ರೂಪಾ ವರದಿ ಸಲ್ಲಿಕೆ ಹಿಂದೆ ಏನಿದೆ ಕಾರಣ? ಡಿಜಿಪಿ ಕೊಟ್ಟಿದ್ದಾರೆ ಹೊಸ ಟ್ವಿಸ್ಟ್

Published : Jul 13, 2017, 12:35 PM ISTUpdated : Apr 11, 2018, 01:12 PM IST
ರೂಪಾ ವರದಿ ಸಲ್ಲಿಕೆ ಹಿಂದೆ ಏನಿದೆ ಕಾರಣ? ಡಿಜಿಪಿ ಕೊಟ್ಟಿದ್ದಾರೆ ಹೊಸ ಟ್ವಿಸ್ಟ್

ಸಾರಾಂಶ

ಸಿಎಂ ಸಭೆಗೆ ಭಾಗವಹಿಸದೇ ಇದ್ದದ್ದು ಸೇರಿದಂತೆ ಎರಡು ಘಟನೆಗಳ ಸಂಬಂಧ ಸತ್ಯನಾರಾಯಣರಾವ್ ಅವರು ರೂಪಾ ಅವರಿಗೆ ಎರಡು ಮೆಮೋ ಸಲ್ಲಿಸಿದ್ದರಂತೆ. ಈ ಬಗ್ಗೆ ಮಾತನಾಡಿದ ಡಿಜಿಪಿಯವರು, ನಾನು ಕೊಟ್ಟಿರುವ ಎರಡು ಮೆಮೋಗಳಿಗೆ ರೂಪಾ ಮೊದಲು ಉತ್ತರ ಕೊಡಲಿ ಎಂದು ಸವಾಲೆಸೆದಿದ್ದಾರೆ.

ಬೆಂಗಳೂರು(ಜುಲೈ 13): ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ದುರವಸ್ಥೆ ಬಗ್ಗೆ ವರದಿ ನೀಡಿರುವ ಬಂಧೀಖಾನೆ ಡಿಐಜಿ ರೂಪಾ ವಿರುದ್ಧ ಡಿಜಿಪಿ ಸತ್ಯನಾರಾಯಣ ರಾವ್ ಕಿಡಿಕಾರಿದ್ದಾರೆ. ಮೊನ್ನೆ ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ರೂಪಾ ಭಾಗವಹಿಸಿರಲಿಲ್ಲ. ಈ ಕುರಿತು ರೂಪಾಗೆ ನೋಟೀಸ್ ನೀಡಿದ್ದೆ. ಈ ಕಾರಣಕ್ಕಾಗಿ ವರದಿಯನ್ನು ಅವರು ಮಾಧ್ಯಮಗಳಿಗೆ ಮೊದಲು ನೀಡಿದ್ದಾರೆ ಎಂದು ಸತ್ಯನಾರಾಯಣ ರಾವ್ ಪ್ರತ್ಯಾರೋಪಿಸಿದ್ದಾರೆ.

ಸಿಎಂ ಸಭೆಗೆ ಭಾಗವಹಿಸದೇ ಇದ್ದದ್ದು ಸೇರಿದಂತೆ ಎರಡು ಘಟನೆಗಳ ಸಂಬಂಧ ಸತ್ಯನಾರಾಯಣರಾವ್ ಅವರು ರೂಪಾ ಅವರಿಗೆ ಎರಡು ಮೆಮೋ ಸಲ್ಲಿಸಿದ್ದರಂತೆ. ಈ ಬಗ್ಗೆ ಮಾತನಾಡಿದ ಡಿಜಿಪಿಯವರು, ನಾನು ಕೊಟ್ಟಿರುವ ಎರಡು ಮೆಮೋಗಳಿಗೆ ರೂಪಾ ಮೊದಲು ಉತ್ತರ ಕೊಡಲಿ ಎಂದು ಸವಾಲೆಸೆದಿದ್ದಾರೆ.

"ಅವರ ಕೆಲಸ ಅವರು ನೋಡಿಕೊಳ್ಳಲಿ"
"ಅವರ ಕೆಲಸ ಅವರು ನೋಡಿಕೊಳ್ಳಲಿ. ಬಾಯಿಗೆ ಬಂದಂತೆ ಬರೆಯೋಕೆ ಆಗಲ್ಲ. ನನ್ನ ವಿರುದ್ಧವೇ ಅವರು ಹೇಗೆ ದೂರು ನೀಡುತ್ತಾರೆ? ನಾನು ಕೊಟ್ಟಿರುವ 2 ಮೆಮೋಗಳಿಗೆ ಮೊದಲು ಅವರು ಉತ್ತರ ಕೊಡಲಿ" ಎಂದು ಡಿಜಿಪಿ ಸತ್ಯನಾರಾಯಣರಾವ್ ಆಗ್ರಹಿಸಿದ್ದಾರೆ.

ಪೊಲೀಸ್ ಕಾನೂನುಗಳನ್ನು ರೂಪಾ ಮುರಿಯುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿರುವ ಡಿಜಿಪಿ, ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆಯೇ ರೂಪಾ ಅವರು ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ಕಾರಾಗೃಹಗಳಲ್ಲಿ ಫೋಟೋ ತೆಗೆದು ಫೇಸ್ಬುಕ್'ಗೆ ಹಾಕುತ್ತಾರೆ. ಈ ರೀತಿ ಮಾಡುವಂತಿಲ್ಲ. ಇದು ಜೈಲು ನಿಯಮಗಳಿಗೆ ವಿರುದ್ಧ ಎಂದು ಸತ್ಯನಾರಾಯಣ ರಾವ್ ತಿಳಿಹೇಳಿದ್ದಾರೆ.

ಹೊಸದೇನಿದೆ?
ರೂಪಾ ಅವರ ವರದಿಯನ್ನು ನಾನು ಓದಿಲ್ಲ ಎಂದು ಹೇಳಿದ ಡಿಜಿಪಿಯವರು, ಮಾಧ್ಯಮಗಳ ಮುಂದೆಯೇ ಟಪಾಲನ್ನು ತೆರೆದು ವರದಿ ಓದಿದರು. ಈ ವೇಳೆ, ಜೈಲಿನಲ್ಲಿ ಗಾಂಜಾದ ಬಗ್ಗೆ ಉಲ್ಲೇಖವಿರುವುದನ್ನು ಪ್ರಸ್ತಾಪಿಸಿದ ಸತ್ಯನಾರಾಯಣರಾವ್, ಇದರಲ್ಲಿ ಹೊಸದೇನಿಲ್ಲ ಎಂದು ಸ್ಪಷ್ಟಪಡಿಸಿದರು. ವಿಚಾರಣಾಧೀನ ಕೈದಿಗಳು ಜೈಲಿಗೆ ಬರುವ ಮುಂಚೆಯೇ ಡ್ರಗ್ಸ್ ದಾಸರಾಗಿರುತ್ತಾರೆ. ಅವರನ್ನ ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗುತ್ತದೆ. ಇದನ್ನೇ ರೂಪಾ ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಇದರಲ್ಲಿ ಹೊಸದೇನಿಲ್ಲ," ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಚಾರದ ಹುಚ್ಚು:
"ರೂಪಾ ಅವರಿಗೆ ಪ್ರಚಾರದ ಹುಚ್ಚು ಇದೆ. ಫೇಸ್ಬುಕ್'ನಲ್ಲಿ ಬರೆದುಕೊಳ್ಳುವುದು, ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ತಮ್ಮ ಆರೋಪಗಳಿಗೆ ರೂಪಾ ಯಾವುದೇ ಸಾಕ್ಷ್ಯಾಧಾರ ಒದಗಿಸಿಲ್ಲ. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸದೇ ಮಾಧ್ಯಮಗಳಿಗೆ ವರದಿ ಲೀಕ್ ಮಾಡಿದ್ದಾರೆ. ರೂಪಾ ಕೊಟ್ಟಿರುವ ವರದಿಯಲ್ಲಿ ಯಾವುದೇ ಹುರುಳಿಲ್ಲ. ಕಾರಾಗೃಹ ಕಾನೂನನ್ನು ರೂಪಾ ಓದಿಕೊಂಡಿಲ್ಲ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದೂ ಬಂಧೀಕಾನೆ ಡಿಜಿಪಿ ಸತ್ಯನಾರಾಯಣರಾವ್ ಗಂಭೀರವಾಗಿ ಆರೋಪಿಸಿದ್ದಾರೆ.

ಶಶಿಕಲಾಗೂ ಕೊಟ್ಟಿಲ್ಲ, ಯಾರಿಗೂ ಕೊಟ್ಟಿಲ್ಲ:
ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸೌಲಭ್ಯ ನೀಡಲು 2 ಕೋಟಿ ರೂ. ಲಂಚ ಪಡೆದರೆಂಬ ಆರೋಪವನ್ನೂ ಡಿಜಿಪಿಯವರು ಈ ವೇಳೆ ತಳ್ಳಿಹಾಕಿದ್ದಾರೆ. "ರೂಪಾ ಅವರು ಯಾವ ಆಧಾರದ ಮೇಲೆ ಈ ರೀತಿ ಬರೆದಿದ್ದಾರೆ ಎಂಬುದು ಗೊತ್ತಿಲ್ಲ. ಎಐಎಡಿಎಂಕೆ ನಾಯಕಿ ಶಶಿಕಲಾಗೆ ಯಾವ ವಿಶೇಷ ಸೌಲಭ್ಯವನ್ನೂ ಕಲ್ಪಿಸಿಲ್ಲ. ಅನೇಕ ಬಾರಿ ಶಾಸಕರು, ಸಂಸದರಿಂದ ಒತ್ತಡ ಬಂದರೂ ಅದಕ್ಕೆ ಕ್ಯಾರೆ ಅಂದಿಲ್ಲ" ಎಂದು ಡಿಜಿಪಿ ಸತ್ಯನಾರಾಯಣ ರಾವ್ ಸ್ಪಷ್ಪಪಡಿಸಿದ್ದಾರೆ.

ಡಿಐಜಿ ರೂಪಾ ವಿರುದ್ಧ ಡಿಐಜಿ ಆರೋಪಗಳೇನು?
* ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆಯೇ ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ.
* ಕಾರಾಗೃಹದ ಫೋಟೋಗಳನ್ನು ತೆಗೆದು ಫೇಸ್ಬುಕ್'ನಲ್ಲಿ ಪೋಸ್ಟ್ ಮಾಡ್ತಾರೆ.
* ತಾವೇ ಮಾಡಿದ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರ ಕೊಟ್ಟಿಲ್ಲ.
* ಕಾರಾಗೃಹದ ಕಾನೂನುಗಳ ಬಗ್ಗೆ ರೂಪಾಗೆ ಏನೂ ಗೊತ್ತಿಲ್ಲ.
* ಸಿಎಂ ನಡೆಸಿದ ಸಭೆಯಲ್ಲಿ ರೂಪಾ ಗೈರಾಗಿದ್ದರು.
* ಜೈಲಿನಲ್ಲಿ ಗಾಂಜಾ ಬಳಕೆ ಬಗ್ಗೆ ರೂಪಾ ಹೇಳಿರುವುದರಲ್ಲಿ ಹೊಸದೇನಿಲ್ಲ. ವಿಚಾರಣಾಧೀನ ಕೈದಿಗಳು ಜೈಲಿಗೆ ಬರುವ ಮುಂಚೆಯೇ ಡ್ರಗ್ಸ್ ದಾಸರಾಗಿರುತ್ತಾರೆ.
* ಶಶಿಕಲಾಗೆ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿಲ್ಲ. ಶಾಸಕರು, ಸಂಸದರ ಒತ್ತಡಕ್ಕೂ ನಾನು ಕ್ಯಾರೇ ಅಂದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?
India News Live: ಅಣುವಲಯ ಇನ್ನು ಖಾಸಗಿಗೂ ಮುಕ್ತ : ‘ಶಾಂತಿ’ ಮಸೂದೆಗೆ ಅನುಮೋದನೆ