ಸುನಂದಾ ಪುಷ್ಕರ್ ಹತ್ಯೆ ವಿಚಾರ ಪ್ರಸಾರ ಮಾಡದಿರುವಂತೆ ರಿಪಬ್ಲಿಕ್ ಟಿವಿ ಮೇಲೆ ನಿರ್ಬಂಧ ಹೇರಲು ಕೋರ್ಟ್ ನಕಾರ

By Suvarna Web DeskFirst Published Sep 8, 2017, 4:31 PM IST
Highlights

ಶಶಿ ತರೂರು ಪತ್ನಿ ಸುನಂದಾ ಪುಷ್ಕರ್ ಸಾವಿನ ವಿಚಾರಕ್ಕೆ ಸಂಬಂಧಿಸಿದ ಸುದ್ಧಿಗಳನ್ನು ಪ್ರಸಾರ ಮಾಡಲು ಅಥವಾ ಚರ್ಚೆ ನಡೆಸಲು ರಿಪಬ್ಲಿಕ್ ಟಿವಿ ಮೇಲೆ ನಿರ್ಬಂಧ ಹೇರಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.

ನವದೆಹಲಿ (ಸೆ.08): ಶಶಿ ತರೂರು ಪತ್ನಿ ಸುನಂದಾ ಪುಷ್ಕರ್ ಸಾವಿನ ವಿಚಾರಕ್ಕೆ ಸಂಬಂಧಿಸಿದ ಸುದ್ಧಿಗಳನ್ನು ಪ್ರಸಾರ ಮಾಡಲು ಅಥವಾ ಚರ್ಚೆ ನಡೆಸಲು ರಿಪಬ್ಲಿಕ್ ಟಿವಿ ಮೇಲೆ ನಿರ್ಬಂಧ ಹೇರಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.

ರಿಪಬ್ಲಿಕ್ ಟಿವಿಯಲ್ಲಿ ಸುನಂದಾ ಪುಷ್ಕರ್ ಸಾವಿನ ವಿಚಾರವನ್ನು ಪ್ರಸಾರ ಮಾಡದಂತೆ ನಿರ್ಬಂಧ ಹೇರುವಂತೆ ಕೋರಿ ಶಶಿ ತರೂರು ಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾ. ಮನಮೋಹನ್, ಶಶಿ ತರೂರು ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಅರ್ನಬ್ ಗೋಸ್ವಾಮಿ ಹಾಗೂ ಚಾನಲ್’ಗೆ ನೋಟಿಸ್ ನೀಡಿದ್ದಾರೆ.

ಮೊದಲ ವಿಚಾರಣೆ ನಂತರ ಅರ್ನಬ್ ಗೋಸ್ವಾಮಿ ನಿಮ್ಮನ್ನು ಹಂತಕ ಎಂದು ಕರೆದಿರುವುದನ್ನು ತೋರಿಸಿ ಎಂದು ನ್ಯಾಯಾಧೀಶರು ಶಶಿ ತರೂರಿಗೆ ಕೇಳಿದ್ದಾರೆ. ಆ.08 ರ ವಿಚಾರಣೆ  ನಂತರ ರಿಪಬ್ಲಿಕ್ ಟಿವಿ ನಿರಂತರವಾಗಿ ಸುನಂದಾ ಪುಷ್ಕರ್ ಸಾವಿನ ವಿಚಾರವನ್ನು ತಪ್ಪಾಗಿ ಪ್ರಸಾರ ಮಾಡುತ್ತಿದೆ ಎಂದು ತರೂರು ಆರೋಪಿಸಿದ್ದಾರೆ.  ಒಂದು ವಾಹಿನಿಯ ಸಂಪಾದಕೀಯ ನೀತಿ ಹೀಗೆ ಇರಬೇಕೆಂದು ನಾವು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ವಿವರವಾದ ವಿಚಾರಣೆ ನಂತರವೇ ಆದೇಶ ನೀಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.  

 

click me!