
ಚೆನ್ನೈ(ಎ.20): ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ವಿರುದ್ಧ ದೆಹಲಿ ಪೊಲೀಸರು ಮತ್ತೊಂದು ಸಮನ್ಸ್ ಜಾರಿಮಾಡಿದ್ದಾರೆ. ಪಕ್ಷದ ಚಿಹ್ನೆಗಾಗಿ ಲಂಚ ನೀಡಿದ ಆರೋಪ ಪ್ರಕರಣ ವಿಚಾರವಾಗಿ ಏಪ್ರಿಲ್ 22ರಂದು ದೆಹಲಿಯ ಅಂತರ್ ರಾಜ್ಯ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್`ನಲ್ಲಿ ಸೂಚಿಸಲಾಗಿದೆ.
ಪನ್ನೀರ್ ಸೆಲ್ವಂ ಮತ್ತು ಪಳನಿ ಸ್ವಾಮಿ ಬಣಗಳ ವೀಲಿನಕ್ಕಾಗಿ ಪಕ್ಷದ ಹಿತದೃಷ್ಟಿಯಿಂದ ದಿನಕರನ್ ಮತ್ತು ಶಶಿಕಲಾ ಪಕ್ಷದ ಕಾರ್ಯಚಟುವಟಿಕೆಯಿಂದ ಹೊರಗುಳಿಯುವುದಾಗಿ ಘೊಷಿಸಿದ ಕೆಲ ಗಂಟೆಗಳಲ್ಲೇ ಮಧ್ಯರಾತ್ರಿ 1 ಗಂಟೆಗೆ ವಿಚಾರಣೆ ನಡೆಸಿ ದಿನಕರನ್`ಗೆ ಸಮನ್ಸ್ ಜಾರಿ ಮಾಡಿದ್ದಾರೆ. ಪಕ್ಷದ ಚಟುವಟಿಕೆಯಿಂದ ಹೊರಗುಳಿಯುವ ಘೋಷಣೆಗೂ ಮುನ್ನ ಪಕ್ಷದ ಶಾಸಕರು ಮತ್ತು ಜಿಲ್ಲಾ ಕಾರ್ಯದರ್ಶಿಗಳ ಸಭೆ ಕರೆದು ಬಲಪ್ರದರ್ಶನಕ್ಕೆ ದಿನಕರನ್ ಮುಂದಾಗಿದ್ದರು.
ಆದರೆ, ಆ ಪ್ರಯತ್ನ ಫಲ ನೀಡಲಿಲ್ಲ. ಹೀಗಾಗಿ, ದಿನಕರನ್ ಉಲ್ಟಾ ಹೊಡೆದಿದ್ದಾರೆ. ಆರ್.ಕೆ. ನಗರ ಉಪಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿಕೆ ಆರೋಪ,ಐಟಿ ದಾಳಿ ವೇಳೆ ಸಿಕ್ಕ ದಾಖಲೆಗಳಿಂದಾಗಿ ಪಕ್ಷದಲ್ಲಿ ದಿನಕರನ್ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.