ಜನ-ಧನ ಖಾತೆಯಲ್ಲಿ ಈಗ 80 ಸಾವಿರ ಕೋಟಿ ಹಣ

Published : Apr 23, 2018, 10:54 AM IST
ಜನ-ಧನ ಖಾತೆಯಲ್ಲಿ ಈಗ 80 ಸಾವಿರ ಕೋಟಿ ಹಣ

ಸಾರಾಂಶ

ಇದುವರೆಗೂ ಬ್ಯಾಂಕ್‌ ಖಾತೆ ಹೊಂದಿಲ್ಲದ ಜನರಿಗೆ ಉಚಿತವಾಗಿ ಖಾತೆ ಮಾಡಿಕೊಟ್ಟು ಅವರನ್ನು ಬ್ಯಾಂಕಿಂಗ್‌ ಜಾಲಕ್ಕೆ ಕರೆತರುವ ಪ್ರಧಾನಮಂತ್ರಿ ಜನ-ಧನ ಯೋಜನೆಗೆ ಮತ್ತಷ್ಟುಯಶಸ್ಸು ಸಿಕ್ಕಿದೆ. ಜನ-ಧನ ಖಾತೆಯಲ್ಲಿ ಸಂಗ್ರಹಗೊಂಡಿರುವ ಮೊತ್ತ ಇದೀಗ 80 ಸಾವಿರ ಕೋಟಿ ರು. ಗಡಿ ದಾಟಿದ್ದರೆ, ಈ ಯೋಜನೆಯ ಫಲಾನುಭವಿಗಳ ಸಂಖ್ಯೆ 31 ಕೋಟಿಗೆ ಜಿಗಿತ ಕಂಡಿದೆ.

ನವದೆಹಲಿ : ಇದುವರೆಗೂ ಬ್ಯಾಂಕ್‌ ಖಾತೆ ಹೊಂದಿಲ್ಲದ ಜನರಿಗೆ ಉಚಿತವಾಗಿ ಖಾತೆ ಮಾಡಿಕೊಟ್ಟು ಅವರನ್ನು ಬ್ಯಾಂಕಿಂಗ್‌ ಜಾಲಕ್ಕೆ ಕರೆತರುವ ಪ್ರಧಾನಮಂತ್ರಿ ಜನ-ಧನ ಯೋಜನೆಗೆ ಮತ್ತಷ್ಟುಯಶಸ್ಸು ಸಿಕ್ಕಿದೆ. ಜನ-ಧನ ಖಾತೆಯಲ್ಲಿ ಸಂಗ್ರಹಗೊಂಡಿರುವ ಮೊತ್ತ ಇದೀಗ 80 ಸಾವಿರ ಕೋಟಿ ರು. ಗಡಿ ದಾಟಿದ್ದರೆ, ಈ ಯೋಜನೆಯ ಫಲಾನುಭವಿಗಳ ಸಂಖ್ಯೆ 31 ಕೋಟಿಗೆ ಜಿಗಿತ ಕಂಡಿದೆ.

ಅಪನಗದೀಕರಣ ಸಮಯದಲ್ಲಿ ಜನ-ಧನ ಖಾತೆಗಳಿಗೆ ಸಂದಾಯವಾಗುವ ಹಣದ ಮೊತ್ತ ಅಧಿಕಗೊಂಡು, 74 ಸಾವಿರ ಕೋಟಿ ರು.ಗೆ ತಲುಪಿತ್ತಾದರೂ ನಂತರದ ದಿನಗಳಲ್ಲಿ ಇಳಿಮುಖವಾಗಿತ್ತು. ಆದರೆ 2017ರ ಮಾಚ್‌ರ್‍ನಿಂದ ಖಾತೆಗೆ ಜಮೆಯಾಗುವ ಹಣದ ಪ್ರಮಾಣ ಏರಿಕೆಯಾಗುತ್ತಾ ಬಂತು.

2017ರ ಡಿಸೆಂಬರ್‌ನಲ್ಲಿ 73,878 ಕೋಟಿ ರು. ಇದ್ದದ್ದು, 2018ರ ಫೆಬ್ರವರಿಯಲ್ಲಿ 75,572 ಕೋಟಿ ರು.ಗೆ ಏರಿತ್ತು. 2018ರ ಏ.11ರಂದು ಇದು 80,545.70 ಕೋಟಿ ರು.ಗೆ ತಲುಪಿದೆ.ಜನ-ಧನ ಖಾತೆದಾರರ ಸಂಖ್ಯೆ ನೋಟು ರದ್ದತಿ ಸಂದರ್ಭದಲ್ಲಿ 25.51 ಕೋಟಿಯಷ್ಟಿತ್ತು. ಈಗ ಅದು 31.45 ಕೋಟಿಗೆ ಏರಿಕೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ
India Latest News Live: ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ