ಇಂದಿನ ದಿನ ಭವಿಷ್ಯ

Published : Dec 21, 2017, 07:55 AM ISTUpdated : Apr 11, 2018, 12:54 PM IST
ಇಂದಿನ ದಿನ ಭವಿಷ್ಯ

ಸಾರಾಂಶ

ಇಂದಿನ ದಿನ ಭವಿಷ್ಯ ನಿಮಗಾಗಿ...

ಇಂದಿನ ದಿನ ಭವಿಷ್ಯ ನಿಮಗಾಗಿ...

ಮೇಷ: ಕಲಾವಿದರು ಹಾಗೂ ಕಲಾಪ್ರೇಮಿಗಳಿಗಿದು ಒಳ್ಳೆಯ ಕಾಲ. ಆದಾಯವು ಹೆಚ್ಚು. ನಿಮ್ಮ ಕಲಾಪ್ರೌಢಿಮೆಗೆ ಸರಿಯಾದ ಬೆಲೆ ಸಿಗಲಿದೆ.

ವೃಷಭ: ಗೆಳೆಯರೆಲ್ಲೂ ಸೇರಿ ನಿಮ್ಮನ್ನು ಪ್ರಶಂಸಲಿದ್ದಾರೆ. ನಿಮ್ಮ ಮೇಲಿನ ಜವಾಬ್ದಾರಿ ಹೆಚ್ಚಾಗಲಿದೆ. ನಿಮ್ಮ ಆತ್ಮ ಸ್ಥೈರ್ಯವೂ ಹೆಚ್ಚಲಿದೆ.

ಮಿಥುನ: ಮನೆ ಕೊಳ್ಳಲು, ಜಾಗದ ಅನ್ವೇಷಣೆಗಳಿಗೆ ಸುಸಮಯ. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಜನರಿಗೆ ಇದು ಉತ್ತಮ ದಿನವಾಗಿದೆ.

ಕಟಕ: ವ್ಯವಹಾರದಲ್ಲಿ ಪ್ರಗತಿ. ಭಿನ್ನಾಭಿಪ್ರಾಯ ಭೇದಗಳಿಂದ ವೈಮನಸ್ಯಗಳು ಉಂಟಾಗಬಹುದು. ಎಚ್ಚರಿಕೆಯಿಂದ ವ್ಯವಹರಿಸಿ.

ಸಿಂಹ: ಸಫಲತೆಯು ಈಗ ನಿಮ್ಮ ಕಡೆಗಿದೆ. ಹೊಸ ಹೂಡಿಕೆಗಳಿಗೆ ಇದು ಸಕಾಲ. ಸ್ವಲ್ಪ ಯೋಚಿಸಿ ಮುನ್ನಡೆದರೆ ಪ್ರಗತಿಯತ್ತ ಸಾಗುವಿರಿ.

ಕನ್ಯಾ: ಕಂಡ ಕಂಡಲೆಲ್ಲಾ ತಿನ್ನುವ ಬುದ್ದಿ ಅಷ್ಟೇನು ಒಳಿತಲ್ಲ. ಹೊಟ್ಟೆ ಕೆಟ್ಟರೆ ನಿಮ್ಮ ಸಹಾಯಕ್ಕೆ ಯಾರೂ ಬರಲ್ಲ. ಪೂರಕ ಪರಿಸ್ಥಿತಿ ಇರಲ್ಲ.

ತುಲಾ: ನಿನ್ನೆಯ ಆಹಾರದ ವ್ಯತ್ಯಾಸಗಳಿಂದ ಇಂದು ನಿಮ್ಮ ದೇಹಾರೋಗ್ಯವು ಕೆಡಲಿದೆ. ಅದಕ್ಕಾಗಿ ತುಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ.

ವೃಶ್ಚಿಕ: ಅನಗತ್ಯ ಚಿಂತೆಗಳು ಈ ದಿನಗಳಲ್ಲಿ ದೂರಾಗಲಿವೆ. ಸ್ಥಳ ಬದಲಾವಣೆ ಸಾಧ್ಯತೆಯೂ ಇದೆ. ನಿಮ್ಮ ಧೈರ್ಯವೇ ನಿಮಗೆ ಶ್ರೀರಕ್ಷೆ ಆಗಲಿದೆ.

ಧನುಸ್ಸು: ಕನಸಲ್ಲಿ ಕಂಡಂತೆ ಇಂದು ಎಲ್ಲವೂ ಒಳ್ಳೆಯದೇ ಆಗಲಿದೆ. ನಿಮ್ಮ ಮನಸ್ಸು ಉಲ್ಲಾಸದಿಂದಿರಲು ನಿಮ್ಮ ಗೆಳೆಯನ ವಾಟ್ಸಪ್ ಮೆಸೇಜ್ ಕಾರಣ.

ಮಕರ: ನಿಮ್ಮ ಗುರಿ ಸಾಧನೆಯತ್ತ ಮಾತ್ರ ನಿಮ್ಮ ಆಸಕ್ತಿ ಇದೆ. ಆಯವ್ಯಯದಲ್ಲಿ ಏರುಪೇರು. ಕ್ರಯ ವಿಕ್ರಯಗಳ ಮಾತುಕತೆಗಳು ನಡೆಯಲಿದೆ.

ಕುಂಭ: ನಿಮ್ಮ ಮನಸ್ಸನ್ನು ಕೊರೆಯುತ್ತಿರುವ ಹಳೆಯ ನೆನಪುಗಳನ್ನು ದೂರಾಗಲಿದೆ. ಅವುಗಳಿಂದ ಹೊರ ಬನ್ನಿ. ಕೆಲಸ-ಕಾರ್ಯದಲ್ಲಿ ತೊಡಗಿ.

ಮೀನ: ಮನೆ ವಾತಾವರಣದಲ್ಲಿ ಈ ಸಮಯ ನಿಮಗೆ ಪೂರಕವಾಗಿರಲಿದೆ. ಖರ್ಚು ವೆಚ್ಚಗಳಲ್ಲಿ  ವ್ಯತ್ಯಯವಾಗಲಿದೆ. ಖುಷಿಯ ದಿನ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?