
ಸೂರತ್(ಅ.28): ಇರುವ ಒಬ್ಬನೇ ಪುತ್ರನಿಗೆ ಹಣದ ವೌಲ್ಯ ಅರ್ಥವಾಗಬೇಕು ಎಂಬ ಕಾರಣಕ್ಕೆ ಶ್ರಮದ ಕಾರ್ಯ ನಿರ್ವಹಣೆಗೆ ಬಿಟ್ಟಿರುವ ಗುಜರಾತಿನ ಡೈಮಂಡ್ ವ್ಯಾಪಾರಿ ಸಾವ್ಜಿ ದೊಲಾಕಿಯಾ ತಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿತ್ತಿರುವ ನೌಕರರಿಗೆ ದೀಪಾವಳಿ ಪ್ರಯುಕ್ತ ಬಂಪರ್ ಉಡುಗೊರೆ ನೀಡಿದ್ದಾರೆ.
‘ಹರೆ ಕೃಷ್ಣ ಎಕ್ಸ್‌ಪೋರ್ಟ್’ ವಜ್ರದ ಕಂಪನಿ ಮಾಲೀಕರಾಗಿರುವ ದೊಲಕಿಯಾ, ಕಂಪನಿಯಲ್ಲಿ ಕಾರ್ಯ ನಿರ್ವಹಿತ್ತಿರುವ ಪೈಕಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ 1716 ನೌಕರರಿಗೆ 400 ಫ್ಲ್ಯಾಟ್‌ಟಗಳು ಮತ್ತು 1260 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕಾಗಿ (ದೀಪಾವಳಿ ಬೋನಸ್‌ಗಾಗಿ) 51 ಕೋಟಿ ವೆಚ್ಚ ಮಾಡಿದ್ದಾರೆ. ನೌಕರರಿಗೆ ಉಡುಗೊರೆ ನೀಡುವ ಬಗ್ಗೆ ಮಂಗಳವಾರದ ಅನೌಪಚಾರಿಕ ನೌಕರರ ಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಕಳೆದ ವರ್ಷದ ದೀಪಾವಳಿ ಪ್ರಯುಕ್ತ ಉತ್ತಮ ಕಾರ್ಯ ನಿರ್ವಹಿಸಿದ ನೌಕರರಿಗೆ 200 ಫ್ಲ್ಯಾಟ್ ಮತ್ತು 491 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.