
ನವದೆಹಲಿ : ಕಳೆದ ವರ್ಷ ನವೆಂಬರ್’ನಲ್ಲಿ ದೇಶದಲ್ಲಿ ನೋಟು ಅಮಾನ್ಯೀಕರಣವನ್ನು ಕೈಗೊಳ್ಳಲಾಗಿತ್ತು. 500 ಹಾಗೂ 1000 ರು. ನೋಟುಗಳನ್ನು ಅಮಾನ್ಯ ಮಾಡಲಾಗಿತ್ತು. ಇವುಗಳನ್ನೆಲ್ಲವನ್ನೂ ಮತ್ತೆ ಬ್ಯಾಂಕ್’ಗೆ ಕಟ್ಟಿಸಿಕೊಳ್ಳಲಾಗಿದ್ದು, ಇವುಗಳನ್ನೆಲ್ಲಾ ಏನು ಮಾಡಿದರು ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಕಾಡುವುದು ಸಾಮಾನ್ಯವಾಗಿರುತ್ತದೆ.
ಇದೀಗ ಈ ಕುತೂಹಲಕ್ಕೆ ಆರ್’ಬಿಐ ಉತ್ತರ ನೀಡಿದೆ. ವಾಪಸ್ ಪಡೆದ ಕೊಟ್ಯಂತರ ನೋಟುಗಳನ್ನೂ ಕೂಡ ಸಂಪೂರ್ಣವಾಗಿ ಪುಡಿ ಮಾಡಿ ವಿಲೇವಾರಿ ಮಾಡಲಾಗಿದೆ ಎಂದು ಆರ್’ಬಿಐ ಹೇಳಿದೆ.
ಈ ನೋಟುಗಳ ವೆರಿಫಿಕೇಶನ್ ಕಾರ್ಯವು ಮುಗಿದ ನಂತರ ಸಂಪೂರ್ಣ ನೋಟುಗಳನ್ನು ಪುಡಿ ಮಾಡಿ ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿಯನ್ನು ನೀಡಿದೆ. ಈ ಬಗ್ಗೆ ಸಲ್ಲಿಕೆಯಾಗಿದ್ದ ಆರ್’ಟಿಐ ಅರ್ಜಿಯೊಂದರ ಸಂಬಂಧ ಈ ಉತ್ತರವನ್ನು ನೀಡಿದೆ. ಪ್ರಿಂಟ್ ಆದ ನೋಟುಗಳನ್ನು ಪುನರ್ ಬಳಕೆ ಪ್ರಕ್ರಿಯೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕೂಡ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.