
ನವದೆಹಲಿ (ಡಿ.12): ಲಾಲ್ ಕೃಷ್ಣ ಅಡ್ವಾಣಿ ಗುಜರಾತ್‌ನ ಬಿಜೆಪಿ ಸಂಸದರಾಗಿದ್ದರೂ ಕೂಡ ಮೋದಿ ಆಗಲಿ ಅಮಿತ್ ಶಾ ಆಗಲಿ ಒಮ್ಮೆಯೂ ಸೌಜನ್ಯಕ್ಕೆ ಕೂಡ ಪ್ರಚಾರಕ್ಕೆ ಬನ್ನಿ ಎಂದು ಕರೆಯಲಿಲ್ಲವಂತೆ.
ಇದಕ್ಕೆ ಪ್ರತಿಯಾಗಿ ಅಡ್ವಾಣಿಯವರ ಪರಮಾಪ್ತ ಸುಧೀಂದ್ರ ಕುಲಕರ್ಣಿ ಭವಿಷ್ಯದ ಪ್ರಧಾನಿ ರಾಹುಲ್ ಗಾಂಧಿ ಎಂದು ಲೇಖನ ಬರೆದಿರುವುದು ಮೋದಿ ಕಣ್ಣು ಕೆಂಪಾಗಿಸಿದೆಯಂತೆ. ಗುಜರಾತ್‌ನಲ್ಲಿ ಬಿಜೆಪಿ ಗೆದ್ದರೆ ಅಡ್ವಾಣಿ ಸುಮ್ಮನಿರುತ್ತಾರೋ ಏನೋ. ಆದರೆ ಗುಜರಾತ್‌ನಲ್ಲಿ ಸೋತರೆ ಬಿಜೆಪಿ ನಾಯಕರಿಗೆ ಅಡ್ವಾಣಿ ಅವರನ್ನು ಸುಮ್ಮನೆ ಕೂರಿಸುವುದು ಕಷ್ಟವಾಗಬಹುದು. ರಾಜಕಾರಣದಲ್ಲಿ ಎಲ್ಲ ಗುರು ಶಿಷ್ಯರೂ ಕೊನೆಗೆ ಶತ್ರುಗಳಾಗುವುದು ಒಂದು ಗಂಭೀರ ಅಧ್ಯಯನದ ವಿಷಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.