ವಿಶ್ವದಲ್ಲಿರುವ ವಲಸಿಗರಲ್ಲಿ ಭಾರತೀಯರೆ ಹೆಚ್ಚು : ವಿಶ್ವಸಂಸ್ಥೆ

Published : Dec 15, 2017, 04:10 PM ISTUpdated : Apr 11, 2018, 12:47 PM IST
ವಿಶ್ವದಲ್ಲಿರುವ ವಲಸಿಗರಲ್ಲಿ ಭಾರತೀಯರೆ ಹೆಚ್ಚು : ವಿಶ್ವಸಂಸ್ಥೆ

ಸಾರಾಂಶ

ಜಗತ್ತಿನ ವಲಸಿಗರಲ್ಲಿ ಅರ್ಧದಷ್ಟು ಮಂದಿ ಏಷ್ಯಾದವರೆ ಆಗಿದ್ದು, ಇವರಲ್ಲಿ ಭಾರತ, ಚೀನಾ ಹಾಗೂ ದಕ್ಷಿಣ ಏಷ್ಯಾ ಮೂಲದವರು ಹೆಚ್ಚಾಗಿದ್ದಾರೆ.

ಮುಂಬೈ(ಡಿ.15): ವಿಶ್ವದಲ್ಲಿ ನೆಲಸಿರುವ ವಲಸಿಗರಲ್ಲಿ ಭಾರತೀಯರೆ ಹೆಚ್ಚು ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಜಗತ್ತಿನ ನಾನಾಕಡೆ ನೆಲಸಿರುವ 24 ಕೋಟಿ ವಲಸಿಗರಲ್ಲಿ ಭಾರತೀಯರ ಪಾಲು 1.56 ಕೋಟಿಗೂ ಹೆಚ್ಚು.

2ನೇ ಸ್ಥಾನದಲ್ಲಿ ಮೆಕ್ಸಿಕೋದವರಿದ್ದು ವಿವಿಧ ರಾಷ್ಟ್ರಗಳಲ್ಲಿ 1.20 ಕೋಟಿ ಮಂದಿ ನೆಲಸಿದ್ದಾರೆ. ವಿಶ್ವದಲ್ಲಿ ಒಟ್ಟು 730 ಕೋಟಿ ಜನಸಂಖ್ಯೆಯಿದ್ದು, ಪ್ರತಿ 30 ಜನರಲ್ಲಿ ಒಬ್ಬರು ವಲಸಿಗರಾಗಿದ್ದಾರೆ. ಜಗತ್ತಿನ ವಲಸಿಗರಲ್ಲಿ ಅರ್ಧದಷ್ಟು ಮಂದಿ ಏಷ್ಯಾದವರೆ ಆಗಿದ್ದು, ಇವರಲ್ಲಿ ಭಾರತ, ಚೀನಾ ಹಾಗೂ ದಕ್ಷಿಣ ಏಷ್ಯಾ ಮೂಲದವರು ಹೆಚ್ಚಾಗಿದ್ದಾರೆ.

ವಲಸಿಗರಲ್ಲಿ 20ರಿಂದ 64 ವರ್ಷದ ವಯೋಮಾನವುಳ್ಳವರೇ ಹೆಚ್ಚು. ವಲಸಿಗರು ಹೆಚ್ಚು ನೆಲಸಿರುವ ದೇಶ ಅಮೆರಿಕಾ. ಇಲ್ಲಿ ಸುಮಾರು 46 ಕೋಟಿಗೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಇನ್ನುಳಿದ ಸ್ಥಾನದಲ್ಲಿ ಜರ್ಮನಿ 12 ಕೋಟಿ , ರಷ್ಯಾ 11.6 ಕೋಟಿ, ಸೌದಿ ಅರೇಬಿಯಾ 10 ಹಾಗೂ ಇಂಗ್ಲೆಂಡ್'ನಲ್ಲಿ 8.5 ಕೋಟಿ ಮಂದಿ ನೆಲಸಿದ್ದಾರೆ.

ಭಾರತೀಯರು ಹೆಚ್ಚು ನೆಲಸಿರುವ ದೇಶಗಳೆಂದರೆ ಅರಬ್ ರಾಷ್ಟ್ರಗಳು, ಅಮೆರಿಕಾ, ಸೌದಿ ಅರೆಬಿಯಾ ಹಾಗೂ ಕುವೈತ್. ಇಲ್ಲಿ ಕ್ರಮವಾಗಿ 3.5, 2.0, 1.9 ಮತ್ತು 1.0 ಕೋಟಿ ಮಂದಿ ನೆಲಸಿದ್ದಾರೆ. ಓಮನ್, ಇಂಗ್ಲೆಂಡ್'ನಲ್ಲಿ ತಲಾ 70 ಲಕ್ಷ ಮಂದಿ ವಾಸಿಸುತ್ತಿದ್ದಾರೆ. 2016 ರಿಂದ ಆರ್ಥಿಕ ನೀತಿ, ರಕ್ಷಣಾತ್ಮಕ ಕ್ರಮಗಳಿಂದಾಗಿ ಅರಬ್ ರಾಷ್ಟ್ರಗಳಿಗೆ ಹೋಗಿ ನೆಲಸುವವರ ಸಂಖ್ಯೆ ಶೇ.33 ರಷ್ಟು ಕಡಿಮೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ