ಯೋಗಿ ಬೂಟಾಟಿಕೆಗೆ ಖಾವಿ ಹಾಕ್ಕೊಂಡಿದ್ದಾರೆ;ಹಿಂದುತ್ವ ಹೇಳುವ ಯೋಗ್ಯತೆಯಿಲ್ಲ: ಸಿಎಂ

Published : Jan 08, 2018, 08:12 PM ISTUpdated : Apr 11, 2018, 12:36 PM IST
ಯೋಗಿ ಬೂಟಾಟಿಕೆಗೆ ಖಾವಿ ಹಾಕ್ಕೊಂಡಿದ್ದಾರೆ;ಹಿಂದುತ್ವ ಹೇಳುವ ಯೋಗ್ಯತೆಯಿಲ್ಲ: ಸಿಎಂ

ಸಾರಾಂಶ

ನಾನು ಉತ್ತರ ಪ್ರದೇಶ ಸಿಎಂ ಯೋಗಿಗಿಂತ ಒಳ್ಳೆ ಹಿಂದೂ. ಸಿಎಂ ಆದಿತ್ಯನಾಥ್ ಗೆ ಮನಷ್ಯತ್ವ ಇಲ್ಲ. ಆದಿತ್ಯನಾಥ್ ರಾಕ್ಷಸಿ ಪ್ರವೃತ್ತಿ ವ್ಯಕ್ತಿತ್ವದವರು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಜ.08): ನಾನು ಉತ್ತರ ಪ್ರದೇಶ ಸಿಎಂ ಯೋಗಿಗಿಂತ ಒಳ್ಳೆ ಹಿಂದೂ. ಸಿಎಂ ಆದಿತ್ಯನಾಥ್ ಗೆ ಮನಷ್ಯತ್ವ ಇಲ್ಲ. ಆದಿತ್ಯನಾಥ್ ರಾಕ್ಷಸಿ ಪ್ರವೃತ್ತಿ ವ್ಯಕ್ತಿತ್ವದವರು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಯೋಗಿ ಆದಿತ್ಯನಾಥ್  ವಿವೇಕಾನಂದರನ್ನು ಓದಿಕೊಳ್ಳಲಿ. ಬೂಟಾಟಿಕೆಗೆ ಯೋಗಿ ಖಾವಿ ಹಾಕೊಂಡಿದ್ದಾರೆ. ಯೋಗಿಗೆ ಹಿಂದುತ್ವ ಹೇಳುವ ಯೋಗ್ಯತೆಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಯೋಗಿ ಹಸು ಎಮ್ಮೆ ಸಾಕಿದ್ದಾನಾ? ಹಸುವಿನ ಸಗಣಿ ಎತ್ತಿ, ಗೊಬ್ಬರ ಹೊತ್ತಿದ್ದಾನಾ? ಹಸು ಸಾಕದವರತ್ರ ಗೋವು ಬಗ್ಗೆ ಪಾಠ ಮಾಡುತ್ತಾನೆ. ನಾನು ಸಗಣಿ ಎತ್ತಿದ್ದೇನೆ, ಗೊಬ್ಬರ ಹೊತ್ತವನು. ಯೋಗಿ ಒಬ್ಬ ಡೋಂಗಿ ವ್ಯಕ್ತಿ. ನನಗೆ ಬೀಫ್ ಹಿಡಿಸಲ್ಲ, ಒಮ್ಮೆ ತಿಂದು ಆಮೇಲೆ ತಿಂದಿಲ್ಲ. ಯಾರಿಗೇನು ಬೇಕೋ ಅದನ್ನು ತಿಂತಾರೆ. ತಿನ್ನು- ತಿನ್ನಬೇಡ ಅನ್ನೋದಕ್ಕೆ ಇವರ್ಯಾರು? ಎಂದು ಉಡುಪಿಯಲ್ಲಿ ಸಿಎಂ ಸಿದ್ದರಾಮಯ್ಯ ವಾಕ್ ಪ್ರಹಾರ ನಡೆಸಿದ್ದಾರೆ.

ಕರ್ನಾಟಕದಲ್ಲಿ ಮೋದಿ ಜಾದು ನಡೆಯಲ್ಲ. ಕರ್ನಾಟಕ ಗುಜರಾತ್- ಯುಪಿ ಅಲ್ಲ.  ಇದು ಬಸವಣ್ಣ, ಕನಕದಾಸ, ನಾರಾಯಣಗುರುಗಳ ನಾಡು. ಇಲ್ಲಿ ಮೋದಿ- ಷಾ ತಂತ್ರಗಳು ನಡೆಯಲ್ಲ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ
Railway Drug Mafia: ರೈಲುಗಳಲ್ಲಿ ಡ್ರಗ್ಸ್ ಮಾಫಿಯಾ ಜಾಲ.. ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ