
ಮೇಷ : ರಾಶಿಯ ಅಧಿಪತಿ ಶನಿಯೊಂದಿಗೆ ಸೇರಿದ್ದಾನೆ ಕೋಪ-ತಾಪಗಳ ಸಂಭವ, ಯೋಚಿಸಿ ಕಾರ್ಯಗಳನ್ನು ಮಾಡಿ, ಸುಬ್ರಹ್ಮಣ್ಯ ಹಾಗೂ ಶನೈಶ್ಚರ ಆರಾಧನೆ ಮಾಡಿ
ವೃಷಭ : ಅಷ್ಟಮದಲ್ಲಿ ಶನಿ ಕುಜರ ಸಂಯೋಗ, ಆರೋಗ್ಯದಲ್ಲಿ ಏರುಪೇರು, ಅರ್ಧನಾರೀಶ್ವರ ದರ್ಶನ ಮಾಡಿ
ಮಿಥುನ : ಬಾಧೆಯ ಸ್ಥಾನದಲ್ಲಿ ಶನಿ-ಕುಜರ ಸಂಯೋಗವಾಗಿದೆ, ದಾಂಪತ್ಯದಲ್ಲಿ ಕಲಹ, ಭಿನ್ನಾಭಿಪ್ರಾಯ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ
ಕಟಕ : ರೋಗಸ್ಥಾನದಲ್ಲಿ ಶನಿ ಕುಜರ ಯುತಿ ಇರುವುದರಿಂದ ಕಾಲಿನ ನೋವು, ಮೂಳೆಗಳ ಬಾಧೆ ಕಾಡಲಿದೆ, ಶತ್ರುಗಳ ಕಾಟ.
ಸಿಂಹ : ಪಂಚಮದ ಶನಿ-ಕುಜರ ಯುತಿಯಿಂದ ಮಕ್ಕಳಲ್ಲಿ ಕಾದಾಟ, ಮಕ್ಕಳಿಂದ ಬೇಸರ, ಸಾಮಾನ್ಯ ದಿನ
ಕನ್ಯಾ : ರಾಶಿಯ ಅಧಿಪತಿ ಬಾಧೆಯಲ್ಲಿದ್ದಾನೆ ಜೊತೆಗೆ ರಾಶಿಗೆ ಶುಕ್ರ ದೃಷ್ಟಿ ಇರುವುದರಿಂದ ಸ್ವಲ್ಪ ಸಿಹಿ, ಸ್ವಲ್ಪ ಖುಷಿಯ ದಿನ, ಧನಸ್ಥಾನದಲ್ಲಿ ಗುರುವು ಇರುವುದರಿಂದ ಧನ ಪ್ರಾಪ್ತಿ.
ತುಲಾ : ರಾಶ್ಯಾಧಿಪತಿ ಉಚ್ಛನಾಗಿರುವುದರಿಂದ ಉತ್ತಮದಿನವಾಗಿರಲಿದೆ, ಆದರೆ ತೃತೀಯದ ಶನಿ-ಕುಜರಿಂದ ಸಹೋದರ ಬಾಂಧವ್ಯದಲ್ಲಿ ಕೋಲಾಹಲ
ವೃಶ್ಚಿಕ : ಧನ ವ್ಯಯ, ಶತ್ರುಗಳ ಕಾಟ, ಸಾಮಾನ್ಯದಿನ, ಹೆಣ್ಣು ಮಕ್ಕಳಿಂದ ಸಿಹಿ ಸುದ್ದಿ, ಸುಬ್ರಹ್ಮಣ್ಯ ಆರಾಧನೆ ಮಾಡಿ
ಧನಸ್ಸು : ಆರೋಗ್ಯ ಸಮಸ್ಯೆ ಕಾಡಲಿದೆ, ಅಹಂಕಾರದಿಂದ ಕಾದಾಟ, ಗುರುವಿನ ಮಂತ್ರ ಜಪಿಸಿ
ಮಕರ : ಸಾಮಾನ್ಯದಿನ, ಮನೆಯಲ್ಲಿ ಗಂಭೀರ ವಾತಾವರಣ, ಸ್ವಲ್ಪ ಮಟ್ಟಿಗೆ ಧನ ವ್ಯಯ, ಆಂಜನೇಯ ಸ್ಮರಣೆ ಮಾಡಿ
ಕುಂಭ : ಸಮಾಧಾನದ ದಿನ, ದೊಡ್ಡವರಿಂದ ಉತ್ತಮ ಮಾರ್ಗದರ್ಶನ, ಶಿವಾನಂದಲಹರಿ ಸ್ತೋತ್ರ ಪಠಿಸಿ
ಮೀನ : ಆರೋಗ್ಯದಲ್ಲಿ ಏರುಪೇರು, ಸಣ್ಣಪುಟ್ಟ ಅವಘಡ, ಮಕ್ಕಳಲ್ಲಿ ಬೇಸರದ ವಾತಾವರಣ, ಗುರುಸ್ತೋತ್ರ ಪಠಿಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.