ಅಭ್ಯರ್ಥಿ ಮೃತಪಟ್ಟರೆ ಮತ್ತೆ ಚುನಾವಣೆ ಮುಂದೂಡಲು ಕಾರಣ ಚನ್ನಗಿರಿ ..!

By Suvarna Web DeskFirst Published Mar 18, 2018, 12:26 PM IST
Highlights

ನಾಮಪತ್ರ ಸಲ್ಲಿಕೆ ಪೂರ್ಣಗೊಂಡು ಪ್ರಚಾರದ ಭರಾಟೆ ತಾರಕಕ್ಕೇರಿರುವ ಸಂದರ್ಭದಲ್ಲಿ ಕಣದಲ್ಲಿರುವ ಯಾರಾದರೂ ಅಭ್ಯರ್ಥಿ ಮೃತಪಟ್ಟರೆ ಚುನಾವಣೆಯನ್ನೇ ಮುಂದೂಡಲಾಗುತ್ತದೆ.

ಬೆಂಗಳೂರು : ನಾಮಪತ್ರ ಸಲ್ಲಿಕೆ ಪೂರ್ಣಗೊಂಡು ಪ್ರಚಾರದ ಭರಾಟೆ ತಾರಕಕ್ಕೇರಿರುವ ಸಂದರ್ಭದಲ್ಲಿ ಕಣದಲ್ಲಿರುವ ಯಾರಾದರೂ ಅಭ್ಯರ್ಥಿ ಮೃತಪಟ್ಟರೆ ಚುನಾವಣೆಯನ್ನೇ ಮುಂದೂಡಲಾಗುತ್ತದೆ.

2013ರಲ್ಲಿ ಪಿರಿಯಾಪಟ್ಟಣದಲ್ಲೂ ಇದೇ ರೀತಿ ಆಗಿತ್ತು. ಈ ಸಂಪ್ರದಾಯ ಶುರುವಾಗಿದ್ದು ಚನ್ನಗಿರಿ ಕ್ಷೇತ್ರದಿಂದ. 1957ರ ಚುನಾವಣೆಗೆ ಕಾಂಗ್ರೆಸ್ಸಿಂದ ಕುಂದೂರು ರುದ್ರಪ್ಪ, ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಎಂ.ಎಸ್. ಪಾಪಣ್ಣ ಸ್ಪರ್ಧೆ ಮಾಡಿದ್ದರು.

ಮತದಾನಕ್ಕೆ 8-10 ದಿನ ಬಾಕಿ ಇರುವಾಗ ಪಾಪಣ್ಣ ನಿಧನರಾದರು. ಹೀಗಾಗಿ ರುದ್ರಪ್ಪ ಅವಿರೋಧ ಆಯ್ಕೆಯಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ಅಭ್ಯರ್ಥಿ ಮೃತಪಟ್ಟರೆ ಚುನಾವಣೆ ಮುಂದೂಡುವ ಸಂಬಂಧ ನಿಯಮಕ್ಕೆ ತಿದ್ದುಪಡಿ ಮಾಡಿತು.

click me!