ಮಾಲಿನ್ಯ ತಡೆಗೆ ಇಂದಿನಿಂದ ದಿಲ್ಲಿಯಲ್ಲಿ ಯೂರೋ ತೈಲ ಬಳಕೆ

By Suvarna Web DeskFirst Published Apr 1, 2018, 7:38 AM IST
Highlights

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಿಂದ ಅತ್ಯಂತ ಶುದ್ಧ ಯೂರೋ-6 ದರ್ಜೆಯ ಪೆಟ್ರೋಲ್ ಮತ್ತು ಡೀಸೆಲ್‌ಗಳನ್ನು ಯಾವುದೇ ಹೆಚ್ಚುವರಿ ದರ ಇಲ್ಲದೇ ಭಾನುವಾರದಿಂದ ಪೂರೈಸಲಾಗುತ್ತದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಿಂದ ಅತ್ಯಂತ ಶುದ್ಧ ಯೂರೋ-6 ದರ್ಜೆಯ ಪೆಟ್ರೋಲ್ ಮತ್ತು ಡೀಸೆಲ್‌ಗಳನ್ನು ಯಾವುದೇ ಹೆಚ್ಚುವರಿ ದರ ಇಲ್ಲದೇ ಭಾನುವಾರದಿಂದ ಪೂರೈಸಲಾಗುತ್ತದೆ. ಈ ಮೂಲಕ ಯೂರೋ-6 ದರ್ಜೆಯ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಬಳಸುವ ದೇಶದ ಮೊದಲ ನಗರ ಎಂಬ ಖ್ಯಾತಿಗೆ ದೆಹಲಿ ಪಾತ್ರವಾಗಲಿದೆ.

ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ಸೇರಿದಂತೆ ಪ್ರಮುಖ 13 ನಗರಗಳು 2019 ರ ಜ.1ರಿಂದ ಯೂರೋ- 6 ಇಂಧನ ಬಳಸಲಿವೆ. 2020ರ ಏಪ್ರಿಲ್ ವೇಳೆಗೆ ದೇಶದೆಲ್ಲೆಡೆ ಇದು ವಿಸ್ತರಣೆ ಆಗಲಿದೆ.

click me!