ಅತೃಪ್ತ ಶಾಸಕರೆಲ್ಲಾ ಅನರ್ಹ| ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರದಿಂದ ಬದಲಾಯ್ತು ನಂಬರ್ ಗೇಮ್| ಆದರೂ ಬಿಜೆಪಿಗಿಲ್ಲ ಟೆನ್ಶನ್
ಬೆಂಗಳೂರು[ಜು.28]: ರಾಜೀನಾಮೆ ನೀಡಿ ಬಂಡಾಯವೆದ್ದಿದ್ದ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸುವ ಮೂಲಕ ಐತಿಹಾಸಿಕ ಆದೇಶ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬಿ. ಎಸ್ ಯಡಿಯೂರಪ್ಪರಿಗೆ ಕೇವಲ ಒಂದು ದಿನ ಮೊದಲು ಬಹುದೊಡ್ಡ ಸವಾಲು ಎದುರಾಗಿದೆ, ಹೀಗಿದ್ದರೂ ವಿಶ್ವಾಸಮತ ಸಾಬೀತು ಏನೂ ಕಷ್ಟವಲ್ಲ. ಸ್ಪೀಕರ್ ಏಟಿಗೆ ನಂಬರ್ ಗೇಮ್ ಹೀಗಿದೆ.
ರಾಜೀನಾಮೆ ನೀಡಿದ 14 ಅತೃಪ್ತ ಶಾಸಕರು ಅನರ್ಹ: ಸ್ಪೀಕರ್ ನಿರ್ಧಾರ
ಹೊಸ ನಂಬರ್ ಗೇಮ್
ಒಟ್ಟು - 208
ಮ್ಯಾಜಿಕ್ - 105
ದೋಸ್ತಿ - 101
ಬಿಜೆಪಿ - 106
ಅತೃಪ್ತ ಶಾಸಕರು ಅನರ್ಹ: ಸ್ಪೀಕರ್ ನಿರ್ಧಾರಕ್ಕೆ ವಿಶ್ವನಾಥ್ ಫುಲ್ ಗರಂ!
17 ಶಾಸಕರ ಅನರ್ಹತೆಯಿಂದ ಸದನದ ಬಲ 207ಕ್ಕೆ ಕುಸಿದಿದೆ. ಆಂಗ್ಲೋ ಇಂಡಿಯನ್ ಸದಸ್ಯ ಸೇರಿ ಸದನ ಬಲ ಒಟ್ಟು 208. ಈಗ ಅಧಿಕಾರ ಹಿಡಿಯುವ ಮ್ಯಾಜಿಕ್ ನಂಬರ್ 105 ಆಗಿದೆ. ಬಿಜೆಪಿ ಬಲ ಪಕ್ಷೇತರ ಶಾಸಕ ಸೇರಿ 106.
ಈಗಾಗಲೇ ಕಾಂಗ್ರೆಸ್ ಶಾಸಕ ನಾಗೇಂದ್ರ ಅನರ್ಹತೆಯಿಂದ ಪಾರಾಗಿದ್ದು, ಆಂಗ್ಲೋ ಇಂಡಿಯನ್ ಶಾಸಕಿ ಸೇರಿ ದೋಸ್ತಿ ಬಲ 101 ಆಗಿದೆ.
ಅತೃಪ್ತ ಶಾಶಕರು ಅನರ್ಹಗೊಂಡಿದ್ದರೂ ಬಿಜೆಪಿ ಬಹುಮತ ಸಾಬೀತಿಗೆ ಬಹುತೇಕ ಭೀತಿ ನಿವಾರಣೆಯಾಗಿದೆ. ಈಗಾಗಲೇ ಬಿಜೆಪಿ ಬಳಿ ಬಹುಮತ ಸಾಬೀತುಪಡಿಸಲು ಬೇಕಾದ ಮ್ಯಾಜಿಕ್ ನಂಬರ್ 105ಕ್ಕಿಂತ ಒಂದು ಮತ ಹೆಚ್ಚು ಇದೆ. ಒಂದು ವೇಳೆ ಬಿಜೆಪಿ ನಾಯಕರೇ ಉಲ್ಟಾ ಹೊಡೆದರೆ ಮಾತ್ರ ಸಂಕಷ್ಟ ಎದುರಾಗಲಿದೆ.