ಮರಣ ದಂಡನೆ ರದ್ದತಿ ಪರ ಕರ್ನಾಟಕ ಬ್ಯಾಟಿಂಗ್‌

By Suvarna Web DeskFirst Published Mar 13, 2018, 10:33 AM IST
Highlights

ನ್ಯಾ.ಎ.ಪಿ.ಶಾ ನೇತೃತ್ವದ ಕಾನೂನು ಆಯೋಗವು, 2015ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ತನ್ನ ವರದಿಯಲ್ಲಿ ಭಯೋತ್ಪಾದನೆ ಮತ್ತು ದೇಶದ ವಿರುದ್ಧ ಸಮರ ಸಾರುವವರು ಹೊರತುಪಡಿಸಿ ಉಳಿದ ಯಾವುದೇ ಪ್ರಕರಣದ ದೋಷಿಗಳಿಗೂ ಮರಣದಂಡನೆ ವಿಧಿಸಬಾರದು. ಇಂಥ ಪದ್ದತಿ ಕೈಬಿಡಬೇಕೆಂದು ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯ ಕೋರಿತ್ತು.

ನವದೆಹಲಿ(ಮಾ.13): ಮರಣ ದಂಡನೆ ಶಿಕ್ಷೆ ನಿಷೇಧಿಸುವ ಕುರಿತ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಕರ್ನಾಟಕ ಬೆಂಬಲ ವ್ಯಕ್ತಪಡಿಸಿದೆ. ಆದರೆ ಕೇಂದ್ರಕ್ಕೆ ಹೀಗೆ ತಮ್ಮ ಅಭಿಪ್ರಾಯ ಸಲ್ಲಿಕೆ ಮಾಡಿರುವ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ 12 ರಾಜ್ಯಗಳು ಮರಣದಂಡನೆ ವಿಧಿಸುವ ಪದ್ದತಿ ಉಳಿಸಿಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿವೆ.

ನ್ಯಾ.ಎ.ಪಿ.ಶಾ ನೇತೃತ್ವದ ಕಾನೂನು ಆಯೋಗವು, 2015ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ತನ್ನ ವರದಿಯಲ್ಲಿ ಭಯೋತ್ಪಾದನೆ ಮತ್ತು ದೇಶದ ವಿರುದ್ಧ ಸಮರ ಸಾರುವವರು ಹೊರತುಪಡಿಸಿ ಉಳಿದ ಯಾವುದೇ ಪ್ರಕರಣದ ದೋಷಿಗಳಿಗೂ ಮರಣದಂಡನೆ ವಿಧಿಸಬಾರದು. ಇಂಥ ಪದ್ದತಿ ಕೈಬಿಡಬೇಕೆಂದು ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯ ಕೋರಿತ್ತು.

ಈ ಕೋರಿಕೆ ಸಂಬಂಧ ಇದುವರೆಗೆ 14 ರಾಜ್ಯಗಳು ಮಾತ್ರವೇ ಕೇಂದ್ರಕ್ಕೆ ಉತ್ತರ ನೀಡಿವೆ. ಈ ಪೈಕಿ ಗುಜರಾತ್‌, ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನ, ಬಿಹಾರ, ಜಾರ್ಖಂಡ್‌, ತಮಿಳುನಾಡು ಮತ್ತು ದೆಹಲಿ ರಾಜ್ಯಗಳು ಮರಣ ದಂಡನೆ ಉಳಿಯಬೇಕೆಂದು ಪ್ರತಿಪಾದಿಸಿವೆ. ಮರಣ ದಂಡನೆಯಿರುವುದರಿಂದ, ಕೊಲೆ ಮತ್ತು ಅತ್ಯಾಚಾರದಂತಹ ಪ್ರಕರಣಗಳಿಗೆ ತಡೆಯೊಡ್ಡಬಹುದು ಎಂದು 12 ರಾಜ್ಯಗಳು ಪ್ರತಿಪಾದಿಸಿವೆ. ಆದರೆ ಕರ್ನಾಟಕ ಮತ್ತು ತ್ರಿಪುರ ರಾಜ್ಯಗಳ ಶಿಕ್ಷೆ ಪ್ರಕಟಿಸುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ಆದರೆ ತ್ರಿಪುರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಆ ರಾಜ್ಯದ ಅಭಿಪ್ರಾಯ ಬದಲಾಗಬಹುದು ಎಂಬ ವಾದವೂ ಇದೆ.

click me!