ಸರ್ಕಾರ ಉಳಿಸದಿದ್ರೆ....ಡಿಕೆಶಿ ಧಮ್ಕಿ ಮುಂಬೈಗೆ ಕೇಳಿಸದಿದ್ರೆ?

By Web DeskFirst Published Jul 14, 2019, 6:42 PM IST
Highlights

ಅತೃಪ್ತ ಶಾಸಕರ ಮೇಲೆ ಡಿಕೆಶಿಗೆ ಇನ್ನೂ ಇದೆ ನಂಬಿಕೆ| ಅವರೆಲ್ಲಾ ನೈಜ ಕಾಂಗ್ರೆಸ್ಸಿಗರು ಎಂದ ಟ್ರಬಲ್ ಶೂಟರ್| ‘ತಮ್ಮ ಕ್ಷೇತ್ರದಲ್ಲಿ ಗೆಲುವಿಗಾಗಿ ಹುಲಿಯಂತೆ ಕಾದಾಡಿದ್ದಾರೆ’| ಅತೃಪ್ತರು ಸರ್ಕಾರ ಉಳಿಸಲಿದ್ದಾರೆ ಎಂದ ಡಿಕೆ ಶಿವಕುಮಾರ್| ವಿಪ್ ಉಲ್ಲಂಘಿಸಿದರೆ ಅನರ್ಹತೆ ಎಂದು ಎಚ್ಚರಿಸಿದ ಡಿಕೆಶಿ|

ಬೆಂಗಳೂರು(ಜು.14): ವಿಶ್ವಾಸಮತ ಯಾಚನೆ ವೇಳೆ ಅತೃಪ್ತ ಶಾಸಕರು ಸರ್ಕಾರದ ಪರ ಮತ ಚಲಾಯಿಸಲಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಡಿಕೆಶಿ, ಮುಂಬೈನಲ್ಲಿರುವ ಅತೃಪ್ತ ಶಾಸಕರು ನೈಜ ಕಾಂಗ್ರೆಸ್ಸಿಗರಾಗಿದ್ದು ತಮ್ಮ ಕ್ಷೇತ್ರದಲ್ಲಿ ಗೆಲುವಿಗಾಗಿ ಹುಲಿಯಂತೆ ಕಾದಾಡಿದ್ದಾರೆ ಎಂದು ಹೇಳಿದ್ದಾರೆ.

DK Shivakumar, Congress: I have confidence on all our MLAs. They have been elected from Congress party & they have been there for a long period. They have fought like tigers in their domain. pic.twitter.com/95OrAqUUy6

— ANI (@ANI)

ಅತೃಪ್ತ ಶಾಸಕರು ಶೀಘ್ರದಲ್ಲೇ ಮರಳಲಿದ್ದು, ಸಮ್ಮಿಶ್ರ ಸರ್ಕಾರವನ್ನು ಉಳಿಸುವ ಕೆಲಸ ಮಾಡಲಿದ್ದಾರೆ ಎಂದು ಡಿಕೆಶಿ ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಅತೃಪ್ತ ಶಾಸಕರಿಗೆ ಎಚ್ಚರಿಕೆಯನ್ನೂ ನೀಡಿರುವ ಡಿಕೆಶಿ, ಕಾಂಗ್ರೆಸ್ ತನ್ನೆಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಿದ್ದು ಒಂದು ವೇಳೆ ಯಾರಾದರೂ ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ ಅವರ ಶಾಸಕತ್ವ ಅನರ್ಹಗೊಳ್ಳಲಿದೆ ಎಂದು ಹೇಳಿದ್ದಾರೆ.

click me!