ಸಿದ್ಧಾರ್ಥ್‌ರಿಂದ ಡಿಕೆಶಿಗೆ 20 ಕೋಟಿ ಹವಾಲಾ ಹಣ!, 20 ರೂ ನೋಟು ರಹಸ್ಯವೇನು?

By Web Desk  |  First Published Sep 18, 2019, 7:35 AM IST

ಕಾಫಿಡೇ ಸಿದ್ಧಾಥ್‌ರ್‍ರಿಂದ ಡಿಕೆಶಿಗೆ 20 ಕೋಟಿ ಹವಾಲಾ ಹಣ!| ಸ್ವತಃ ಡಿಕೆಶಿ ಪುತ್ರಿಯೇ ಸಿಂಗಾಪುರಕ್ಕೆ ಹೋಗಿ ಹಣ ಪಡೆದಿದ್ದರು| 20 ರು. ನೋಟು ತೋರಿಸಿ 20 ಕೋಟಿ ಪಡೆದಿದ್ದರು: ಇ.ಡಿ.| ಸಿಂಗಾಪುರದ ಹವಾಲಾ ಏಜೆಂಟ್‌ ರಜನೀಶ್‌ ತಪ್ಪೊಪ್ಪಿಗೆ


ಬೆಂಗಳೂರು[ಸೆ.18]: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕೆಫೆ ಕಾಫಿ ಡೇ ಮಾಲಿಕ ಸಿದ್ಧಾಥ್‌ರ್‍ ಅವರಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಕೇವಲ 20 ರು.ಗಳಲ್ಲಿ ಹವಾಲಾ ಮೂಲಕ 20 ಕೋಟಿ ರು. ವರ್ಗಾವಣೆ ನಡೆದಿತ್ತು ಎಂಬ ಕುತೂಹಲಕಾರಿ ಸಂಗತಿ ಜಾರಿ ನಿರ್ದೇಶನಾಲಯ(ಇ.ಡಿ.)ದ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಅಲ್ಲದೆ, ಈ ಹವಾಲಾ ಹಣ ಸ್ವೀಕಾರಕ್ಕೆ ಶಿವಕುಮಾರ್‌ ಪುತ್ರಿ ಐಶ್ವರ್ಯ ಖುದ್ದು ಸಿಂಗಾಪುರಕ್ಕೆ ತೆರಳಿದ್ದರು. ಆ ಹಣವನ್ನು ತಂದೆ ಸೂಚನೆ ಮೇರೆಗೆ ಐಶ್ವರ್ಯ ಅವರು ವಿದೇಶದಲ್ಲೇ ಬೇರೊಂದು ಉದ್ದಿಮೆಯಲ್ಲಿ ಹೂಡಿಕೆ ಮಾಡಿದ್ದರು. ಈ ವಹಿವಾಟಿನಲ್ಲಿ ಸಿಂಗಾಪುರದ ಪ್ರಜೆ, ಹವಾಲಾ ಏಜೆಂಟ್‌ ರಜನೀಶ್‌ ಗೋಪಿನಾಥನ್‌ ಮಧ್ಯಸ್ಥಿಕೆ ವಹಿಸಿದ್ದ ಎಂದು ಇ.ಡಿ. ಮೂಲಗಳು ಹೇಳಿವೆ.

Tap to resize

Latest Videos

ಡಿಕೆಶಿ ಆರೋಗ್ಯ ಏರುಪೇರು: ಗಾಲಿ ಕುರ್ಚಿಯಲ್ಲೇ ಸ್ಕ್ಯಾನಿಂಗ್‌ಗೆ!

ಎರಡು ವರ್ಷಗಳ ಹಿಂದೆ ಶಿವಕುಮಾರ್‌ ಮೇಲೆ ಐಟಿ ದಾಳಿ ನಡೆದಾಗ ಅವರ ಆಪ್ತ ಎನ್‌.ಚಂದ್ರಶೇಖರ್‌ ಸುಕಪುರಿ ಮನೆಯಲ್ಲಿ ಶೋಧಿಸಲಾಯಿತು. ಆಗ ಚಂದ್ರಶೇಖರ್‌ ವಿಚಾರಣೆ ವೇಳೆ ಹವಾಲಾ ದಂಧೆ ಕುರಿತು ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಗೋಪಿನಾಥನ್‌ನನ್ನು ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡ. ವಿದೇಶದಲ್ಲಿ ಭಾರತೀಯ ಕರೆನ್ಸಿ ತೋರಿಸಿ ಹವಾಲಾ ದಂಧೆ ನಡೆದಿದೆ. ಇದೊಂದು ಅಸಾಧಾರಣವಾದ ಹಣ ವರ್ಗಾವಣೆ ಪ್ರಕ್ರಿಯೆಯಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹವಾಲಾ ದಂಧೆಯಲ್ಲಿ ಕೆಪೆ ಕಾಫಿ ಡೇ ಉದ್ಯೋಗಿ, ಉದ್ಯಮಿ ಸಿದ್ಧಾಥ್‌ರ್‍ ಆಪ್ತ ದೀಕ್ಷಿತ್‌, ರವಿ ಹಾಗೂ ಶರ್ಮಾ ಟ್ರಾವೆಲ್ಸ್‌ ಸಂಸ್ಥೆ ನೌಕರ ಮತ್ತು ಹವಾಲಾ ಏಜೆಂಟ್‌ ರಫಿ ಪಾಲ್ಗೊಂಡಿದ್ದರು. ಹಾಗೆಯೇ ಗೋಪಿನಾಥನ್‌ನಿಂದ 1.2 ಕೋಟಿ ರು.ಗಳನ್ನು ಸಹ ಜಪ್ತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

13 ಕೋಟಿ ರು. ಚಿನ್ನ ಖರೀದಿಸಿದ ಡಿ.ಕೆ.ಶಿವಕುಮಾರ್ ಪತ್ನಿ

ದಾಳಿಗೂ ಮುನ್ನ ಸಿಂಗಾಪುರಕ್ಕೆ ಐಶ್ವರ್ಯ:

ಮಾಜಿ ಸಚಿವ ಶಿವಕುಮಾರ್‌ ಮೇಲೆ ಐಟಿ ದಾಳಿಗೂ ಒಂದು ವಾರ ಮುನ್ನ ಅವರ ಪುತ್ರಿ ಐಶ್ವರ್ಯ ಅವರು ರಜನೀಶ್‌ ಗೋಪಿನಾಥನ್‌ ಜತೆ ಸಿಂಗಾಪುರಕ್ಕೆ ತೆರಳಿದ್ದರು. ಅಲ್ಲಿ ಶಿವಕುಮಾರ್‌ ಸೂಚನೆ ಮೇರೆಗೆ .20 ನೋಟು ನೀಡಿ ಕೆಫೆ ಕಾಫಿ ಡೇ ಉದ್ಯೋಗಿ ದೀಕ್ಷಿತ್‌ (ಉದ್ಯಮಿ ಸಿದ್ಧಾಥ್‌ರ್‍ ಪರಮಾಪ್ತ) ಅವರಿಂದ .20 ಕೋಟಿ ಹಣ ಸ್ವೀಕರಿಸಿದ ಅವರು, ಬಳಿಕ ಆ ಹಣವನ್ನು ಮತ್ತೊಂದು ಉದ್ಯಮದಲ್ಲಿ ತೊಡಗಿಸಿ ಮರಳಿದ್ದರು ಎಂದು ಮೂಲಗಳು ಹೇಳಿವೆ.

ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ದೊರಕಿವೆ. ಗೋಪಿನಾಥನ್‌ ಮೊಬೈಲ್‌ ಪರಿಶೀಲಿಸಿದಾಗ ಶಿವಕುಮಾರ್‌ ಜೊತೆ ಮೆಸೇಜ್‌ ವಿನಿಮಯಗಳು ಪತ್ತೆಯಾಗಿವೆ. ಅಲ್ಲದೆ, ಮಾಜಿ ಸಚಿವರ ಆಪ್ತ ಚಂದ್ರಶೇಖರ್‌ ಜತೆ ಗೋಪಿನಾಥನ್‌ ನಿರಂತರ ಸಂಪರ್ಕದಲ್ಲಿದ್ದುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳ, ಪಾಂಡಿಚೆರಿ ಚುನಾವಣಾ ವೆಚ್ಚಕ್ಕಾಗಿ ಭಾರಿ ಹಣ ನೀಡಿದ್ದ ಡಿಕೆಶಿ

‘ಐಶ್ವರ್ಯ ಸಿಂಗಾಪುರಕ್ಕೆ ಬರುತ್ತಾರೆ. ಅವರೊಂದಿಗೆ ತೆರಳಿ ನಾನು ಹೇಳಿದ ವ್ಯಕ್ತಿಯಿಂದ ಹಣ ಪಡೆದುಕೊಳ್ಳಿ’ ಎಂದು ಚಂದ್ರಶೇಖರ್‌ ನನಗೆ ಸೂಚಿಸಿದ್ದರು. ಈ ಹಣ ಪಡೆಯಲು ಭಾರತದ .20 ನೋಟು ತೋರಿಸುವಂತೆ ನಿರ್ದೇಶಿಸಲಾಗಿತ್ತು. ಶಿವಕುಮಾರ್‌ ಅವರು ಚಂದ್ರಶೇಖರ್‌ ಮೂಲಕ ಸೂಚನೆಗಳನ್ನು ಕೊಡುತ್ತಿದ್ದರು. ಹಣ ಸ್ವೀಕರಿಸಿದ ಬಳಿಕ ಶಿವಕುಮಾರ್‌ ಅವರಿಗೆ ಮೆಸೇಜ್‌ ಮಾಡಿ ಖಚಿತಪಡಿಸಿದ್ದೆ ಎಂದು ಗೋಪಿನಾಥನ್‌ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.

click me!