ಇಂದು ಮಾಜಿ ಸಿಎಂ ಭವಿಷ್ಯನಿರ್ಧಾರ: ಬಿ.ಎಸ್.ಯಡಿಯೂರಪ್ಪ ಸೇಫ್ ಆಗ್ತಾರಾ?

Published : Sep 22, 2017, 08:43 AM ISTUpdated : Apr 11, 2018, 12:56 PM IST
ಇಂದು ಮಾಜಿ ಸಿಎಂ ಭವಿಷ್ಯನಿರ್ಧಾರ: ಬಿ.ಎಸ್.ಯಡಿಯೂರಪ್ಪ ಸೇಫ್ ಆಗ್ತಾರಾ?

ಸಾರಾಂಶ

ಶಿವರಾಮ ಕಾರಂತ್​​ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ  ಸಿಲುಕಿರುವ ಮಾಜಿ ಸಿಎಂ ಬಿ.ಎಸ್​​. ಯಡಿಯೂರಪ್ಪಗೆ ಇಂದು ನಿರ್ಣಾಯಕ ದಿನ. ತನ್ನ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ ಎಫ್​ಐಆರ್​ ರದ್ದು ಕೋರಿ ಸಲ್ಲಿಸಿರುವ ರಿಟ್​ ಅರ್ಜಿಯ ಮಧ್ಯಂತರ ಆದೇಶ ಇಂದು ಹೊರಬೀಳಲಿದೆ.

ಬೆಂಗಳೂರು(ಸೆ.22): ಶಿವರಾಮ ಕಾರಂತ್​​ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ  ಸಿಲುಕಿರುವ ಮಾಜಿ ಸಿಎಂ ಬಿ.ಎಸ್​​. ಯಡಿಯೂರಪ್ಪಗೆ ಇಂದು ನಿರ್ಣಾಯಕ ದಿನ. ತನ್ನ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ ಎಫ್​ಐಆರ್​ ರದ್ದು ಕೋರಿ ಸಲ್ಲಿಸಿರುವ ರಿಟ್​ ಅರ್ಜಿಯ ಮಧ್ಯಂತರ ಆದೇಶ ಇಂದು ಹೊರಬೀಳಲಿದೆ.

 257 ಎಕರೆ ಭೂಮಿಯನ್ನ ಡಿನೋಟಿಫಿಕೇಷನ್​ ಆರೋಪ ಎದುರಿಸುತ್ತಿದ್ದು, ಬಿಎಸ್​ವೈ ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ ಎಂದು ಎಸಿಬಿ ಹೈಕೋರ್ಟ್​​ನಲ್ಲಿ ವಾದಿಸಿದೆ. ಆದರೆ, ಯಡಿಯೂರಪ್ಪ ಪರ ವಕೀಲರು ಬಿಎಸ್​ವೈ ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ್ದಾರೆ. ಸತತ ಎರಡು ವಾರಗಳ ಕಾಲ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್​ ಇಂದು ಮಧ್ಯಂತರ ಅರ್ಜಿಯ ಆದೇಶ ಪ್ರಕಟಿಸಲಿದೆ.

ಈ ಮಧ್ಯೆ ಎಸಿಬಿ‌ ಅಧಿಕಾರಿಗಳು ತಡರಾತ್ರಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿದ್ದಾರೆ. ತೀರ್ಪು  ಪರವಾಗಿ ಬಂದ್ರೆ ಕೂಡಲೇ‌ ನೋಟಿಸ್ ಜಾರಿ ಮಾಡಿ ವಿಚಾರಣೆ ಗೆ ಹಾಜರಾಗುವಂತೆ ಸೂಚಿಸಬೇಕೆ ಬೇಡ ವಿಚಾರ, ಒಂದು ವೇಳೆ ವಿರುದ್ದವಾಗಿ ಬಂದ್ರೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಚಿಂತನೆ ಬಗ್ಗೆ ಗೃಹ ಸಚಿವರು ಮತ್ತು‌ ಮುಖ್ಯಮಂತ್ರಿಗಳ ಬಳಿ ಚರ್ಚೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?
ತಪ್ಪು ಮಾಹಿತಿ ಕೊಟ್ಟಿದ್ರೆ ಹೆಬ್ಬಾಳ್ಕರ್‌ ವಿರುದ್ಧ ಹಕ್ಯುಚ್ಯುತಿ ಮಂಡಿಸಿ: ಡಿ.ಕೆ.ಶಿವಕುಮಾರ್‌