ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಡಿಜಿಟಲ್ ಪಾವತಿ ಸೌಲಭ್ಯ ಅನುಕೂಲ

Published : Feb 26, 2017, 12:59 PM ISTUpdated : Apr 11, 2018, 01:12 PM IST
ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಡಿಜಿಟಲ್ ಪಾವತಿ ಸೌಲಭ್ಯ ಅನುಕೂಲ

ಸಾರಾಂಶ

ತಮ್ಮ ರೇಡಿಯೊ ನಿರೂಪಣಾ ಕಾರ್ಯಕ್ರಮ 'ಮನ್ ಕಿ ಬಾತ್'ನ 29ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಡಿಜಿಟಲ್ ಪಾವತಿಯಿಂದ ಮಾತ್ರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬಹುದು. ಇದೇ ಸಂದರ್ಭದಲ್ಲಿ ಮೋದಿಯವರು ದೇಶದ ಹಲವು ಸಾಧನೆ ಹಾಗೂ ಸಾಧಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನವದೆಹಲಿ(ಫೆ.26): ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಡಿಜಿಟಲ್ ಪಾವತಿ ಸೌಲಭ್ಯ ಸಾರ್ವಜನಿಕರಿಗೆ ಉತ್ತಮ ವೇದಿಕೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ತಮ್ಮ ರೇಡಿಯೊ ನಿರೂಪಣಾ ಕಾರ್ಯಕ್ರಮ 'ಮನ್ ಕಿ ಬಾತ್'ನ 29ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಡಿಜಿಟಲ್ ಪಾವತಿಯಿಂದ ಮಾತ್ರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬಹುದು. ಇದೇ ಸಂದರ್ಭದಲ್ಲಿ ಮೋದಿಯವರು ದೇಶದ ಹಲವು ಸಾಧನೆ ಹಾಗೂ ಸಾಧಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಏಕ ಕಾಲದಲ್ಲಿ 104 ಉಪಗ್ರಹಗಳನ್ನು ಉಡಾವಣೆಗೊಳಿಸಿದ ಇಸ್ರೋ ಸಂಸ್ಥೆಯನ್ನು ಶ್ಲಾಘಿಸಿದ ಮೋದಿ, ಮೂಲಸೌಕರ್ಯ, ಕೃಷಿ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ತಂತ್ರಜ್ಞಾನದಿಂದ ಮಾತ್ರ ಸಾಧ್ಯ. ಭಾರತವು ಹಲವು ರಂಗಗಳಲ್ಲಿ ಅಭಿವೃದ್ಧಿ ಸಾಧಿಸಲು ಇಸ್ರೋ ನೀಡಿರುವ ಸಹಕಾರ ನಿಜಕ್ಕೂ ಶ್ಲಾಘನೀಯ' ಎಂದರು.

ರಕ್ಷಣಾ ವಲಯದಲ್ಲೂ ನಾವು ಪ್ರಮುಖ ಯಶಸ್ಸನ್ನು ಸಾಧಿಸಿದ್ದೇವೆ. ನಾವು ಅಭಿವೃದ್ಧಿ ಪಡಿಸಿರುವ ಖಂಡಾಂತರ ಕ್ಷಿಪಣಿ ನೆಲ ಮಟ್ಟದಲ್ಲಿ 100 ಕಿ.ಮೀ ಅಂತರದಲ್ಲಿಯೇ  ಶತ್ರುಗಳ ಕ್ಷಿಪಣಿಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಈ ರೀತಿಯ ಸೌಲಭ್ಯ ವಿಶ್ವದ 5 ದೇಶಗಳಲ್ಲಿ ಮಾತ್ರವಿದೆ ಎಂದ ಅವರು ಯುವ ಜನರು ವಿಜ್ಞಾನ ರಂಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಮಹಾತ್ಮ ಗಾಂಧಿ ಕೂಡ ದೇಶಕ್ಕೆ ವಿಜ್ಞಾನಿಗಳ ಅಗತ್ಯತೆಯ ಬಗ್ಗೆ ಹೆಚ್ಚು ಪ್ರತಿಪಾದಿಸಿದ್ದರು' ಎಂದು ಗಾಂಧಿಯ ಮಾತನ್ನು ಈ ಸಂದರ್ಭದಲ್ಲಿ ನೆನಪು ಮಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ರೈತರು, ಸಾಮಾನ್ಯರು ಸೇರಿದಂತೆ ಪ್ರತಿಯೊಬ್ಬರಿಗೂ ಪ್ರತಿಯೊಂದು ಸಂದರ್ಭದಲ್ಲೂ ಉಪಯುಕ್ತವಾಗಲಿದೆ. ಈ ಕಾರಣದಿಂದಾಗಿ ಪ್ರತಿಯೊಬ್ಬರು ಡಿಜಿಟಲ್ ತಂತ್ರಜ್ಞಾನದತ್ತ ವಾಲಬೇಕು ಎಂದು ಹೇಳಿದರು.ಪ್ರಧಾನಿಯವರು ಈ ಸಂದರ್ಭದಲ್ಲಿ ವಿಶ್ವಕಪ್ ಗೆದ್ದ ಅಂಧರ ಕ್ರಿಕೆಟ್ ತಂಡವನ್ನು ಸಾಧನೆಯನ್ನು ಕೊಂಡಾಡಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ