
ಬೆಂಗಳೂರು (ಜ.08): ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಸಿಎಂ ಸಿದ್ದರಾಮಯ್ಯ ವಿರುದ್ದ ಗುಡುಗಿದ್ದಾರೆ. ತುಮಕೂರಿನ ಪಾವಗಡದಲ್ಲಿ ನಡೆದ ಯುವ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ ದೇವೆಗೌಡ, ನಮ್ಮ ಮುಖಂಡರ ಹತ್ತಿರ ಸಿದ್ದರಾಮಯ್ಯ ಗೌಡನನ್ನು ಕಟ್ಟಿಕೊಂಡು ಏನು ಮಾಡಲಿಕ್ಕೆ ಆಗುತ್ತೆ ಅಂತ ಅಣಕ ಮಾಡ್ತಾರೆ. ಈ ಸಭೆ ಮೂಲಕ ಸಿದ್ದರಾಮಯ್ಯಗೆ ಉತ್ತರಕೊಡುತ್ತಿದ್ದೇವೆ. ಜೆಡಿಎಸ್ ಎಲ್ಲಿದೆ ಅನ್ನೋ ಪ್ರಶ್ನೆಗೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನ ಹಿಂದಿಕ್ಕಿ ಉತ್ತರ ಕೊಡ್ತೇನೆ ಎಂದು ಗುಡುಗಿದ್ದಾರೆ.
ನನಗೆ ಅಹಂಕಾರವಿಲ್ಲ. ಗರ್ವದಿಂದ ಮಾತನಾಡಲ್ಲ ಅಂತ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್'ಗೆ ಹೋಗದಿದ್ದರೆ ಸಿಎಂ ಆಗಲ್ಲ ಅನ್ನೋ ಭಾವನೆ ಸಿದ್ದರಾಮಯ್ಯಗೆ ಇತ್ತು. ಹೀಗಾಗಿ ಕಾಂಗ್ರೆಸ್'ಗೆ ಹೋದ್ರು.ದೇವೇಗೌಡ, ಹೆಗಡೆ ಅವರನ್ನು ಸಿಎಂ ಮಾಡಲಿಲ್ಲವೇ? ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವ ಆಸೆ ಅಂತಾ ಸಿಎಂ ನನಗೆ ಹೇಳ್ತಾರೆ. ನೀನ್ಯಾಕೆ ಮಗನನ್ನು ಅಲ್ಲಿ ನಿಲ್ಲಿಸಿದ್ದೀಯಾ ಅಂತ ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ ಹಾಕಿದ್ದಾರೆ.
ನಿನ್ನ ಮಗನನ್ನು ಮಂತ್ರಿ ಮಾಡಬೇಕು ಅಂತ ಹೇಳಯ್ಯ ಎಂದು ಸಿಎಂ ಸಿದ್ದರಾಮಯ್ಯಗೆ ಪ್ರಶ್ನಿಸಿದ ಗೌಡರು, ಮಾತನ್ನು ಆಡುವಾಗ ಅದು ತಿರುಗಿ ಮತ್ತೆ ನನಗೆ ಪೆಟ್ಟು ಬೀಳುತ್ತದೆ ಅನ್ನೋ ಕನಿಷ್ಠ ಪ್ರಮಾಣದ ಅರಿವಿರಬೇಕು ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ದ ಹರಿಹಾಯ್ದ ದೇವೆಗೌಡರು, 2 ಜಿ ಸ್ಪೆಕ್ಟ್ರಂ ಹಗರಣದಲ್ಲಿ ಕರುಣಾನಿಧಿ ಮಗಳು ಕನ್ನಿಮೋಳಿ ಹಾಗೂ ಅಳಿಯ 6 ತಿಂಗಳು ಜೈಲಿನಲ್ಲಿದ್ದರು. ಆಗ ಮೋದಿ ನೋಡಲು ಕರುಣಾನಿಧಿ ವೀಲ್'ಚೇರ್'ನಲ್ಲಿ ಹೋಗಿದ್ದರು. ಮೋದಿ,ಕರುಣಾನಿಧಿ ತೊಡೆ ಮೇಲೆ ಕೈ ಇಡ್ತಾರೆ. ಅಲ್ಲಿ ಪ್ರಾದೇಶಿಕ ಪಕ್ಷ ಶಕ್ತವಾಗಿದೆ. ಮೋದಿ ತೊಡೆ ಮೇಲೆ ಕೈಯಿಟ್ಟು ಏನು ಮಾತನಾಡಿದ್ರೋ ಗೊತ್ತಿಲ್ಲ. ಎರಡೇ ತಿಂಗಳಲ್ಲಿ ಕನ್ನಿಮೋಳಿ, ರಾಜ ನಿರ್ದೋಷಿಗಳಾಗ್ತಾರೆ ಎಂದು ದೇವೇಗೌಡರು ಆರೋಪಿಸಿದ್ದಾರೆ.
ನಾನು ಹೋದ ಮೇಲೂ ಈ ಪಕ್ಷವನ್ನು ಉಳಿಸಿಕೊಳ್ಳಿ. ನಾನು ಎಷ್ಟು ದಿನ ಇರ್ತೇನೆ, ಎಷ್ಟು ದಿನ ಇರಬಹುದು. ನಾನು ಹೋಗ್ತೇನೆ, ಪಕ್ಷ ಉಳಿಸುವವರು ನೀವೇ ಎಂದು ದೇವೇಗೌಡರು ಕಾರ್ಯಕರ್ತರಿಗೆ ಸೂಚಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.