ತಾರಕಕ್ಕೇರಿದ ಲಿಂಗಾಯತ ಸ್ವಾಮಿಗಳ ಜಗಳ: ಮಾತೆ ಮಹಾದೇವಿ ವಿರುದ್ಧ ಚಾರಿತ್ರ್ಯವಧೆ ಆರೋಪ

Published : Jul 29, 2017, 09:30 AM ISTUpdated : Apr 11, 2018, 12:37 PM IST
ತಾರಕಕ್ಕೇರಿದ ಲಿಂಗಾಯತ ಸ್ವಾಮಿಗಳ ಜಗಳ: ಮಾತೆ ಮಹಾದೇವಿ ವಿರುದ್ಧ ಚಾರಿತ್ರ್ಯವಧೆ ಆರೋಪ

ಸಾರಾಂಶ

ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಆಗ್ರಹಿಸುತ್ತಿರುವ ಮಾತೆ ಮಹಾದೇವಿ ವಿರುದ್ಧ ರಂಭಾಪುರಿ ಶ್ರೀಗಳು ಈಗ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು(ಜು.29): ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಆಗ್ರಹಿಸುತ್ತಿರುವ ಮಾತೆ ಮಹಾದೇವಿ ವಿರುದ್ಧ ರಂಭಾಪುರಿ ಶ್ರೀಗಳು ಈಗ ಗಂಭೀರ ಆರೋಪ ಮಾಡಿದ್ದಾರೆ.

ಮಾತೆ ಮಹಾದೇವಿ ಹಾಗೂ ಲಿಂಗಾನಂದರ ನಡುವಿನ ಸಂಬಂಧವನ್ನು ರಂಭಾಪುರಿ ಶ್ರೀಗಳು ಅನುಮಾನದ ದೃಷ್ಟಿಯಿಂದ ನೋಡಿದ್ದಾರೆ. ಅಲ್ಲದೆ, ಈ ಸಂಬಂಧ ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಮಾತೆ ಮಹಾದೇವಿ ಹಾಗೂ ಲಿಂಗಾನಂದ ನಡುವಿನ ಸಂಬಂಧ ಎಷ್ಟು ಅನೈತಿಕಯಿಂದ ಕೂಡಿದೆ ಎಂಬುದಕ್ಕೆ ಸ್ವತಃ ಲಿಂಗಾನಂದರೇ ಶಿಷ್ಯರೊಬ್ಬರಿಗೆ ಬರೆದ ರಹಸ್ಯ ಪತ್ರದ ಪ್ರತಿಗಳನ್ನು ಬಿಡುಗಡೆ ಮಾಡಿದ್ದಾರೆ. ಪತ್ರದಲ್ಲಿ ಮಾತೆ ಮಹಾದೇವಿ ಮಹಾದೇವಿ ಚಾರಿತ್ರ್ಯಬಗ್ಗೆ ಪ್ರಸ್ತಾಪಿಸಲಾಗಿದೆ. ಲಿಂಗಾನಂದರ ಜೊತೆ ಮಾತೆಗೆ ಅನೈತಿಕ ಸಂಬಂಧವಿದ್ದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, 35 ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕದಲ್ಲಿದ್ದ ಪತ್ರದ ವಿಚಾರ ಈಗ ಬಯಲಿಗೆಳೆದು ರಂಭಾಪುರಿ ಶ್ರೀಗಳು ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೀಕೆಂಡ್ ಮನರಂಜನೆಗೆ ಶಾರುಖ್ ಖಾನ್ ಈ ಸಿನಿಮಾಗಳು ರೆಡಿ ಇವೆ; ತಡಮಾಡಬೇಡಿ, ಕೂಡಲೇ ಒಟಿಟಿಯಲ್ಲಿ ನೋಡಿ!
ಶತವಧಾನಿ ಆರ್ ಗಣೇಶ್ ಸೇರಿ ಕರ್ನಾಟಕ 9 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟ, ಇಲ್ಲಿದೆ ಫುಲ್ ಲಿಸ್ಟ್