ರಾಜ್ಯಸಭೆ ಎಲೆಕ್ಷನ್ನಲ್ಲಿ ಮಾನ ಉಳಿಸಿಕೊಳ್ಳಲು ‘ಕೈ’ ಕಸರತ್ತು : ಬೆಂಗಳೂರು ರೆಸಾರ್ಟ್‌ನಲ್ಲಿ ಗುಜರಾತ್ ಪಾಲಿಟಿಕ್ಸ್..!

By Suvarna Web DeskFirst Published Jul 29, 2017, 9:04 AM IST
Highlights

ರಾಷ್ಟ್ರ ರಾಜಕಾರಣದಲ್ಲಿ  ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ, ಗುಜರಾತ್ ರಾಜಕಾರಣದಲ್ಲಿ ಹಠಾತ್ ಬೇಳವಣಿಗೆಯೊಂದು ನಡೆದಿದ್ದು. ಗುಜರಾತ್ ರಾಜ್ಯಸಭೆಗೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಮೋದಿ-ಅಮಿತ್ ಶಾ ಕಾರ್ಯತಂತ್ರಕ್ಕೆ ಬೆದರಿದ ಕಾಂಗ್ರೆಸ್  ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿದೆ. ರೆಸಾರ್ಟ್​ ರಾಜಕೀಯಕ್ಕೆ ಬೆಂಗಳೂರನ್ನ ಆರಿಸಿಕೊಳ್ಳಲಾಗಿದ್ದು, ತಡರಾತ್ರಿಯೇ ಶಾಸಕರು ಬೆಂಗಳೂರಿಗ ಬಂದಿಳಿದಿದ್ದಾರೆ.

ಬೆಂಗಳೂರು(ಜು.29): ರಾಷ್ಟ್ರ ರಾಜಕಾರಣದಲ್ಲಿ  ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ, ಗುಜರಾತ್ ರಾಜಕಾರಣದಲ್ಲಿ ಹಠಾತ್ ಬೆಳವಣಿಗೆಯೊಂದು ನಡೆದಿದ್ದು. ಗುಜರಾತ್ ರಾಜ್ಯಸಭೆಗೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಮೋದಿ-ಅಮಿತ್ ಶಾ ಕಾರ್ಯತಂತ್ರಕ್ಕೆ ಬೆದರಿದ ಕಾಂಗ್ರೆಸ್  ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿದೆ. ರೆಸಾರ್ಟ್​ ರಾಜಕೀಯಕ್ಕೆ ಬೆಂಗಳೂರನ್ನ ಆರಿಸಿಕೊಳ್ಳಲಾಗಿದ್ದು, ತಡರಾತ್ರಿಯೇ ಶಾಸಕರು ಬೆಂಗಳೂರಿಗ ಬಂದಿಳಿದಿದ್ದಾರೆ.

ರಾಜ್ಯಸಭೆ ಎಲೆಕ್ಷನ್​ನಲ್ಲಿ ಮಾನ ಉಳಿಸಿಕೊಳ್ಳಲು ‘ಕೈ’ ಕಸರತ್ತು

Latest Videos

ರಾಷ್ಟ್ರ ರಾಜಕಾರಣದಲ್ಲಿ ಹಠಾತ್ ಬೆಳವಣಿಗೆಯೊಂದು ನಡೆದಿದೆ. ಆಗಸ್ಟ್ 8ರಂದು ಗುಜರಾತ್​'ನಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ-ಕಾಂಗ್ರೆಸ್ ಪ್ರತಿಷ್ಠೆಗೆ ಬಿದ್ದಿವೆ, ಬಿಜೆಪಿ ಕುದುರೆ ವ್ಯಾಪಾರಕ್ಕೆ ಕಾಂಗ್ರೆಸ್ ಬೆದರಿದ್ದು. ರೆಸಾರ್ಟ್​ ರಾಜಕೀಯದ ಮೊರೆ ಹೋಗಿದೆ. ಕಾಂಗ್ರೆಸ್ ತಮ್ಮ ಶಾಸಕರ ರಕ್ಷಣೆಗೆ ಬೆಂಗಳೂರನ್ನು ಆಯ್ಕೆ ಮಾಡ್ಕೊಂಡಿದ್ದು, ತಡರಾತ್ರಿ 2.30ರ ಸುಮಾರಿಗೆ 32 ಶಾಸಕರು ಕೆಂಪೇಗೌಡ ಏರ್​ಪೋರ್ಟ್​ಗೆ ಬಂದಿಳಿದರು.

ಇನ್ನೂ ಗುಜರಾತ್ ಕಾಂಗ್ರೆಸ್ ಶಾಸಕರ ರೆಸಾರ್ಟ್​ ವಾಸ್ತವ್ಯದ ಉಸ್ತುವಾರಿ ಹೊಣೆಯನ್ನು ಕರ್ನಾಟಕದ ಇಂಧನ ಸಚಿವ ಡಿಕೆ. ಶಿವಕುಮಾರ್​ಗೆ ವಹಿಸಲಾಗಿದೆ. ಹೀಗಾಗೇ ಕಳೆದ ರಾತ್ರಿ ಡಿ.ಕೆ. ಶಿವಕುಮಾರ್ ಸೋದರ ಡಿ.ಕೆ ಸುರೇಶ್ ವಿಮಾನ ನಿಲ್ದಾಣಕ್ಕೆ ಬಂದು ಶಾಸಕರನ್ನು ಬರಮಾಡಿಕೊಂಡರು. ಅಲ್ಲಿಂದ ನೇರವಾಗಿ ಮೊದಲೇ ನಿಗದಿಪಡಿಸಿದಂತೆ ಬಿಡದಿ ಬಳಿ ಇರುವ ಈಗಲ್ ಟನ್ ರೆಸಾರ್ಟ್​ ಗೆ ಶಾಸಕರನ್ನು ಕರೆ ತಂದರು.

ಆಗಸ್ಟ್ 8ರಂದು ನಡೆಯೋ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್​ನಿಂದ ಅಹ್ಮದ್ ಪಟೇಲ್ ಸ್ಪರ್ಧಿಸಿದ್ರೆ, ಬಿಜೆಪಿಯಿಂದ ಅಮಿತ್ ಶಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ಪರ್ಧೆಗಿಳಿದಿದ್ದಾರೆ. ಬಿಜೆಪಿ ತಮ್ಮ ಅಭ್ಯರ್ಥಿಗಳ ಗೆಲುವಿಗೆ ತಂತ್ರ ರೂಪಿಸಿ ಕಾಂಗ್ರೆಸ್ ಆಶಕರಿಗೆ ಗಾಳ ಹಾಕುತ್ತಿದೆ. ಈಗಾಗಲೇ ಗುಜರಾತ್ ಮಾಜಿ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಶಂಕರ್ ಸಿಂಗ್ ವಘೇಲಾ ಸೇರಿ ಒಟ್ಟು 6 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ  57 ಶಾಸಕರನ್ನ ಹೊಂದಿದ್ದ ಕಾಂಗ್ರೆಸ್ ಈಗ ಕೇಲವ 51 ಮಂದಿ ಶಾಸಕರ ಸಂಖ್ಯೆ ಹೊಂದಿದಂತಾಗಿದೆ. ಹೀಗಾಗೇ ಉಳಿದ ಶಾಸಕರನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ರೆಸಾರ್ಟ್​ ರಾಜಕೀಯದ ಮೊರೆ ಹೋಗಿದೆ.

 

click me!