ನಾರಾಯಣ ಗೌಡ ಒಬ್ಬ ಕ್ರಿಮಿನಲ್‌: ಎಚ್‌ಡಿಕೆ

By Web Desk  |  First Published Aug 4, 2019, 8:25 AM IST

ನಾರಾಯಣ ಗೌಡ ಒಬ್ಬ ಕ್ರಿಮಿನಲ್‌: ಎಚ್‌ಡಿಕೆ| ಅನರ್ಹ ಶಾಸಕನ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಮಾಜಿ ಸಿಎಂ


[ಜುಕೆ.ಆರ್‌.ಪೇಟೆ: ಅನರ್ಹಗೊಂಡಿರುವ ಕೆ.ಆರ್‌.ಪೇಟೆ ಶಾಸಕ ನಾರಾಯಣ ಗೌಡ ಒಬ್ಬ ಕ್ರಿಮಿನಲ್‌ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಅಂತಹ ಕ್ರಿಮಿನಲ್‌ ಈ ಜಿಲ್ಲೆಯೊಳಗೆ ಮತ್ತೊಬ್ಬ ಸಿಗೊಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಆತ ನನ್ನ ತಂಗಿ ಕುಟುಂಬವನ್ನು ಬೀದಿಗೆ ತಂದ ಕ್ರಿಮಿನಲ… ಆತ ಎಂದು ಏಕವಚನದಲ್ಲಿ ಹರಿಹಾಯ್ದರು. ದೇವೇಗೌಡರಿಗೆ ಅಂದು ನಾರಾಯಣಗೌಡ ಮರಳು ಮಾಡಿದನು. ಇಡೀ ಕುಟುಂಬ ಅವನ ಪರವಾಗಿ ಇತ್ತು. ನಾನು ಅವನಿಗೆ ಟಿಕೆಟ್‌ ಬೇಡ ಎಂದಿದ್ದೆ. ಕೃಷ್ಣ ಅವರಿಗೆ ಟಿಕೆಟ್‌ ಕೊಡಲು ಸಿದ್ಧನಿದ್ದೆ. ಅಂದು ನನ್ನ ತಂಗಿ ಚುನಾವಣೆಯಲ್ಲಿ ನಾರಾಯಣಗೌಡನ ಗೆಲುವಿಗೆ ಶ್ರಮಿಸಿದಳು. ಹಳ್ಳಿ ಹಳ್ಳಿ ಸುತ್ತಿ ನಾರಾಯಣಗೌಡನ ಚುನಾವಣೆ ಮಾಡಿದ ಆಕೆಗೆ ಈತ ಕೊಟ್ಟಬಳುವಳಿ ಏನು? ನನ್ನ ತಂಗಿ ಮಗಳ ಮದುವೆಗೆ ದುಡ್ಡು ಕೊಟ್ಟೆಅಂತಾ ಹೇಳಿಕೊಂಡು ಬಂದ ಎಂದು ದೂರಿದರು.

Tap to resize

Latest Videos

ಎಲ್ಲಾ ಕ್ಷೇತ್ರಕ್ಕಿಂತ ಹೆಚ್ಚು ಹಣವನ್ನು ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ನಾನು ಕೊಟ್ಟೆ, ಚುನಾವಣಾ ವೆಚ್ಚಕ್ಕಾಗಿ ಹಣ ಕೊಟ್ಟೆ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಹಣ ಕೊಟ್ಟೆ. ಈತ (ನಾರಾಯಣಗೌಡ) ಒಂದೇ ಒಂದು ರೂಪಾಯಿ ನನ್ನ ಕೈಗೆ ಕೊಟ್ಟಿದ್ದಾನೆಯೇ ಕೇಳಿ? ಇತನದ್ದು ಸುಳ್ಳಿನ ರಾಜಕೀಯ. ಅಂತಹ ಸುಳ್ಳಲ್ಲಿ ರಾಜಕೀಯ ಮಾಡಬೇಕಾದ ಅವಶ್ಯಕತೆ ನನಗಿಲ್ಲ ಎಂದು ಮೂದಲಿಸಿದರು.

click me!