
ಬೆಂಗಳೂರು (ಮಾ. 07): ಲೋಕಾಯುಕ್ತ ವಿಶ್ವನಾಥ್ ಶೆಟ್ಟಿಯನ್ನು ಚಾಕುವಿನಿಂದ ಇರಿದು ಬಂಧನಕ್ಕೊಳಗಾಗಿರುವ ತೇಜ್ ರಾಜ್ ಶರ್ಮನ ಬಗ್ಗೆ ಹೊಸ ಹೊಸ ಮಾಹಿತಿಗಳು ಹೊರ ಬಿದ್ದಿವೆ. ಪದೇ ಪದೇ ಇವರು ಲೋಕಾಯುಕ್ತಕ್ಕೆ ದೂರು ನೀಡುತ್ತಿದ್ದರು. ಇವನು ಕೊಟ್ಟ ದೂರಿನಲ್ಲಿ ಇವನನ್ನೇ ಸಿಕ್ಕಿ ಹಾಕಿಸೋ ಪ್ರಯತ್ನ ಮಾಡಿದ್ದರು ಸರ್ಕಾರಿ ಅಧಿಕಾರಿಗಳು.
ಆರೋಪಿತರು ಈತನ ಅಕೌಂಟ್ ಗೆ 50,000 ಹಣ ಹಾಕಿ ಬ್ಲಾಕ್ ಮೇಲೆ ಆರೋಪ ಮಾಡಿದ್ರು. ಇದರ ಬಗ್ಗೆಯೂ ಸಹ ತೇಜ್ ರಾಜ್ ಶರ್ಮಾ ಲೋಕಾಯುಕ್ತರ ಗಮನಕ್ಕೆ ತಂದಿದ್ದರು. ಆದರೆ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆರೋಪಿತರ ಕೈ ಮೇಲಾಗಿದ್ದು ತೇಜ್ ರಾಜ್’ನನ್ನು ಖಿನ್ನತೆಗೆ ದೂಡಿತ್ತು. ಪದೇ ಪದೇ ಲೋಕಾಯುಕ್ತ ಕಚೇರಿಗೆ ಭೇಟಿ ಮಾಡಿದ್ರು ತನಿಖೆ ಪ್ರಗತಿ ಕಾಣದ ಹಿನ್ನಲೆಯಲ್ಲಿ ಲೋಕಾಯುಕ್ತರ ಭೇಟಿಗೆ ನಿರ್ಧರಿಸಿದ್ದ.
ಇಂದು ಲೋಕಾಯುಕ್ತರನ್ನು ಭೇಟಿ ಮಾಡಿ ಈ ಬಗ್ಗೆಯು ಚರ್ಚೆ ನಡೆಸಿದ. ಅದರೆ ಇದನ್ನು ಲೋಕಾಯುಕ್ತರು ಗಂಭೀರವಾಗಿ ಪರಿಗಣಿಸದೇ ಇದ್ದುದರಿಂದ ಕೋಪಕ್ಕೆ ಒಳಗಾಗಿ ಚಾಕು ಇರಿದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.