
ಮೇಷ
ಕಷ್ಟದ ದಿನಗಳು ನಿಮಗೆ ರೂಢಿಯಾಗಿದೆ.
ಹಾಗಾಗಿ ಹರುಷ-ಹುರುಪುಗಳು ನಿಮ್ಮಲ್ಲಿಲ್ಲ.
ಅದರಿಂದ ಸ್ವಲ್ಪ ಹೊರಬರಲು ಪ್ರಯತ್ನಿಸಿರಿ.
ವೃಷಭ
ಪುಟಾಣಿಗಳ ಆರೋಗ್ಯದತ್ತ ಗಮನ ಹರಿಸಿ.
ಇಲ್ಲವಾದಲ್ಲಿ ನಿಮ್ಮ ಕೆಲಸ-ಕಾರ್ಯಗಳು
ಏರುಪೇರಾಗಲಿವೆ. ಸ್ವಲ್ಪ ಸಂಯಮವಿರಲಿ.
ಮಿಥುನ
ಮನೆಯಲ್ಲಿ ಮದುವೆಯ ಮಾತುಕತೆ
ನಡೆಯಲಿದೆ. ಆತಂಕ ಪಡುವಂಥದ್ದೇನಿಲ್ಲ.
ನಿಮಗೆ ತಿಳಿದವರಿಂದ ಸಂಬಂಧ ಕುದುರಲಿದೆ.
ಕಟಕ
ಮನೆಯಲ್ಲಿನ ಹಿರಿಯರ ಮಾತನ್ನು ಕೇಳಿ.
ಇದರಿಂದ ಅವರಿಗೂ ಸಮಾಧಾನ. ಅವರಿಗೆ
ನೀವೇ ಎಲ್ಲಾ. ಹಾಗಾಗಿ ಅವರಂತೆ ನಡೆಯಿರಿ.
ಸಿಂಹ
ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡರೆ
ನಿಮಗೆ ನೋವೇ ಇರದು. ಅವರ ಆಲೋಚನೆ
ಗಳಿಗೂ ಅವಕಾಶ ಕೊಟ್ಟಲ್ಲಿ ಕಲಹವಿರದು.
ಕನ್ಯಾ
ಮಹಿಳೆಯರಲ್ಲಿ ಆತಂಕ ಕಡಿಮೆಯಾಗಲಿದೆ.
ಈ ದಿನದಿಂದ ನಿಮ್ಮ ಮನಸ್ಸು ಪ್ರಶಾಂತವಾಗ
ಲಿದೆ. ನಿಮಗಿಂದು ಭರ್ಜರಿ ಆತಿಥ್ಯ ಸಿಗಲಿದೆ.
ತುಲಾ
ನಿಮ್ಮ ಉದಾರ ಬುದ್ಧಿಯು ನಿಮಗೇ ಮಾರಕ
ವಾಗಲಿದೆ. ಅದನ್ನು ದುರುಪಯೋಗಪಡಿಸಿ
ಕೊಳ್ಳುವವರೇ ಹೆಚ್ಚಾಗಿದ್ದಾರೆ. ಹುಷಾರಾಗಿರಿ.
ವೃಶ್ಚಿಕ
ನಿಮ್ಮ ತಾಳ್ಮೆಗೆ ತಕ್ಕ ಫಲ ಸಿಗಲಿದೆ. ಸಾಕಷ್ಟು
ದಿನಗಳಿಂದ ಕಾಯುತ್ತಿದ್ದ ಇಂತಹ ದಿನವು
ಇಂದು ಬಂದಿದೆ. ಖುಷಿಯಲ್ಲಿ ಜೀವಿಸಿ.
ಧನಸ್ಸು
ನಿಮ್ಮ ಗ್ರಹಗತಿಗಳಿಗನುಸಾರವಾಗಿ ನಿಮ್ಮ
ನಡೆಯು ನಿಮಗೆ ಒಳಿತನ್ನೇ ಮಾಡಲಿದೆ.
ಆತಂಕಗಳು ದೂರಾಗಲಿವೆ. ಆದಾಯ ಹೆಚ್ಚು.
ಮಕರ
ಯಾವುದೇ ಕಾರಣವಿಲ್ಲದೆಯೇ ಮನಸ್ಸು
ಚಂಚಲವಾಗಿದೆ. ಚಡಪಡಿಕೆ ಹೆಚ್ಚಾಗಿವೆ.
ಧ್ಯಾನ-ಪ್ರಾಣಾಯಮಗಳನ್ನು ಮಾಡಿ.
ಕುಂಭ
ನಿಮ್ಮ ನೆರೆಯವರು ನಿಮಗೆ ಸಹಾಯ ಹಸ್ತ
ಚಾಚಲಿದ್ದಾರೆ. ನೀವು ನಿರೀಕ್ಷಿಸದೇ ಇದ್ದ
ಸಂಗತಿಗಳು ಇಂದು ಘಟಿಸಲಿವೆ.
ಮೀನ
ಕಂಡ ಕಂಡವರ ಬಗ್ಗೆ ನಿಮ್ಮ ಕಳಕಳಿ ಕಡಿಮೆ
ಮಾಡಿಕೊಳ್ಳಿ. ಅವರೆಲ್ಲರ ಜೀವನವನ್ನು
ಮೀನ ಹಸನುಗೊಳಿಸುವ ಕೆಲಸವು ನಿಮ್ಮದಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.