
ಬೆಂಗಳೂರು (ಡಿ. 25): ಸಿದ್ದರಾಮಯ್ಯ, ಖರ್ಗೆ, ಡಿಕೆಶಿ, ಪರಮೇಶ್ವರ್ ಜೊತೆ ಪತ್ರಕರ್ತರು ಅರ್ಧ ಗಂಟೆ ಕುಳಿತರೆ ಅವರೇನೂ ತೀರಾ ಒಳಗಿನ ಸುದ್ದಿ ಹೇಳುವುದಿಲ್ಲ. ಆದರೂ ಗಾಳಿಯ ದಿಕ್ಕು ಅರಿಯುವುದು ಕಷ್ಟ ಏನಲ್ಲ. ಆದರೆ ದಿನೇಶ್ ಗುಂಡೂರಾವ್ ಮಾತ್ರ ಪತ್ರಕರ್ತರು ಎರಡೆರಡು ಗಂಟೆ ಕುಳಿತುಕೊಂಡು ಕೆಣಕಿದರೂ ಸುದ್ದಿಯ ಒಂದು ಲೈನ್ ಕೂಡ ಬಿಟ್ಟುಕೊಡುವ ಆಸಾಮಿ ಅಲ್ಲ.
ನಾನೊಬ್ಬ ಮಿಸ್ಟೇಕನ್ ಐಡೆಂಟಿಟಿ: ನೋವು ಹೊರ ಹಾಕಿದ ಡಿಕೆಶಿ
ಸಂಪುಟ ವಿಸ್ತರಣೆ ಚರ್ಚೆಗೆ ಬಂದಿದ್ದ ದಿನೇಶ್ ಗುಂಡೂರಾವ್ ರೂಮ್‌ಗೆ ಹೋಗಿ ಸಭೆಯಲ್ಲಿ ಏನಾಯಿತು ಎಂದು ಎಷ್ಟೇ ಕೇಳಿದರೂ ಒಂದು ಅಕ್ಷರವೂ ಹೇಳದೆ ವಿಷಯಾಂತರ ಮಾಡುತ್ತಿದ್ದರು. ಪತ್ರಕರ್ತರು ಪಟ್ಟು ಬಿಡದೆ ಕುಳಿತಾಗ ಉಪ್ಪಿಟ್ಟು ಚಹಾ ತರಿಸಿದ ದಿನೇಶ್, ರಾಹುಲ್ ಮನೆಗೆ ಹೋಗುವವರೆಗೆ ಆರಾಮಾಗಿ ಹರಟೆ ಹೊಡೆದರೇ ಹೊರತು ಸುದ್ದಿ ಮಾತ್ರ ಬಿಟ್ಟುಕೊಡಲಿಲ್ಲ. ಪತ್ರಕರ್ತರ ಗೊಡವೆಯೇ ಬೇಡವೆಂದು ಸಿದ್ದು, ಪರಮ್, ದಿನೇಶ್, ರಾಹುಲ್ ಮನೆಯಿಂದ ಸೀದಾ ಏರ್‌ಪೋರ್ಟ್‌ಗೆ ಹೋದರೇ ಹೊರತು ಕರ್ನಾಟಕ ಭವನಕ್ಕೂ ಬರಲಿಲ್ಲ. ದಿನೇಶ್ ಯುವಕರಾದರೂ ವರಸೆಯಲ್ಲಿ ಹಳೆಯ ಜಮಾನಾದ ಕಾಂಗ್ರೆಸ್ ನಾಯಕರಿದ್ದಂತೆ ಇದ್ದಾರೆ. ಉಪ್ಪಿಟ್ಟು, ಚಹಾ ಜಮಾಯಿಸಿ. ಆದರೆ ಸುದ್ದಿ ಮಾತ್ರ ಕೇಳಬೇಡಿ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.