ಭಾರತದಲ್ಲಿ ಬೀಸಲಿದೆ ಭಾರಿ ಬಿಸಿ ಗಾಳಿ : ಏನಿದರ ಪರಿಣಾಮ?

By Web DeskFirst Published Oct 8, 2018, 1:58 PM IST
Highlights

ಇಷ್ಟು ದಿನಗಳ ಕಾಲ ಭಾರೀ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ ಭಾರತಕ್ಕೆ ಇದೀಗ ಮತ್ತೊಂದು ಆತಂಕ ಎದುರಾಗಿದೆ. ಭಾರೀ ಬಿಸಿ ಗಾಳಿ ದೇಶದಲ್ಲಿ ಬೀಸಲಿದೆ ಎಂದು ಹವಾಮಾನ ಬದಲಾವಣೆ ವರದಿಯೊಂದು ಎಚ್ಚರಿಕೆ ನೀಡಿದೆ. 

ನವದೆಹಲಿ : ಭಾರತದಲ್ಲಿ ಭಾರೀ ಹವಾಮಾನ ವೈಪರೀತ್ಯ ಸಂಭವಿಸಲಿದ್ದು, ಬಿಸಿ ಗಾಳಿ ಬೀಸಲಿದೆ ಎಂದು ವರದಿಯೊಂದು ಹೇಳಿದೆ. 

ಕಳೆದ 2015ನೇ ಇಸವಿಯಲ್ಲಿಯೂ ಕೂಡ ದೇಶದಲ್ಲಿ ಬಿಸಿ ಗಾಳಿ ಬೀಸಿ 2500 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಬಾರಿಯೂ ಕೂಡ ಅದೇ ರೀತಿ ಭಾರತದಲ್ಲಿ ಬಿಸಿ ಮಾರುತಗಳು ಅಪ್ಪಳಿಸಲಿವೆ ಎಂದು ಎಚ್ಚರಿಕೆ ನೀಡಲಾಗಿದೆ.   

ಇಂಟರ್ ಗವರ್ನಮೆಂಟಲ್ ಪ್ಯಾನಲ್ ಕ್ಲೈಮೇಟ್ ಚೇಂಜ್ ಈ ಬಗ್ಗೆ ವರದಿಯನ್ನು ನೀಡಿದೆ. 

ಸೋಮವಾರ ಈ ಬಗ್ಗೆ ವರದಿಯನ್ನು ಬಿಡುಗಡೆ ಮಾಡಲಾಗಿದ್ದು  ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಇನ್ನು ಇದೇ ವೇಳೆ ಸರ್ಕಾರ ಪ್ಯಾರೀಸ್ ಒಪ್ಪಂದದ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುತ್ತಿದೆ. 

ಶೇ.2 ಡಿಗ್ರಿಯಷ್ಟು ತಾಪಮಾನವು ಹೆಚ್ಚಳವಾಗಿ ಸಮಸ್ಯೆ ಉಂಟು ಮಾಡುವ ಸಾಧ್ಯತೆಗಳಿದೆ ಎಂದು ಹೇಳಲಾಗಿದೆ. 

ತಾಪಮಾನ ಏರಿಕೆಯು ಎಚ್ಚರಿಕೆಯ ಕರೆಗಂಟೆಯಾಗಿದ್ದು  ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದಲ್ಲಿ 2030ರ ವೇಳೆ ಬದುಕಲು ಅಸಾಧ್ಯವಾಗುವಷ್ಟು ತಾಪಮಾನವು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 

ಇನ್ನು ಐಪಿಸಿಸಿ ಪ್ರಮುಖವಾಗಿ ಭಾರತದ ಪ್ರಮುಖ ನಗಳಿಗೆ ಈ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.

click me!