#MeToo : ಗುರುಪ್ರಸಾದ್ ಹೇಳಿಕೆಗೆ ಮಾಜಿ ಪತ್ನಿ ಗರಂ

Published : Nov 01, 2018, 09:16 AM IST
#MeToo :  ಗುರುಪ್ರಸಾದ್ ಹೇಳಿಕೆಗೆ ಮಾಜಿ ಪತ್ನಿ ಗರಂ

ಸಾರಾಂಶ

ನಿರ್ದೇಶಕ ಮಠ ಗುರುಪ್ರಸಾದ್‌ ಅವರ ಹೇಳಿಕೆಯನ್ನು ಸಂಗೀತಾ ಭಟ್‌ ಪತಿ ಸುದರ್ಶನ್‌ ಹಾಗೂ ಗುರುಪ್ರಸಾದ್‌ ಅವರ ಮಾಜಿ ಪತ್ನಿ ಆರತಿ ಖಂಡಿಸಿದ್ದಾರೆ.

ಬೆಂಗಳೂರು :  ‘ಬೇರೊಬ್ಬರ ಮೇಲೆ ಮೀ ಟೂ ಆರೋಪ ಮಾಡುವ ಮೂಲಕ ನಟಿಯರು ತಾವು ಪತಿವ್ರತೆಯರೆಂದು ಸಾಬೀತು ಮಾಡಿ ಕೊಳ್ಳುವುದಕ್ಕೆ ಹೊರಟಿದ್ದಾರೆ’ ಎನ್ನುವ ನಿರ್ದೇಶಕ ಮಠ ಗುರುಪ್ರಸಾದ್‌ ಅವರ ಹೇಳಿಕೆಯನ್ನು ಸಂಗೀತಾ ಭಟ್‌ ಪತಿ ಸುದರ್ಶನ್‌ ಹಾಗೂ ಗುರುಪ್ರಸಾದ್‌ ಅವರ ಮಾಜಿ ಪತ್ನಿ ಆರತಿ ಖಂಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಆರತಿ, ನಾನು ಗುರುಪ್ರಸಾದ್‌ ಪತ್ನಿ ಅಲ್ಲ. ಮೂರು ವರ್ಷಗಳ ಹಿಂದೆಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಆದರೆ, ನಾನು ಗುರುಪ್ರಸಾದ್‌ ಅವರ ಹಲವು ಸಿನಿಮಾಗಳಿಗೆ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದೇನೆ. ಈಗ ಮೀ ಟೂ ಮೂಲಕ ತಮಗಾದ ನೋವನ್ನು ಹೇಳಿಕೊಳ್ಳುತ್ತಿರುವ ನಟಿಯರ ಧೈರ್ಯ ಮೆಚ್ಚಬೇಕು. ಇವರೆಲ್ಲ ಪತಿವ್ರತೆಯರೆಂದು ತೋರಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ ಎಂದಿರುವ ಗುರುಪ್ರಸಾದ್‌ ಅವರ ವರ್ತನೆಯನ್ನು ನಾನು ಖಂಡಿಸುತ್ತೇನೆ. ಬೇರೊಬ್ಬರ ಖಾಸಗಿ ಜೀವನದ ಬಗ್ಗೆ ಮಾತನಾಡುವ ಮೊದಲು ತಾವು ಏನು ಅಂತ ನೋಡಿಕೊಳ್ಳಬೇಕು. ತಮ್ಮ ಜೀವನವನ್ನು ಮೊದಲು ಸರಿ ಮಾಡಿಕೊಳ್ಳಬೇಕು. ಹೆಣ್ಣುಮಕ್ಕಳ ಬಗ್ಗೆ ಹೀಗೆಲ್ಲ ಮಾತನಾಡುವುದು ಒಳ್ಳೆಯದಲ್ಲ ಎಂದು ಕಿಡಿ ಕಾರಿದ್ದಾರೆ.

ನಟಿ ಸಂಗೀತಾ ಭಟ್‌ ಪತಿ ಸುದರ್ಶನ್‌ ಮಾತನಾಡಿ, ಹೆಣ್ಣುಮಕ್ಕಳು ತಮಗೆ ಆದ ಅನ್ಯಾಯ ಹೇಳಿಕೊಳ್ಳಬೇಕೆಂಬುದು ಮೀ ಟೂ ಉದ್ದೇಶ. ಆ ಕಾರಣಕ್ಕೆ ಸಂಗೀತಾ ಭಟ್‌ ಕೂಡ ಚಿತ್ರರಂಗದಲ್ಲಿ ತಮಗೆ ಆದ ಕೆಟ್ಟಅನುಭವ ಹೇಳಿಕೊಂಡಿದ್ದಾರೆ. ಯಾರ ಹೆಸರನ್ನೂ ಹೇಳಿಲ್ಲ. ಇವರಿಗೆ ಕ್ಯಾರೆಕ್ಟರ್‌ ಸರ್ಟಿಫಿಕೆಟ್‌ ಕೊಡುವುದಕ್ಕೆ ಗುರುಪ್ರಸಾದ್‌ ಯಾರು ಎಂದು ಪ್ರಶ್ನಿಸಿದ್ದಾರೆ.

‘ಮಠ’ ಗುರುಪ್ರಸಾದ್‌ ಏನು ಹೇಳಿದ್ದರು?

ಮೀ ಟೂ ವೇದಿಕೆ ದುರ್ಬಳಕೆ ಆಗುತ್ತಿದೆ. ನಟಿಯರು ಹೀಗೆ ಬೇರೊಬ್ಬರ ಮೇಲೆ ಆರೋಪ ಮಾಡುವ ಮೂಲಕ ತಾವು ಪತಿವ್ರತೆಯರೆಂದು ತೋರಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ.

ಸಂಗೀತಾ ತಮಗಾದ ಕೆಟ್ಟಅನುಭವ ಹೇಳಿಕೊಳ್ಳುವುದಕ್ಕೆ ನನ್ನ ಜತೆ ಮೂರು ದಿನ ಚರ್ಚೆ ಮಾಡಿದ್ದಾರೆ. ಹೇಳಿಕೊಂಡ ಮೇಲೆ ಬರುವ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ್ದೇವೆ. ಆದರೂ ನಟಿಯರ ಬಗ್ಗೆ ಗುರುಪ್ರಸಾದ್‌ ಇಷ್ಟುಕೀಳಾಗಿ ಮಾತನಾಡಬಾರದಿತ್ತು. ಯಾರೂ ಏನೇ ಮಾತನಾಡಿದರೂ ನಾನು ನನ್ನ ಪತ್ನಿ ಸಂಗೀತಾ ಜತೆ ನಿಲ್ಲುತ್ತೇನೆ ಎಂದು ಸುದರ್ಶನ್‌ ತಿಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಮೆರಿಕಾದಲ್ಲಿ ಉದ್ಯೋಗ ಅರಸುತ್ತಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿನಿಯರು ಸಾವು
ಕೊಡಗಿನಲ್ಲಿ ಹೊಸ ವರ್ಷದಂದೇ ಯುವಕನ ಕೊಲೆ, ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಭೇಟಿಗೆ ಬರುತ್ತಿದ್ದಾಗ ಹೊಂಚು ಹಾಕಿ ಕೃತ್ಯ!