ಪ್ಯಾನ್‌'ಗೆ ಆಧಾರ್ ಲಿಂಕ್ ಗಡುವು ವಿಸ್ತರಣೆ

Published : Aug 31, 2017, 08:07 AM ISTUpdated : Apr 11, 2018, 12:36 PM IST
ಪ್ಯಾನ್‌'ಗೆ ಆಧಾರ್ ಲಿಂಕ್ ಗಡುವು ವಿಸ್ತರಣೆ

ಸಾರಾಂಶ

ಸರಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯ ಮಾಡುವ ಅವಧಿಯನ್ನು ಡಿಸೆಂಬರ್‌ 31ರವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸುಪ್ರೀಂಕೋ'ರ್ಟ್‍ಗೆ ಮಾಹಿತಿ ನೀಡಿದ್ದು ಆಧಾರ್ ಗಡುವನ್ನು ಡಿಸೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗಿದೆ.

ನವದೆಹಲಿ(ಆ.31): ಸರಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯ ಮಾಡುವ ಅವಧಿಯನ್ನು ಡಿಸೆಂಬರ್‌ 31ರವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸುಪ್ರೀಂಕೋ'ರ್ಟ್‍ಗೆ ಮಾಹಿತಿ ನೀಡಿದ್ದು ಆಧಾರ್ ಗಡುವನ್ನು ಡಿಸೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗಿದೆ.

ಇನ್ನು ಪ್ಯಾನ್‌'ಗೆ ಆಧಾರ್ ಲಿಂಕ್ ಮಾಡಲು ಆಗಸ್ಟ್ 31 ಕೊನೆಯ ದಿನಾಂಕ ಎಂದು ತಿಳಿಸಲಾಗಿತ್ತು. ಆದ್ರೆ ಆಧಾರ್ ಕಡ್ಡಾಯ ಕುರಿತ ಪರ ಮತ್ತು ವಿರೋಧ ಅಭಿಪ್ರಾಯಗಳು ಕೇಳಿ ಬಂದಿದ್ದು ಈ ಕುರಿತು ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ನವೆಂಬರ್​ನಲ್ಲಿ ವಿಚಾರಣೆ ನಡೆಯಲಿದೆ. ಹೀಗಾಗಿ ಡಿಸೆಂಬರ್‌ 31ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

 * www.incometaxindiaefiling.gov.in ಪೋರ್ಟಲ್‍ಗೆ ಹೋಗಿ

*  ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಲಾಗಿನ್ ಆಗಿ

* ಆಧಾರ್ ನಂಬರ್ ಲಿಂಕ್ ಮಾಡಲು ಪಾಪ್ ಅಪ್ ಸ್ಕ್ರೀನ್ ತೆರೆದುಕೊಳ್ಳುತ್ತೆ 

* ಆಧಾರ್ ನಂಬರ್ ನಮೂದಿಸುವ ಮುನ್ನ ಹೆಸರು, ಜನ್ಮ ದಿನಾಂಕ ನಮೂದಿಸಿ

* ಆದಾಯ ತೆರಿಗೆ ಇಲಾಖೆ ನಿಮ್ಮ ಎಲ್ಲಾ ವಿವರಗಳನ್ನು ಮೌಲ್ಯೀಕರಿಸುತ್ತದೆ

* ಎಲ್ಲಾ ಅಂಶಗಳ ಪರಿಶೀಲನೆ ಬಳಿಕ ನಿಮ್ಮ ನಂಬರ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ

* ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಆಧಾರ್ ನಂಬರ್ ಪ್ಯಾನ್ ನೊಂದಿಗೆ ಸಂಪರ್ಕಿಸಲಾಗುತ್ತದೆ 

* ಪಾನ್ ಕಾರ್ಡ್ ಗೆ ನೀಡಿದ ಮಾಹಿತಿ ಮತ್ತು ಆಧಾರ್ ಕಾರ್ಡ್ ಪಡೆಯುವ ವೇಳೆ ನೀಡಿದ ಮಾಹಿತಿ ಸರಿಯಾಗಿ ಇಲ್ಲದಿದ್ದರೆ ಜೋಡಣೆ ಪ್ರಕ್ರಿಯೆ ಯಶಸ್ವಿಯಾಗುವುದಿಲ್ಲ

* ವಿಶೇಷವಾಗಿ ಹೆಸರು ತಪ್ಪಾಗಿ ಮುದ್ರಣವಾಗಿದ್ದರೆ, ಇನ್ಶಿಯಲ್ ಸರಿಯಾಗಿ ಹೊಂದಾಣಿಕೆ ಆಗದೇ ಇದ್ದರೆ ಪಾನ್ ಕಾರ್ಡಿಗೆ ಆಧಾರ್ ಜೋಡಣೆಯಾಗುವುದಿಲ್ಲ.

* ಆಧಾರ್ ನಂಬರ್ ಪಾನ್‍ನೊಂದಿಗೆ ಸಂಯೋಜಿಸದಿದ್ದರೆ ಪಾನ್‍ಕಾರ್ಡ್ ರದ್ದು 

* ಪಾನ್ ಕಾರ್ಡ್ ಅನೂರ್ಜಿತಗೊಳಿಸಿ 50 ಸಾವಿರ ದಂಡ ವಿಧಿಸುವ ಸಾಧ್ಯತೆ

* ಆಧಾರ್ ಲಿಂಕ್ ಆಗದಿದ್ದರೇ ದೊಡ್ಡ ಹಣಕಾಸು ವಹಿವಾಟು ನಡೆಸುವುದು ಅಸಾಧ್ಯ

* ಬ್ಯಾಂಕ್ ಖಾತೆ ತೆರೆಯಲು, ತೆರಿಗೆ ರಿಟನ್ಸ್ ಸಲ್ಲಿಕೆ ವೇಳೆ ತೊಂದರೆಯಾಗುತ್ತೆ

* ತೆರಿಗೆ ಸೇರಿ ಹಲವು ಕಾರ್ಯಗಳು ಸರಾಗವಾಗಲಿವೆ

* ಎಲ್ಲ ವ್ಯವಹಾರಕ್ಕೂ ಪಕ್ಕಾ ಲೆಕ್ಕ ಸಿಗಲಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಒಂದು-ಎರಡು ಬಣಗಳೆರಡು..' ಹಾಡಿನ ಮೂಲಕ ಸರ್ಕಾರದ ಕಾಲೆಳೆದ ಅಭಯ್ ಪಾಟೀಲ್
ಎರಡು ತಿಂಗಳು ಇಂಟರ್ನ್‌ಶಿಪ್ ಮಾಡುವವರಿಗೆ 4 ಲಕ್ಷ ಸ್ಟೈಫಂಡ್ ಕೊಡುತ್ತದೆ ಈ ಕಾಲೇಜು