
ನವದೆಹಲಿ(ಜ.05): ಕೇಂದ್ರ ಸರ್ಕಾರ ಹಳೆಯ 500 ಹಾಗೂ 1000 ರೂ. ನೋಟುಗಳನ್ನು ರದ್ದುಗೊಳಿಸಿ 50 ದಿನಗಳಿಗೂ ಹೆಚ್ಚು ದಿನಗಳಾಗಿವೆ. ಇವೆರಡೂ ನೋಟುಗಳು ಈಗಾಗಲೇ ಇತಿಹಾಸ ಸೇರಿವೆ. ಆದರೆ ಅನಿವಾಸಿ ಭಾರತೀಯರಿಗೆ, ಕಳೆದ ಮೂರು ತಿಂಗಳ ಅವಧಿಯಲ್ಲಿ ವಿದೇಶದಲ್ಲಿ ವಾಸವಿದ್ದ ಭಾರತೀಯರಿಗೆ ಜೊತೆಗೆ ಸಾರ್ವಜನಿಕರಿಗೆ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು 2017, ಮಾರ್ಚ್ 31ರ ವರೆಗೆ ಆರ್'ಬಿಐ ಕೌಂಟರ್'ಗಳಲ್ಲಿ ಅವಕಾಶ ನೀಡಲಾಗಿತ್ತು.
ಜಿಯೋಗೆ ಸೆಡ್ಡು ಹೊಡೆದ ಏರ್ಟೆಲ್: 1 ವರ್ಷ ಉಚಿತ 4ಜಿ ಸೇವೆ
ಕಳೆದ ವರ್ಷದ ಡಿಸೆಂಬರ್ 31 ರಂದು ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಬಹುತೇಕ ರಾಜ್ಯದ ಆರ್'ಬಿಐ ಕೌಂಟರ್'ಗಳಲ್ಲಿ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುತ್ತಿಲ್ಲ. ಆರ್'ಬಿಐ ಅಧಿಕಾರಿಗಳು ಸಹ ನೋಟು ವಿನಿಮಯ ಮಾಡಿಕೊಳ್ಳಲು ಬಂದವರನ್ನು ಹಲವು ಕಟ್ಟಪ್ಪಣೆಗಳನ್ನು ವಿಧಿಸಿ ವಾಪಸ್ ಕಳಿಸುತ್ತಿದ್ದಾರೆ.
ಒಂದು ನಿಯಮವನ್ನು ಜಾರಿಗೊಳಿಸಿದರೆ ಅದರ ಪ್ರಕಾರ ನಡೆದುಕೊಳ್ಳಬೇಕಾಗಿರುವುದು ಸರ್ಕಾರದ ಕರ್ತವ್ಯ. ಅನಗತ್ಯವಾಗಿ ಸಾರ್ವಜನಿಕರಿಗೆ ಏಕೆ ತೊಂದರೆ ನೀಡಬೇಕು ಎನ್ನುವುದು ಹೊಸ ನೋಟ್ ಸಿಗದ ಸಾರ್ವಜನಿಕರ ಪ್ರಶ್ನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.