
ನವದೆಹಲಿ(ಏ.28): ದೇಶದಲ್ಲಿ ಹಲವು ವಿನೂತನ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಹೊಸ ಅಲೆ ಸೃಷ್ಟಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ನಡೆಯನ್ನು ನವದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಅನುಸರಿಸುತ್ತಿದ್ದಾರೆ.
ಇತ್ತೀಚಿಗಷ್ಟೆ ಯೋಗಿ ಆದಿತ್ಯನಾಥ್ ಸರ್ಕಾರ ಗಣ್ಯವ್ಯಕ್ತಿಗಳ ಜನ್ಮ ದಿನಾಚರಣೆಗಳು ಹಾಗೂ ಪುಣ್ಯತಿಥಿಗಳನ್ನು ಒಳಗೊಂಡ ಸರ್ಕಾರಿ ರಜೆ ದಿನಗಳನ್ನು ರದ್ದುಗೊಳಿಸಿತ್ತು. ಅದೇ ನೆಡೆಯನ್ನು ದೆಹಲಿ ಸರ್ಕಾರ ಅನುಸರಿಸಿದ್ದು, ಜನ್ಮ ದಿನಾಚರಣೆಗಳು ಹಾಗೂ ಪುಣ್ಯತಿಥಿಗಳನ್ನು ಒಳಗೊಂಡ ಸರ್ಕಾರಿ ರಜಾ ದಿನಗಳನ್ನು ರದ್ದುಪಡಿಸಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ತಿಳಿಸಿದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ'ಉತ್ತರ ಪ್ರದೇಶ ಕೆಲವು ಸರ್ಕಾರ ಸರ್ಕಾರಿ ರಜೆ ದಿನಗಳನ್ನು ರದ್ದುಪಡಿಸಿರುವುದು ಆಡಳಿತ ಪ್ರಕ್ರಿಯೆಯ ಉತ್ತಮ ಆರಂಭವಾಗಿದ್ದು, ನಾವು ಸಹ ಅವರಿಂದ ಇಂತಹ ಕೆಲವು ನಿರ್ಧಾರಗಳನ್ನು ಅನುಸರಿಸಿ ಜಾರಿಗೊಳಿಸಲಿದ್ದೇವೆ' ಎಂದು ಟ್ವೀಟ್ ಮಾಡಿದ್ದು, ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರಿಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ' ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ವಾಲ್ಮಿಕಿ ಜಯಂತಿ ಹಾಗೂ ಮಿಲಾದ್ ಉನ್ ನಬಿ ಚಾತ್ ಅವರ ಜನ್ಮ ದಿನಾಚರಣೆ ಒಳಗೊಂಡು ಒಟ್ಟು 15 ರಜೆ ದಿನಗಳನ್ನು ರದ್ದು ಪಡಿಸಿತ್ತು. ಬಹುತೇಕ ರಜಾ ದಿನಗಳು ಬಿಎಸ್ಪಿ ಹಾಗೀ ಎಸ್ಪಿ ಸರ್ಕಾರ ಘೋಷಿಸಿದ ರಜಾದಿನಾಗಳಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.