
ಒಂದು ದೇಶ, ಒಂದೇ ತೆರಿಗೆ ಅಂತಾ ಜಿಎಸ್ಟಿ ನೀತಿ ಜಾರಿಗೆ ತರೋಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಪಾರ್ಲಿಮೆಂಟ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಜಿಎಸ್ಟಿ ಜಾರಿಯಾಗಲಿದೆ. ಇನ್ನೂ ಭಾರತಕ್ಕೂ ಮೊದಲು ಸುಮಾರು 160 ಕ್ಕೂ ಹೆಚ್ಚು ದೇಶಗಳಲ್ಲಿ ಜಿಎಸ್ಟಿ ಜಾರಿಯಲ್ಲಿದೆ. ಆ ದೇಶಗಳ ಜಿಎಸ್ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇನ್ನೇನು ಕೆಲವೇ ಕ್ಷಣಗಳಲ್ಲಿ ಜಿಎಸ್ಟಿ ಪದ್ಧತಿ ಭಾರತದಾದ್ಯಂತ ಜಾರಿಗೆ ಬರಲಿದೆ. ಆದ್ರೆ ಭಾರತಕ್ಕೂ ಮುನ್ನ ಸುಮಾರು 160 ಕ್ಕೂ ಹೆಚ್ಚು ದೇಶಗಳಲ್ಲಿ ಜಿಎಸ್ಟಿ ಜಾರಿಯಲ್ಲಿದೆ. 1945ರಲ್ಲಿ ಫ್ರಾನ್ಸ್ ಜಿಎಸ್‌ಟಿ ಪದ್ದತಿ ನೀತಿಯನ್ನು ಮೊಟ್ಟ ಮೊದಲ ಬಾರಿಗೆ ಜಾರಿಗೊಳಿಸಿತು. ಆನಂತರ ವಿಶ್ವದ 160 ಕ್ಕೂ ಹೆಚ್ಚಿನ ದೇಶಗಳು ಈ ನೀತಿಯನ್ನು ಅಳವಡಿಸಿಕೊಂಡಿವೆ. ಇನ್ನೂ ಭಾರತದ ಜಿಎಸ್ಟಿ ಮಾದರಿ ಜೊತೆ ಕೆನಡಾ, ಯುಕೆ, ಸಿಂಗಪೂರ್ ಮತ್ತು ಮಲೇಷಿಯಾ ದೇಶಗಳ ಜಿಎಸ್ಟಿ ಮಾದರಿಯನ್ನ ಹೋಲಿಕೆ ಮಾಡಿ ನೋಡೋದಾದ್ರೆ.
ಭಾರತದಲ್ಲಿ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್‌ನಲ್ಲಿ ಶೇ.5, 12, 18 ಮತ್ತು ಶೇ 28ರ ಭಾಗಗಳಲ್ಲಿ ಸ್ಟ್ಯಾಂಡರ್ಡ್ ರೇಟ್ ಫಿಕ್ಸ್ ಮಾಡಲಾಗಿದೆ. ಇನ್ನು ಕೆನಡಾ ದೇಶದಲ್ಲಿ ಫೆಡರಲ್ ಗೂಡ್ಸ್ & ಸರ್ವೀಸ್ ಟ್ಯಾಕ್ಸ್ ಜೊತೆಗೆ ಹಾರ್ಮನೈಜ್ಡ್ ಸೇಲ್ಸ್ ಟ್ಯಾಕ್ಸ್ ಜಾರಿಯಲ್ಲಿದ್ದು ಶೇ5% ರಷ್ಟು ಜಿಎಸ್ಟಿ ಇದ್ದರೆ, ಶೇ 15ರಷ್ಟು HST ಇದೆ. ಇನ್ನು ಯುನೈಟೆಡ್ ಕಿಂಗ್ಡಮ್ ನಲ್ಲಿ ವ್ಯಾಲ್ಯೂ ಌಡೆಡ್ ಟ್ಯಾಕ್ಸ್ ಜಾರಿಯಲ್ಲಿದ್ದು ಶೇ.20 ಮತ್ತು 5 ರ ಸ್ಟ್ಯಾಂಡರ್ಡ್ ರೇಟ್ ಇದೆ. ಸಿಂಗಪೂರ್ ನಲ್ಲೂ ಕೂಡ GST ತೆರಿಗೆ ನೀತಿ ಇದ್ದು ಶೇ. 7 ರಷ್ಟು ಸ್ಟ್ಯಾಂಡರ್ಡ್ ರೇಟ್ ಇದೆ. ಕೊನೆಯದಾಗಿ ಮಾಲೇಷಿಯಾದಲ್ಲು ಜಿಎಸ್‌ಟಿ ನೀತಿ ಜಾರಿಯಲ್ಲಿದ್ದು ಶೇ.6ರ ಸ್ಟಾಂಡರ್ಡ್ ರೇಟ್ ಇದೆ.
ಒಟ್ಟಿನಲ್ಲಿ ಫ್ರಾನ್ಸ್ ನಿಂದ ಆರಂಭವಾಗಿ ವಿಶ್ವದ 160 ದೇಶಗಳ ಸಾಲಿಗೆ ಇಡೀಗ ಭಾರತ ಕೂಡ ಏಕರೂಪ ತೆರಿಗೆ ನೀತಿಯ ಸಾಲಿಗೆ ಸೇರ್ಪಡೆಯಾಗುತ್ತಿದೆ. ಜಿಎಸ್‌ಟಿ ಜಾರಿಯಾದ ನಂತರ ದೇಶದ ಆರ್ಥಿಕತೆ ವ್ಯವಸ್ಥೆ ಕೊಂಚ ಮಟ್ಟಿಗೆ ಸುಧಾರಣೆಯಾಗಲಿದೆ ಅನ್ನೋದು ತಜ್ಞರ ಅಭಿಪ್ರಾಯ.
ಧಾನ್ಯಶ್ರೀ ನ್ಯೂಸ್ ಡೆಸ್ಕ್ ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.