ರಕ್ಷಣಾ ವಲಯ ಅನುದಾನದಲ್ಲಿ ಸುಮಾರು ಶೇ.10 ಏರಿಕೆ

By Suvarna Web DeskFirst Published Feb 1, 2017, 12:00 PM IST
Highlights

ಸೇನಾ ಸಿಬ್ಬಂದಿಗಳ ಪಿಂಚಣಿ ವಿತರಣೆ ವ್ಯವಸ್ಥೆಯಲ್ಲಿರುವ ಅಡಚಚಣೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವೆಬ್ ಆಧಾರಿತ ಸೇವೆ ಹಾಗೂ ಸೇನಾ ಸಿಬ್ಬಂದಿಗಳಿಗೆ ಕೇಂದ್ರೀಕೃತ ಟಿಕೆಟ್ ಬುಕಿಂಗ್  ವ್ಯವಸ್ಥೆಯನ್ನು ಆರಂಭಿಸುವುದಾಗಿ ಜೇಟ್ಲಿ ಈ ಬಜೆಟ್'ನಲ್ಲಿ ಘೋಷಿಸಿದ್ದಾರೆ.

ನವದೆಹಲಿ (ಫೆ.01):  ಈ ಬಾರಿಯ ಬಜೆಟ್'ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ರೂ. 2,74,114 ಕೋಟಿ ರೂಪಾಯಿಗಳನ್ನು ಮೀಸಲಾಗಿಟ್ಟಿದ್ದಾರೆ. ಕಳೆದ ಬಾರಿಗೆ ಹೋಲಿಸಿದಾಗ ಈ ಬಾರಿಯ ಅನುದಾನದಲ್ಲಿ ಶೇ.9.5 ಹೆಚ್ಚಳವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಪಿಂಚಣಿ ಈ ಮೊತ್ತದಲ್ಲಿ ಒಳಗೊಂಡಿಲ್ಲ.

ಹೊಸದಾದ ಖರೀದಿಗಳಿಗೆ ಕಳೆದ ಬಾರಿಯ ಮೊತ್ತದಲ್ಲಿ ಶೇ.10 ರಷ್ಟು ಏರಿಕೆ ಮಾಡಲಾಗಿದೆ. ಕಳೆದ ಬಾರಿ 78586 ಕೋಟಿ ಮೀಸಲಾಗಿಟ್ಟಿದ್ದರೆ ಈ ಬಾರಿ ಒಟ್ಟು ಅನುದಾನದ ಪೈಕಿ ರೂ.86488 ಕೋಟಿಯು ಮೀಸಲಿಡಲಾಗಿದೆ.

ಕಳೆದ ಬಾರಿ ರಕ್ಷಣಾ ವಲಯಕ್ಕೆ 2,49,099 ಕೋಟಿ ರೂ.ಗಳನ್ನು ನೀಡಲಾಗಿತ್ತು.

click me!