆ ಸ್ವೀಕೃತಿ ಪತ್ರ ಪಡೆದು, ರಾಜ್ಯಪಾಲರ ಒಪ್ಪಿಗೆಗಾಗಿ ರಾಜಭವನಕ್ಕೆ ತೆರಳಿದ್ದಾರೆ. ಶಾಸಕರ ಈ ಸಾಮೂಹಿಕ ರಾಜೀನಾಮೆಯಿಂದ ದೋಸ್ತಿ ಸರ್ಕಾರ ಪತನಗೊಳ್ಳುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ.
ರಾಜೀನಾಮೆ ನೀಡ್ತೇವೆಂದು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ, ಅವರನ್ನು ನಂಬಬೇಡಿ: ಸ್ಪೀಕರ್ ಗರಂ!
ಇನ್ನುಳಿದಂತೆ ಸೌಮ್ಯ ರೆಡ್ಡಿ, ಜಯನಗರ| ಸುಬ್ಬಾರೆಡ್ಡಿ, ಬಾಗೇಪಲ್ಲಿ| ರೋಷನ್ ಬೇಗ್, ಶಿವಾಜಿನಗರ| ಮುನಿರತ್ನ, ಆರ್. ಆರ್ ನಗರ ಈ ಶಾಸಕರು ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.